ದಾಳಿಕೋರರನ್ನು ಶೀಘ್ರದಲ್ಲೇ ಬಂಧಿಸುವೆವು: ಕಾಶ್ಮೀರ ಸಿಎಂ ಮುಫ್ತಿ

Posted By:
Subscribe to Oneindia Kannada

ಅನಂತನಾಗ್, ಜುಲೈ 10: ಅಮರ್ ನಾಥ್ ಯಾತ್ರಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ವಿರುದ್ಧ ಉಗ್ರ ಕಾರ್ಯಾಚರಣೆಯನ್ನು ನಡೆಸಿ ಅವರನ್ನು ಕೆಲವೇ ದಿನಗಳಲ್ಲಿ ಬಂಧಿಸುವೆವು ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗುಡುಗಿದ್ದಾರೆ.

ಅನಂತನಾಗ್ ಜಿಲ್ಲೆಯ ಬಳಿಯ ಅಮರ್ ನಾಥ್ ಯಾತ್ರೆಗೆ ಸಾಗುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆದು ಅದರಲ್ಲಿ 7 ಜನ ಸಾವಿಗೀಡಾಗಿದ್ದಾರೆ ಹಾಗೂ ಹಲವಾರು ಜನರು ಗಾಯಗೊಂಡಿದ್ದಾರೆ.

ಅಮರ್ ನಾಥ್ ಯಾತ್ರಾರ್ಥಿಗಳ ಬಗ್ಗೆ ವಿಚಾರಿಸಲು ಹೆಲ್ಪ್ ಲೈನ್ ಸಂಖ್ಯೆಗಳು

ಗಾಯಗೊಂಡವರನ್ನು ಅನಂತನಾಗ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಸೋಮವಾರ ರಾತ್ರಿ ಮುಫ್ತಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಮಾತನಾಡಿಸಿದರು. ಅಲ್ಲದೆ, ವೈದ್ಯರು, ಅಧಿಕಾರಿಗಳನ್ನು ಭೇಟಿ ಮಾಡಿ ವಿವರಗಳನ್ನು ಪಡೆದುಕೊಂಡರು.

ಯಾತ್ರಾರ್ಥಿಗಳ ಮೇಲೆ ದಾಳಿ: ಕಂಬನಿ ಮಿಡಿದ ಬಾಲಿವುಡ್, ಕ್ರಿಕೆಟ್ ಲೋಕ

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಫ್ತಿ, ''ಈ ಕುಕೃತ್ಯಗಳನ್ನು ಮಾಡಿದವರು ಯಾರೇ ಇರಲಿ ಅವರನ್ನು ಹಿಡಿದು ಶಿಕ್ಷಿಸುತ್ತೇವೆ'' ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jammu and Kashmir Chief Minister Mehbooba Mufti visits Ananthnag District hospital and expressed her console to the victims who were attacked by terrorists while travelling as Amarnath Yatra pilgrims.
Please Wait while comments are loading...