ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಶಾಂತಿ ಪ್ರಶಸ್ತಿಗೆ ಆಲ್ಟ್ ನ್ಯೂಸ್‌ನ ಮೊಹಮ್ಮದ್ ಜುಬೇರ್, ಪ್ರತೀಕ್ ಸಿನ್ಹಾ ಸ್ಪರ್ಧೆ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 5: ಭಾರತದ ಫ್ಯಾಕ್ಟ್‌ ಚೆಕ್ಕರ್‌ ಮತ್ತು ಪರ್ಯಾಯ ಮಾಧ್ಯಮ ವೇದಿಕೆಯ ಸಂಸ್ಥಾಪಕರಾದ ಆಲ್ಟ್ ನ್ಯೂಸ್ ಮೊಹಮ್ಮದ್ ಜುಬೈರ್ ಮತ್ತು ಪ್ರತೀಕ್ ಸಿನ್ಹಾ ಅವರು 2022ರ ನೊಬೆಲ್ ಶಾಂತಿ ಪ್ರಶಸ್ತಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಸ್ಪರ್ಧೆಯಲ್ಲಿರುವವರ ಪಟ್ಟಿಯ ಪ್ರಕಾರ, ನಾರ್ವೇಜಿಯನ್ ತೀರ್ಪುಗಾರರ ಮೂಲಕ ನಾಮನಿರ್ದೇಶನಗಳು, ಬುಕ್‌ಮೇಕರ್‌ಗಳಿಂದ ಫೀಚರ್‌ಗಳು ಮತ್ತು ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಓಸ್ಲೋದ ಆಯ್ಕೆಗಳ ಆಧಾರದ ಮೇಲೆ ಫ್ಯಾಕ್ಟ್‌ಚೆಕ್‌ನ ಈ ಜೋಡಿಯು ಅದರಲ್ಲಿ ಕಾಣಿಸಿಕೊಂಡಿದೆ.

Breaking: ಪತ್ರಕರ್ತ ಮೊಹಮ್ಮದ್ ಜುಬೇರ್‌ಗೆ ಜಾಮೀನು, ಬಿಡುಗಡೆಗೆ ಆದೇಶBreaking: ಪತ್ರಕರ್ತ ಮೊಹಮ್ಮದ್ ಜುಬೇರ್‌ಗೆ ಜಾಮೀನು, ಬಿಡುಗಡೆಗೆ ಆದೇಶ

ಇವರೊಂದಿಗೆ ಇತರ ಪ್ರಬಲ ಸ್ಪರ್ಧಿಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಮತ್ತು ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಕೂಡ ಸೇರಿದ್ದಾರೆ. 2022ರ ನೊಬೆಲ್ ಶಾಂತಿ ಪ್ರಶಸ್ತಿಯ ಫಲಿತಾಂಶಗಳನ್ನು ನಾರ್ವೆಯ ಓಸ್ಲೋದಲ್ಲಿ ಶುಕ್ರವಾರ ಸ್ಥಳೀಯ ಸಮಯ 11 ಗಂಟೆಗೆ ಪ್ರಕಟಿಸಲಾಗುತ್ತದೆ.

Alt News Mohammad Zubair, Prateek Sinha race for Nobel Peace Prize

ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಹಿಂದೂ ದೇವತೆಯ ವಿರುದ್ಧ 2018ರಲ್ಲಿ ಟ್ವೀಟ್ ಮಾಡಿದ್ದ ಜುಬೈರ್ ಅವರನ್ನು ಈ ವರ್ಷ ಜೂನ್ 27 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಅವರು ಸುಮಾರು ಒಂದು ತಿಂಗಳ ಕಾಲ ಪೊಲೀಸ್ ಮತ್ತು ನ್ಯಾಯಾಂಗ ಬಂಧನದಲ್ಲಿದ್ದರು. ಫ್ಯಾಕ್ಟ್‌ ಚೆಕ್ಕರ್‌ ತಮ್ಮ ಟ್ವೀಟ್‌ಗಾಗಿ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅವರ ವಿರುದ್ಧ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದವು. ಆರೋಪಗಳ ತನಿಖೆಗಾಗಿ ಯುಪಿ ಪೊಲೀಸರು ವಿಶೇಷ ತನಿಖಾ ತಂಡವನ್ನು ಸಹ ರಚಿಸಿದ್ದರು.

Alt News Mohammad Zubair, Prateek Sinha race for Nobel Peace Prize

ವಿಶ್ವದಾದ್ಯಂತ ಪತ್ರಕರ್ತರು ಬಂಧನವನ್ನು ಖಂಡಿಸಿದ ನಂತರ ಈ ಘಟನೆಯು ಅಂತಾರಾಷ್ಟ್ರೀಯ ಗಮನವನ್ನು ಸೆಳೆದಿತ್ತು. ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜುಲೈ 20 ರಂದು ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಬಿಜೆಪಿ ನೇತೃತ್ವದ ಯುಪಿ ಸರ್ಕಾರವು ಭವಿಷ್ಯದಲ್ಲಿ ಟ್ವೀಟ್ ಮಾಡದಂತೆ ಜುಬೈರ್ ಅವರನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

English summary
Mohammed Zubair and Prateek Sinha, founders of India's fact checker and alternative media platform Alt News, are reportedly among the contenders for the 2022 Nobel Peace Prize.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X