Get Updates
Get notified of breaking news, exclusive insights, and must-see stories!

Cough Syrup: ಭಾರತದಲ್ಲಿ ತಯಾರಾದ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ಅಂಶ?

ನವದೆಹಲಿ: ಔಷಧಗಳ ತಯಾರಿಕೆಗೆ ಮತ್ತೊಂದು ಹೆಸರೇ ಭಾರತ ಎನ್ನಬೇಕು. ಯಾಕಂದ್ರೆ ಇಲ್ಲಿ ತಯಾರಾಗುವ ಔಷಧಗಳು ಹಾಗೂ ಔಷಧಕ್ಕೆ ಪೂರಕವಾದ ವಸ್ತುಗಳು ಇಡೀ ಜಗತ್ತಿಗೆ ತಲುಪುತ್ತೆ. ಅದರಲ್ಲೂ ಕೊರೊನಾ ಸಮಯದಲ್ಲಿ ಭಾರತ ಇಡೀ ಜಗತ್ತಿಗೇ ಮಾದರಿಯಾದ ಕೆಲಸ ಮಾಡಿತ್ತು, ಔಷಧಗಳನ್ನ ಜಗತ್ತಿಗೇ ತಲುಪಿಸಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ಭಾರತದ ಔಷಧ ಉದ್ಯಮಕ್ಕೆ ಪದೇ ಪದೆ ಆಘಾತ ಎದುರಾಗುತ್ತಿದೆ.

ಅಂದಹಾಗೆ ಭಾರತದಲ್ಲಿ ತಯಾರಾದ ಕೆಮ್ಮಿನ ಸಿರಪ್ (cough syrup) ವಿರುದ್ಧ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಭಾರತದಲ್ಲಿ ತಯಾರಾಗಿದ್ದ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ರಾಸಾಯನಿಕವು ಪತ್ತೆಯಾಗಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್‌ ವರದಿ ಮಾಡಿದೆ. ಈ ಪೈಕಿ ಭಾರತದಲ್ಲಿ ತಯಾರಾಗಿ ಇರಾಕ್‌ನಲ್ಲಿ (Iraq) ಮಾರಾಟ ಆಗುತ್ತಿರುವ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಹೀಗಾಗಿ ಬ್ಲೂಮ್‌ಬರ್ಗ್ ನ್ಯೂಸ್‌ ವರದಿ ಸಂಚಲನ ಸೃಷ್ಟಿಸಿದೆ. ಹಾಗಾದರೆ ಪರೀಕ್ಷೆ ನಡೆದಿದ್ದು ಹೇಗೆ? ಈ ಕೆಮ್ಮಿನ ಸಿರಪ್ ಅಂದರೆ ಕೆಮ್ಮಿನ ಔಷಧಿಯನ್ನು ಖರೀದಿಸಿದ್ದ ಎಲ್ಲಿಂದ? ತಿಳಿಯೋಣ ಬನ್ನಿ.

toxic-chemicals-found-in-cough-syrups

ಬಾಗ್ದಾದ್‌ನ ಔಷಧಾಲಯದ ಸಿರಪ್!

ಹೌದು, ಇದೇ ವರ್ಷದ ಮಾರ್ಚ್‌ನಲ್ಲಿ ಬಾಗ್ದಾದ್‌ನ ಔಷಧಾಲಯದಲ್ಲಿ ಖರೀದಿಸಿದ್ದ ಕೆಮ್ಮಿನ ಸಿರಪ್ನಲ್ಲಿ 2.1 ಪ್ರತಿಶತ ಎಥಿಲೀನ್ ಗ್ಲೈಕೋಲ್ ಅಂಶವಿತ್ತು ಎನ್ನಲಾಗಿದೆ. ಅಮೆರಿಕ ಖಾಸಗಿ ಪ್ರಯೋಗಾಲಯವಾದ ವ್ಯಾಲಿಸೂರ್ LLC ಈ ವರದಿ ನೀಡಿದೆ. ಅಂಗೀಕರಿಸಲ್ಪಟ್ಟ ಮಿತಿಗಿಂತ 21 ಪಟ್ಟು ಹೆಚ್ಚಾಗಿ ಈ ಅಂಶ ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಇದು ಜನರಿಗೆ ಮಾರಕವಾಗಿದ್ದು, ಕಳೆದ ವರ್ಷ ಗ್ಯಾಂಬಿಯಾ ಹಾಗೂ ಉಜ್ಬೇಕಿಸ್ತಾನ್‌ ದೇಶಗಳಲ್ಲಿ ಭಾರತದ ಕೆಮ್ಮಿನ ಸಿರಪ್‌ಗಳಿಂದ ಮಕ್ಕಳು ಸಾವಿಗೀಡಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ಬಳಿಕ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ!

ಇನ್ನು ಲ್ಯಾಬ್ ರಿಪೋರ್ಟ್ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಸೇರಿ ಇರಾಕ್ ಹಾಗೂ ಭಾರತೀಯ ಅಧಿಕಾರಿಗಳ ಜೊತೆ ಪರೀಕ್ಷೆ ಫಲಿತಾಂಶ ಹಂಚಿಕೊಂಡಿದೆ ಬ್ಲೂಮ್‌ಬರ್ಗ್. ಇರಾಕ್ ಸರ್ಕಾರ ಈ ಉತ್ಪನ್ನ ಅಲ್ಲಿ ಮಾರಾಟವಾಗಿದೆ ಎಂದು ದೃಢೀಕರಿಸಿದರೆ ಎಚ್ಚರಿಕೆ ನೀಡುತ್ತೇವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಸಾರ್ವಜನಿಕ ಎಚ್ಚರಿಕೆ ಅಥವಾ ಹಿಂಪಡೆಯುವಿಕೆ ಬಗ್ಗೆಇನ್ನೂ ಘೋಷಣೆ ಹೊರಡಿಸಿಲ್ಲ. ಆದ್ರೆ ಇರಾಕ್‌ ದೇಶದ ಆರೋಗ್ಯ ಸಚಿವಾಲಯದ ವಕ್ತಾರ, ಔಷಧ ಆಮದು, ಮಾರಾಟ & ವಿತರಣೆಗೆ ಸಚಿವಾಲಯ ಕಟ್ಟುನಿಟ್ಟಿನ ನಿಯಮ ಹೊಂದಿದೆ ಅಂತಾ ಹೇಳಿದ್ದಾರೆ. ಆದರೆ ಪ್ರಸಕ್ತ ಘಟನೆ ಕುರಿತು ಉತ್ತರಿಸಲು ಅವರು ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

toxic-chemicals-found-in-cough-syrups

ಆಫ್ರಿಕಾ ದೇಶಗಳಲ್ಲೂ ವಿಷಕಾರಿ ಅಂಶ?

ಹಾಗೇ ಕಳೆದ ಒಂದು ವರ್ಷದಲ್ಲಿ 5ನೇ ಬಾರಿಗೆ ಭಾರತೀಯ ರಫ್ತುದಾರರ ಔಷಧಿಗಳಲ್ಲಿ ಎಥಿಲೀನ್ ಗ್ಲೈಕೋಲ್ ಭಾರಿ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ. ಗ್ಯಾಂಬಿಯಾದಲ್ಲಿ ಕಳೆದ ವರ್ಷ ಸಿರಪ್ ಸೇವಿಸಿ 60ಕ್ಕೂ ಹೆಚ್ಚು ಮಕ್ಕಳು ಮತ್ತು ಉಜ್ಬೇಕಿಸ್ತಾನ್‌ನಲ್ಲಿ ಸುಮಾರು 20 ಮಂದಿ ಸಾವಿಗೀಡಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆಗಳು ಭಾರತದಿಂದ ಔಷಧ ರಫ್ತಿನ ಗುಣಮಟ್ಟದ ಬಗ್ಗೆ ಪ್ರಶ್ನೆ ಹುಟ್ಟುಹಾಕಿತ್ತು. ಈ ವರ್ಷ ಕ್ಯಾಮರೂನ್‌ನಲ್ಲಿ 12 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್‌ನಲ್ಲಿ ಅಸುರಕ್ಷಿತ ಮಟ್ಟದ ಡೈಥಿಲೀನ್ ಗ್ಲೈಕೋಲ್ ಇದೆ ಎಂಬ ಆರೋಪ ಕೂಡ ಕೇಳಿಬಂದಿತ್ತು.

ಇನ್ನು ಔಷಧ ಉತ್ಪನ್ನದಲ್ಲಿ ಅಸುರಕ್ಷಿತ ಮಟ್ಟದ ಎಥಿಲೀನ್ ಗ್ಲೈಕೋಲ್ ಅಥವಾ ಡೈಥಿಲೀನ್ ಗ್ಲೈಕೋಲ್ ಇದೆಯಾ? ಎಂಬುದನ್ನ ಪರಿಗಣಿಸುವಲ್ಲಿ, WHO ಮಾರ್ಗಸೂಚಿ ಬಳಸಲಾಗುತ್ತದೆ. ಒಟ್ನಲ್ಲಿ ಈಗಿನ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ ಇದೆ. ಹಾಗೇ ಅಗತ್ಯ ಕ್ರಮ ಕೈಗೊಳ್ಳಬಹುದು ಎನ್ನಲಾಗಿದೆ. ಅದೆಲ್ಲಾ ಏನೇ ಇರಲಿ, ಜನರ ಜೀವ ಉಳಿಸುವ ಭಾರತದ ಕೆಲಸ ನಿಲ್ಲದಿರಲಿ. ಭಾರತದ ಔಷಧ ಉದ್ಯಮ ಮತ್ತಷ್ಟು ಬೆಳೆಯಲಿ. ಸಮಸ್ಯೆಗಳು ಸರಿಯಾಗಲಿ ಎಂಬುದೇ ಶತಕೋಟಿ ಭಾರತೀಯರ ಆಶಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+