ಪರಿನಿರ್ವಾಣ ದಿನದ ಸರ್ಕಾರಿ ರಜೆ ರದ್ದು ಮಾಡಿದ ಯುಪಿ ಸರ್ಕಾರ

Posted By: Gururaj
Subscribe to Oneindia Kannada

ಲಕ್ನೋ, ಡಿಸೆಂಬರ್ 06 : ಉತ್ತರ ಪ್ರದೇಶ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಹಿನ್ನೆಲೆಯಲ್ಲಿ ಇದ್ದ ಸರ್ಕಾರಿ ರಜೆಯನ್ನು ರದ್ದುಗೊಳಿಸಿದೆ. ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ 16 ಸರ್ಕಾರಿ ರಜೆಯನ್ನು ರದ್ದುಮಾಡಿದೆ.

100 ದಿನ ಪೂರೈಸಿದ ಯೋಗಿ ಸರ್ಕಾರ ಸಾಧನೆಗಳೇನು?

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಆಡಳಿತವಿದ್ದಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿತ್ತು. ಸಮಾಜವಾದಿ ಪಕ್ಷದ ಸರ್ಕಾರ 2012ರಲ್ಲಿ ಆಡಳಿತಕ್ಕೆ ಬಂದಾಗ ಈ ನಿರ್ಧಾರವನ್ನು ವಾಪಸ್ ಪಡೆಯಲಾಗಿತ್ತು.

2018ನೇ ಸಾಲಿನ ಕರ್ನಾಟಕ ಸರ್ಕಾರಿ ರಜಾ ದಿನಗಳ ಪಟ್ಟಿ

Ambedkar death anniversary : Yogi Adityanath govt cancels public holiday

2015ರಲ್ಲಿ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಪುನಃ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನಕ್ಕೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿತ್ತು. ಈಗ ಅದನ್ನು ಯೋಗಿ ಆದಿತ್ಯನಾಥ್ ಸರ್ಕಾರ ರದ್ದು ಮಾಡಿದೆ.

ಮಹಾಪುರುಷರ ಜಯಂತಿಗೆ ಶಾಲೆಗಿಲ್ಲ ರಜಾ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸರ್ಕಾರ ರದ್ದು ಮಾಡಿರುವ ರಜೆಗಳ ಪಟ್ಟಿ

* ಮಹರ್ಷಿ ಕಾಶ್ಯಪ ಮತ್ತು ಮಹಾರಾಜ ಗುಹ ಜಯಂತಿ - ಏಪ್ರಿಲ್ 5
* ಚಂದ್ರಶೇಖರ ಜಯಂತಿ - 14 ಏಪ್ರಿಲ್
* ಪರುಶರಾಮ ಜಯಂತಿ - 28 ಏಪ್ರಿಲ್
* ಲೋಕನಾಯಕ ಮಹಾರಾಣ ಪ್ರತಾಪ್ ಜಯಂತಿ - ಮೇ 9
* ಜಮಾತ್ ಉಲ್-ವಿದಾ (ರಂಜಾನ್ ಕಡೆಯ ದಿನ) - ಜೂನ್ 23
* ವಿಶ್ವಕರ್ಮ ಪೂಜಾ - ಸೆಪ್ಟೆಂಬರ್ 17
* ಮಹಾರಾಜ ಅಗ್ರಸೇನ ಜಯಂತಿ - ಸೆಪ್ಟೆಂಬರ್ 21
* ಮಹಾಋಷಿ ವಾಲ್ಮೀಕಿ ಜಯಂತಿ - ಸೆಪ್ಟೆಂಬರ್ 5
* ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಆಚಾರ್ಯ ನರೇಂದ್ರ ದೇವ ಜಯಂತಿ - ಅಕ್ಟೋಬರ್ 31
* ಚೌಧರಿ ಚರಂಗ್ ಸಿಂಗ್ ಜಯಂತಿ - ಡಿಸೆಂಬರ್ 23

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttar Pradesh government has scrapped the public holiday marking the death anniversary of Architect of the Indian Constitution Dr. Bhimrao Ambedkar on December 6.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ