ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪದೇಶದಲ್ಲಿ 5 ರುಪಾಯಿ ಫುಲ್ ಮೀಲ್ಸ್, 3 ರುಪಾಯಿಗೆ ತಿಂಡಿ

ಉತ್ತರಪ್ರದೇಶ ಸರಕಾರ ಬಡವರಿಗಾಗಿ ಅಗ್ಗದ ದರದಲ್ಲಿ ಆಹಾರ ವಿತರಿಸುವ ಯೋಜನೆಯೊಂದನ್ನು ಮುಂದಿಟ್ಟಿದೆ. ಅದರ ಪ್ರಕಾರ ಬೆಳಗ್ಗೆ ತಿಂಡಿ 3 ರುಪಾಯಿಗೆ, ಮಧ್ಯಾಹ್ನದ ಫುಲ್ ಮೀಲ್ಸ್ 5 ರುಪಾಯಿಗೆ ಕೋಡುವ ಯೋಜನೆ ಇದು

|
Google Oneindia Kannada News

ಲಖನೌ, ಮೇ 4: ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಸಸ್ತಾ ಬೆಲೆಯ ತಿಂಡಿ-ಊಟ ಕೊಡುವುದಕ್ಕೆ ಸಿದ್ರಾಮಣ್ಣನವರು ಯೋಜನೆ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಆ ಯೋಜನೆಗೆ ಇಂದಿರಾ ಕ್ಯಾಂಟೀನ್ ಅಂತ ಹೆಸರು ಕೂಡ ಕೊಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರಂಭಿಸಲು ಉದ್ದೇಶಿಸಿರುವ ಅನ್ನಪೂರ್ಣಾ ಭೋಜನಾಲಯದ ಬಗ್ಗೆ ಕೇಳಿದ್ರೆ ಖಂಡಿತಾ ಆಶ್ಚರ್ಯ ಪಡ್ತೀರಾ.

ಅಲ್ಲಿ ಐದು ರುಪಾಯಿಗೆ ಫುಲ್ ಮೀಲ್ಸ್ ಅಂತೆ. ಮುಖ್ಯಮಂತ್ರಿ ಕಚೇರಿಯಿಂದ ಯೋಜನೆ ಬಗ್ಗೆ ಟ್ವೀಟ್ ಮಾಡಿದ್ದು, ಉತ್ತರಪ್ರದೇಶದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಅನ್ನಪೂರ್ಣಾ ಭೋಜನಾಲಯದಲ್ಲಿ ಐದು ರುಪಾಯಿಗೆ ಅನಿಯಮಿತವಾದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.[ಅಖಿಲೇಶ್ ಯಾದವ್ ಬ್ಯಾಗ್ ನೇ ವಿತರಿಸಿ ಎಂದ ಯೋಗಿ]

All-You-Can-Eat At Rs. 5 In Yogi Adityanath's Kitchens For The Poor Soon

ಇನ್ನು ಬೆಳಗಿನ ತಿಂಡಿಯನ್ನು ಮೂರು ರುಪಾಯಿಗೆ ಕೊಡಲಾಗುತ್ತದಂತೆ. ಸದ್ಯಕ್ಕೆ ಒಂದು ನಕ್ಷೆ ಥರದ್ದು ಮಾಡಿಕೊಳ್ಳಲಾಗಿದೆ ಎಂದು ಅಹಿಕಾರಿಗಳು ಹೇಳಿದ್ದಾರೆ. ಮಾರ್ಚ್ ನಲ್ಲಿ ಅಧಿಕಾರಕ್ಕೆ ಬಂದ ಕೆಲವೇ ದಿನಕ್ಕೆ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇನ್ನೇನು ಕೆಲವೇ ವಾರದಲ್ಲಿ ಈ ಯೋಜನೆ ಅಧಿಕೃತ ಘೋಷಣೆ ಆಗಲಿದೆ.

ಬಡವರ ಅನುಕೂಲಕ್ಕಾಗಿ ಉತ್ತರಪ್ರದೇಶದಾದ್ಯಂತ ಇನ್ನೂರು ಕಡೆ ಈ ರೀತಿ ಕಡಿಮೆ ದರದ ಊಟ-ತಿಂಡಿ ವಿತರಿಸಲಾಗುತ್ತದೆ. ಲಖನೌದಂಥ ನಗರಗಳಿಗೆ ವಲಸೆ ಬಂದ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಆಹಾರ ಸಿಗಲಿ ಎಂಬ ಉದ್ದೇಶ ಕೂಡ ಇದೆ. ಎನ್ ಜಿಒಗಳ ಸಹಾಯದಿಂದ ಈ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.[ಉ.ಪ್ರ ಹಾದಿಯಲ್ಲಿ ದೆಹಲಿ ಹೆಜ್ಜೆ, ರಜಾ ರದ್ದು ಮಾಡ್ತೀವಿ ಎಂದ ಮನೀಶ್ ಸಿಸೋಡಿಯಾ]

ಈ ರೀತಿ ಅಗ್ಗದ ದರದಲ್ಲಿ ಆಹಾರ ವಿತರಿಸುವ ಕಾರ್ಯಕ್ರಮ ಮೊದಲಿಗೆ ಅರಂಭಿಸಿದ್ದು ತಮಿಳುನಾಡಿನಲ್ಲಿ. ಅದು ದಿವಂಗತ ಮುಖ್ಯಮಂತ್ರಿ ಜಯಲಲಿತಾ. ಅಂದಹಾಗೆ ರಾಜಸ್ತಾನದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಹ ಅನ್ನಪೂರ್ಣಾ ರಸೋಯಿ ಅನ್ನೋ ಹೆಸರಿನಲ್ಲಿ ಬಡವರಿಗೆ ಅಗ್ಗದ ದರದಲ್ಲಿ ಆಹಾರ ವಿತರಿಸುತ್ತಿದೆ.

{promotion-urls}

English summary
Yogi Adityanath's Uttar Pradesh government has said it will soon open "Annapurna Bhojanalayas" across the state to provide full meals at Rs. 5 for the poor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X