ಏಪ್ರಿಲ್ 1ರಂದು ಎಲ್ಲಾ ನಗದು ವ್ಯವಹಾರ ಬಂದ್
ಏಪ್ರಿಲ್ 1ರಂದು ಎಲ್ಲಾ ನಗದು ವ್ಯವಹಾರ ಬಂದ್ ಆಗುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.
ಬೆಂಗಳೂರು, ಮಾರ್ಚ್ 31: ಏಪ್ರಿಲ್ 1ರಂದು ಎಲ್ಲಾ ನಗದು ವ್ಯವಹಾರ ಬಂದ್ ಆಗುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಆದರೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.
ಏಪ್ರಿಲ್ 1 ಖಾತೆಗಳ ವ್ಯವಹಾರಕ್ಕೆ ಕೊನೆಯ ದಿನವಾಗಿದ್ದು ಬ್ಯಾಂಕ್ ಗಳು ಬಾಗಿಲೆಳೆದುಕೊಳ್ಳಲಿವೆ.[ಹಳೆ ನೋಟುಗಳನ್ನು ಇಟ್ಟುಕೊಂಡವರಿಗೆ ಕಾದಿದೆ ಗಂಡಾಂತರ]

ಈ ಹಿಂದೆ ಮಾರ್ಚ್ 25ರಂದು ಹೇಳಿಕೆ ಬಿಡುಗಡೆ ಮಾಡಿದ್ದ ಆರ್.ಬಿ.ಐ ಏಪ್ರಿಲ್ 1ರಂದು ಎಲ್ಲಾ ಬ್ಯಾಂಕ್ ಗಳು ತೆರೆದಿರಲಿದ್ದು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಹೇಳಿತ್ತು. ಆದರೆ ಈ ನಿರ್ಧಾರವನ್ನು ಈಗ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ.[ನಗದು ವ್ಯವಹಾರಗಳಿಗೆ ಬ್ಯಾಂಕುಗಳಲ್ಲಿ ಶುಲ್ಕ ಎಷ್ಟು? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ]
ಆರ್.ಬಿ.ಐನ ಈ ನಿರ್ಧಾರದಿಂದ 'ಆರ್.ಟಿ.ಜಿ.ಎಸ್' ಮತ್ತು 'ನೆಫ್ಟ್' ವ್ಯವಹಾರಗಳಿಗೆ ಕತ್ತರಿ ಬೀಳಲಿದೆ. ಆದರೆ ಜನರು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕ ತಮ್ಮ ವ್ಯವಹಾರವನ್ನು ಮಾಡಬಹುದು.












Click it and Unblock the Notifications