ಹೊಸ ದಾಖಲೆ ಬರೆದ ತಿರುಪತಿ ತಿಮ್ಮಪ್ಪನ ದೇವಾಲಯ
Recommended Video

ತಿರುಪತಿ, ಅ 2: ದೇಶದ ಅತ್ಯಂತ ಪುರಾತನ ಮತ್ತು ಶ್ರೀಮಂತ ದೇವಾಲಯಗಳಲ್ಲೊಂದಾದ ತಿರುಪತಿ ವೆಂಕಟೇಶ್ವರ ದೇವಾಲಯ ಲಡ್ಡು ಮಾರಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಭಾನುವಾರ (ಸೆ 30) ಒಂದೇ ದಿನ 5,13,566 ಲಡ್ಡು ಮಾರಾಟವಾಗಿದ್ದು, ದೇವಾಲಯದ ಇತಿಹಾಸದಲ್ಲಿ ಇದುವರೆಗೆ, ಇಷ್ಟು ಲಡ್ಡು ಮಾರಾಟವಾದ ಉದಾಹರಣೆಗಳಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಹೇಳಿದೆ.
ಕಳೆದ ಕೆಲವು ದಿನಗಳಲ್ಲಿ ಅತಿಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದರೂ, ಬಂದ ಭಕ್ತಾದಿಗಳಿಗೆ ಲಡ್ಡುವಿನ ಕೊರತೆ ಬರದಂತೆ ನೋಡಿಕೊಳ್ಳಲಾಗಿದೆ ಎಂದು ಟಿಟಿಡಿ ಹೇಳಿದೆ. ಪುರಾಟ್ಟಸ್ಸಿ ಮಾಸದ ಹಿನ್ನಲೆಯಲ್ಲಿ ಪ್ರಮುಖವಾಗಿ ತಮಿಳುನಾಡು ಕಡೆಯಿಂದ ಅತಿಹೆಚ್ಚಿನ ಭಕ್ತರು ಆಗಮಿಸಿದ್ದರು.

ಸೆ30ರ ಮುಂಜಾನೆಯಿಂದ ಅಕ್ಟೋಬರ್ ಒಂದರ ಮುಂಜಾನೆಯವರೆಗೆ ಭಾರೀ ಸಂಖ್ಯೆಯಲ್ಲಿ ಲಡ್ಡು ಮಾರಾಟವಾಗಿದೆ. ಅಕ್ಟೋಬರ್ 10,2016ರಂದು 4,64,152 ಲಡ್ಡು ಮಾರಾಟವಾಗಿದ್ದು ಇದುವರೆಗಿನ ದಾಖಲೆಯಾಗಿತ್ತು.
ಮೇ 28, 2017ರಲ್ಲಿ 4,32,745 ಮತ್ತು ಜೂನ್ 11, 2017ರಲ್ಲಿ 4,11,943 ಲಡ್ಡು ಮಾರಾಟವಾಗಿತ್ತು. ಸುಮಾರು ಆರು ನೂರಕ್ಕೂ ಹೆಚ್ಚು ವೈಷ್ಣವ ಸಂಪ್ರದಾಯದವರು ಲಡ್ಡು ತಯಾರಿಕೆಯ ಕಾಂಟ್ರ್ಯಾಕ್ಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪಾಳಯದಲ್ಲಿ ಇಪ್ಪತ್ತು ತಾಸು ಕೆಲಸ ಮಾಡುತ್ತಿದ್ದಾರೆ.












Click it and Unblock the Notifications