ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಬಿಟ್ಟು ಯಾರು ಬೆಸ್ಟ್?
Recommended Video

ಬೆಂಗಳೂರು, ಆಗಸ್ಟ್ 20 : ಲೋಕಸಭೆ ಚುನಾವಣೆಗೆ ವಿವಿಧ ಪಕ್ಷಗಳು ತಯಾರಿ ಆರಂಭಿಸಿವೆ. ಎನ್‌ಡಿಎ ಮೈತ್ರಿಕೂಟದಿಂದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಆಗುವ ಸಾಧ್ಯತೆ ಇದೆ. ಬೇರೆ ಪಕ್ಷದಿಂದ ಯಾರು ಪ್ರಧಾನಿ ಅಭ್ಯರ್ಥಿ?.
ಚುನಾವಣೋತ್ತರ ಸಮೀಕ್ಷೆ ನಡೆಸಿರುವ India Today-Karvy ಪ್ರಧಾನಿ ಹುದ್ದೆಗೆ ಅರ್ಹರು ಯಾರು? ಎಂದು ಜನರ ಅಭಪ್ರಾಯ ಸಂಗ್ರಹಣೆ ಮಾಡಿದೆ. ಸಮೀಕ್ಷೆಯ ವರದಿ ಪ್ರಕಾರ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಸೂಕ್ತ ಎಂದು ಶೇ 49ರಷ್ಟು ಜನರು ಮತ ಹಾಕಿದ್ದಾರೆ.
ನರೇಂದ್ರ ಮೋದಿ ಹೊರತು ಪಡಿಸಿ ಬೇರೆ ಯಾವ ನಾಯಕರು ಪ್ರಧಾನಿಯಾಗಬಹುದು? ಎಂದು ಸಮೀಕ್ಷೆ ನಡೆಸಲಾಗಿದೆ. ವಿವಿಧ ನಾಯಕರು ಪಡೆದ ಮತಗಳ ವಿವರಗಳು ಇಲ್ಲಿವೆ...

ಯಾರಿಗೆ ಎಷ್ಟು ಮತ? : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಶೇ 46ರಷ್ಟು ಮತಗಳು ಬಂದಿವೆ. ಪ್ರಿಯಾಂಕ ಗಾಂಧಿ ಅವರಿಗೆ ಶೇ 6ರಷ್ಟು ಮತ ಬಂದಿದೆ. ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಶೇ 6ರಷ್ಟು ಮತ ಪಡೆದಿದ್ದಾರೆ.
ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶೇ 8ರಷ್ಟು, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಶೇ 4ರಷ್ಟು ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೇ 4ರಷ್ಟು ಮತ ಪಡೆದಿದ್ದಾರೆ.











Click it and Unblock the Notifications