Rain Alert: ಭಾರೀ ಮಳೆಗೆ ರಸ್ತೆಗಳು ಜಲಾವೃತ, ಹೈದರಾಬಾದ್ ಬಳಿಕ ಈ ನಗರಗಳಲ್ಲಿ ಪ್ರವಾಹ: Video

Rain Alert: ಹವಾಮಾನದಲ್ಲಿನ ಬದಲಾವಣೆಯಿಂದಾಗಿ ಆಂಧ್ರ ಪ್ರದೇಶ ಹಾಗೂ ವಿಜಯವಾಡದಲ್ಲಿ ಭಾರಿ ಮಳೆ ಆಗಿದೆ. ಕಳೆದ ಕೆಲವು ವಾರಗಳ ಹಿಂದೆ ಮೇಲ್ಸೇತುವೆ ಮೇಲೆ ಮಳೆ ನೀರು ನಿಂತು ವಾಹನಗಳಿಗೆ ಸಮಸ್ಯೆ ಉಂಟಾಗಿದೆ. ಅಲ್ಲಿನ ಪ್ರವಾಹ ಸುದ್ದಿ ದೇಶವ್ಯಾಪಿ ಸುದ್ದಿಯಾಗಿತ್ತು. ಇದೀಗ ವಿಜಯವಾಡದಲ್ಲಿ ಅಂಥದ್ದೇ ಸ್ಥಿತಿ ಉಂಟಾಗಿದೆ. ಅಡಿಗಳಷ್ಟು ನೀರು ರಸ್ತೆ ಮೇಲೆ ನಿಂತಿದ್ದು, ಅದರಲ್ಲಿಯೇ ವಾಹನಗಳು ಸಂಚಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಬಂಗಾಳಕೊಲ್ಲಿಯ ಪಶ್ಚಿಮ-ಮಧ್ಯ ಮತ್ತು ಅದಕ್ಕೆ ಹೊಂದಿಕೊಂಡಿರುವ ವಾಯುವ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ. ಬುಧವಾರ (ಆಗಸ್ಟ್ 13) ಮತ್ತಷ್ಟು ಮಳೆ ಉಂಟಾಗುವ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆ ಪೈಕಿ ಮಂಗಳವಾರ ವ್ಯಾಪಕ ಮಳೆ ಆಗಿದೆ. ಇದರಿಂದ ಪ್ರಮುಖ ರಸ್ತೆಗಳೇ ಜಲಾವೃತಗೊಂಡಿವೆ. ನಂದ್ಯಾಲ್, ಪ್ರಕಾಶಂ, ಪಲ್ನಾಡು, ಬಾಪಟ್ಲಾ, ಗುಂಟೂರು, ಕೃಷ್ಣ, ಎನ್‌ಟಿಆರ್, ಪಶ್ಚಿಮ ಗೋದಾವರಿ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆ ಆಗಿದ್ದರಿಂದ ಸಂಚಾರ, ಜನ ಜೀವನ ಅಸ್ತವ್ಯಸ್ಥವಾಗಿದೆ. ವಿಧಿ ಇಲ್ಲದೇ ಭಯದಲ್ಲೇ ಕೆರೆಯಂತಾದ ರಸ್ತೆಗಳಲ್ಲಿ ಜೀವ ಕೈಲಿ ಹಿಡಿದು ವಾಹನಗಳು ಓಡಾಡಿವೆ.

Amaravathi Guntur and Vijayawada Region Received Very Heavy Rain Last Night Flood Issues

ಅಮರಾವತಿ, ಗುಂಟೂರು-ವಿಜಯವಾಡ ಪ್ರದೇಶದಲ್ಲಿ ರಾತ್ರಿಯಿಡೀ ಭಾರೀ ಮಳೆ ಆಗಿದೆ. ದುಗ್ಗಿರಾಳದಲ್ಲಿ 190 ಮಿ.ಮೀ, ತಲ್ಲೂರು 167 ಮಿ.ಮೀ, ಅಮರಾವತಿ 166 ಮಿ.ಮೀ, ಗುಂಟೂರು ಇಎಸ್‌ಐ ಆಸ್ಪತ್ರೆ 160 ಮಿ.ಮೀ, ಪೆಡಕಾಕನಿ 157 ಮಿ.ಮೀ. ಹಾಗೂ ಎಸ್‌ಆರ್‌ಎಂ ವಿಶ್ವವಿದ್ಯಾಲಯ (ಮಂಗಳಗಿರಿ) 138 ಮಿ.ಮೀಟರ್ ಮಳೆ ದಾಖಲಾಗಿದೆ. ಇನ್ನೂ ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗ್ಗೆ ವರೆಗೆ ಇಲ್ಲಿನ ಪಾರ್ವತಿಪುರಂ ಮಾನ್ಯಂ, ಬಾಪಟ್ಲ, ಪಲ್ನಾಡು, ಅನ್ನಮಯ್ಯ ಜಿಲ್ಲೆಗಳಲ್ಲಿ ಭಾರಿ ಮಳೆ ದಾಖಲಾಗಿದೆ. ಕೊಮರಡದಲ್ಲಿ ರಾಜ್ಯದ ಅತಿ ಹೆಚ್ಚು 10 ಸೆಂ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ನಿರಂತರ ಮಳೆಯಿಂದಾಗಿ ವಿಜಯಪವಾಡ, ಅಮರಾವತಿ, ತಲ್ಲೂರು ಭಾಗದಲ್ಲಿ ಪ್ರವಾಸ ಸ್ಥಿತಿ ನಿರ್ಮಾಣವಾಗಿದೆ. ಬಂಗಾಳಕೊಲ್ಲಿ ಭಾಗದ ಹವಾಮಾನ ವೈಪರೀತ್ಯಗಳಾದ ವಾಯುಭಾರ ಕುಸಿತ ತೀವ್ರಗೊಳ್ಳುವ ಸೂಚನೆ ಇದೆ. ಮುಂದಿನ ಎರಡು ದಿನ 50 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಇದೇ ವಿಜಯವಾಡ, ಅಮರಾವತಿ ಭಾಗಗಳಲ್ಲಿ ಹೆಚ್ಚಿನ ಮಳೆ ಆಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+