ಜಮ್ಮು: ಅಮರನಾಥ ಯಾತ್ರೆಗೆ ತೆರಳಿರುವ ಕನ್ನಡಿಗರಿಗೆ ಸಂಕಷ್ಟ

Posted By:
Subscribe to Oneindia Kannada

ಶ್ರೀನಗರ, ಜುಲೈ 10: ಹಿಝ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಕಾಶ್ಮೀರಿ ಯುವಕರನ್ನುಅ ಸೇರಿಸುತ್ತಿದ್ದ 22 ವರ್ಷದ ಬುರ್ಹಾನ್ ವಾನಿ ಹತ್ಯೆ ಬಳಿಕ ಕಣಿವೆ ರಾಜ್ಯ ಪ್ರಕ್ಷುಬ್ಧಗೊಂಡಿದೆ. ಜಮ್ಮುವಿನಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಎರಡನೇ ದಿನವೂ ಕೂಡಾ ಅಮರನಾಥ್ ಯಾತ್ರೆ ರದ್ದುಗೊಳಿಸಲಾಗಿದೆ.

ಶ್ರೀನಗರ, ಅನಂತ್ ನಾಗ್ ಜಿಲ್ಲೆ, ಅಮರನಾಥ್ ಯಾತ್ರೆ ಬೇಸ್ ಕ್ಯಾಂಪ್ ಬಳಿ ತುರ್ತು ಪ್ರಹಾರ ದಳ, ಅಶ್ರುವಾಯು ದಳ, ಸಿಆರ್ ಪಿಎಫ್ ಯೋಧರು, ಅರೆಸೇನಾ ಯೋಧರ ಪಡೆ ಗಸ್ತು ತಿರುಗುತ್ತಿದ್ದಾರೆ.[ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಹತ್ಯೆ]

Amarnath Yatra remains suspended for 2nd day

ಭಾಗ್ವತಿ ನಗರ ಯಾತ್ರಿ ನಿವಾಸ್ ನಿಂದ ಕಾಶ್ಮೀರ ಕಣಿವೆ ಕಡೆಗೆ ಅಥವಾ ಅಲ್ಲಿಂದ ಜಮ್ಮುವಿನ ಕಡೆಗೆ ಯಾರಿಗೂ ಪ್ರವೇಶ ಅನುಮತಿ ನೀಡಿಲ್ಲ.
ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಮೊಬೈಲ್ ನೆಟ್ ವರ್ಕ್ ಸೇವೆ ಕೂಡ ಸ್ಥಗಿತವಾಗಿದೆ. ಹೀಗಾಗಿ ಅಮರನಾಥ್ ಯಾತ್ರೆಗಳಿಗೆ ಭಾರಿ ತೊಂದರೆಯಾಗಿದೆ.

Amarnath Yatra remains suspended for 2nd day

ಕನ್ನಡಿಗರ ಪರದಾಟ: ಕಳೆದ ಮೂರು ದಿನಗಳಿಂದ ಬಾಲ್ಟೊರ್ ಬೇಸ್ ಕ್ಯಾಂಪ್ ನಲ್ಲಿರುವ ಸುಮಾರು 150 ಕ್ಕೂ ಹೆಚ್ಚು ಕರ್ನಾಟಕ ಮೂಲದ ಯಾತ್ರಿಗಳು ಆತಂಕದಲ್ಲಿದ್ದಾರೆ. ಅಮರನಾಥ ಯಾತ್ರೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.[ಅಮರನಾಥ ಯಾತ್ರೆಗೆ ಉಗ್ರರ ದಾಳಿ ಭೀತಿ: ಬಿಎಸ್ ಎಫ್]


ಮುಂಜಾಗ್ರತಾ ಕ್ರಮವಾಗಿ ರೈಲು ಸೇವೆಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಬಿಟ್ಟರೆ ಇಲ್ಲಿಂದ ಯಾವಾಗ ಮುಕ್ತಿ ಎಂಬುದು ತಿಳಿಯುತ್ತಿಲ್ಲ ಎಂದು ಕರ್ನಾಟಕದ ಯಾತ್ರಿ ಯೋಗಿರಾಜ್ ಅವರು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಗೋಳು ತೋಡಿಕೊಂಡರು.

ಎಲ್ಲರಿಗೂ ಬೇಸ್ ಕ್ಯಾಂಪ್ ನಲ್ಲಿ ಉಳಿದುಕೊಳ್ಳಲು ಅವಕಾಶ ದೊರೆತಿದೆ. ಆದರೆ, ಔಷಧ, ಊಟ ಸರಿಯಾಗಿ ಸಿಗದೆ ಪರದಾಡುವಂತಾಗಿದೆ. ಭಾನುವಾರದಂದು ಇಂಟರ್ನೆಟ್ ಸೌಲಭ್ಯವನ್ನು ನೀಡುವ ಭರವಸೆಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Amarnath Yatra remained suspended for the second day on Sunday as no pilgrim was allowed to move from Jammu to Kashmir Valley, officials said.More than 150 Kanandigas are in Base Camp and seeking medical assistance.
Please Wait while comments are loading...