Operation Hasta: ಡಿಕೆಶಿ ಭೇಟಿಯಾದ ಆಯನೂರು ಮಂಜುನಾಥ್ : ಡಿ ಕೆ ಶಿವಕುಮಾರ್‌ ಹೇಳಿದಿಷ್ಟು ?

ಬೆಂಗಳೂರು, ಆಗಸ್ಟ್‌ 20: ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಷನ್‌ ಸದ್ದು ಜೋರಾಗಿದ್ದು, ಲೋಕಸಭಾ ಚುನಾವಣೆ ಹಿನ್ನಲೆ ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯ ಅಸಮಾಧಾನಿತರನ್ನ ಸೆಳೆಯುವ ತಂತ್ರಗಾರಿಕೆಗೆ ಮುಂದಾಗಿದೆ. ಇದೀಗ ಜೆಡಿಎಸ್ ನಾಯಕ ಆಯನೂರು ಮಂಜುನಾಥ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತು ನಗರದಲ್ಲಿ ಜೆಡಿಎಸ್ ನಾಯಕ ಆಯನೂರು ಮಂಜುನಾಥ ಭೇಟಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರವರ ಬದುಕು, ಅವರವರ ಭವಿಷ್ಯ ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದ ಅವರು, ಸಿಟಿ ರವಿ ಹಿರಿಯರಿದ್ದಾರೆ. ಅವರು ಥ್ರೆಟ್ ಕೊಡುತ್ತಿದ್ದಾರೆ. ಕೈ ಕತ್ತರಿಸ್ತೇವೆ ಅಂತ. ನೀವು ಮಾಡಿದಾಗ ಏನಾಗಿತ್ತು, ಜೆಡಿಎಸ್‌, ಕಾಂಗ್ರೆಸ್ ಶಾಸಕರ ಕರ್ಕೊಂಡ್ ಮಜಾ ಮಾಡಿದ್ರಲ್ಲ ಎಂದು ವಾಗ್ದಾಳಿ ನಡೆಸಿದರು.

All-Party Meeting Has Been Called On Wednesday On The Cauvery Water Dispute Says DK Shivakumar

ಇನ್ನೂ ಅವರ ರಾಜಕಾರಣ ಅವರು ಮಾಡಲಿ. ನಿಮಗೆ ಬರೋ ಥ್ರೆಟ್ ತರ ಅವರಿಗೂ ಬರುತ್ತೆ. ನಾವು ಯಾರನ್ನೂ ಕರೀತಿಲ್ಲ, ನಮಗಿರೋ ನಂಬರ್ ಗೆ ಯಾರೂ ಅವಶ್ಯಕತೆ ಇಲ್ಲ. ದೇಶದ ಉದ್ದಗಲಕ್ಕೂ ಭಾರತ ಉಳಿಸಲು ಒಗ್ಗೂಡಿದ್ದಾರೆ. ಜನ ಬರೋರನ್ನ ನಾನು ತಡೆಯಲು ಆಗಲ್ಲ, ಕೋಳಿ ಕೇಳಿ ಮಸಾಲೆ ಅರೆಯೋಕಾಗುತ್ತಾ ಎಂದು ಪ್ರಶ್ನಿಸಿದರು.

ಇನ್ನೂ ಕಾವೇರಿ ವಿಚಾರವಾಗಿ ಮಾತನಾಡಿದ ಅವರು, ಬುಧವಾರ ಕಾವೇರಿ, ಮಹದಾಯಿ ಇಂಟರ್ ಸ್ಟೇಟ್ ವಿಚಾರವಾಗಿ ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಈ ಸಭೆಗೆ ಸಂಸದರು ಬರುತ್ತಾರೆ.

ಬುಧವಾರ ವಿಧಾನಸೌಧದಲ್ಲಿ 11ಗಂಟೆಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ನಾವು ಅನೇಕ ವಿಚಾರ ಚರ್ಚೆ ಮಾಡುತ್ತೇವೆ. ಲೀಗಲ್ ವಿಚಾರ ಅಡ್ವೋಕೇಟ್ಗೆ ಬಿಟ್ಟಿದ್ದೇವೆ.
ಒಳ ಹರಿವು ಕಡಿಮೆ ಆಗಿದೆ. ಕೃಷ್ಣಾ ತುಂಬಿದ್ರೂ ಕೂಡ, ಇನ್ ಫ್ಲೋ ಕಡಿಮೆ ಆಗಿದೆ ಎಂದು ತಿಳಿಸಿದರು.

ಸಚಿವ ಮುನಿಯಪ್ಪ ಅಧಿಕಾರ ಬಿಟ್ಟುಕೊಡುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಪಕ್ಷದ ಆಂತರಿಕವಾದ ವಿಚಾರ. ಬಹಿರಂಗವಾಗಿ ಚರ್ಚೆ ಮಾಡೋ‌ ವಿಚಾರ ಅಲ್ಲ.
ಇದು ಪಕ್ಷಕ್ಕೆ ಬಿಟ್ಟಿದ್ದು. ಮುಂದಿನ ವಾರ ದೆಹಲಿಯಿಂದ ನಾಯಕರು ಬರ್ತಾರೆ. ಆಗ ಎಲ್ಲಾ ವಿಚಾರ ಮಾಡುತ್ತೇವೆ ಎಂದು ಹೇಳಿದರು.

ನಾಳೆ ಮಾಜಿ ಕಾರ್ಪೊರೇಟರ್ಸ್ ಸೇರಿದಂತೆ ಹಲವರ ಸೇರ್ಪಡೆ ವಿಚಾರವಾಗಿ ಮಾತನಾಡಿ, ಯಾರೂ ಅರ್ಜಿ ಹಾಕಿಲ್ಲ. ನೋಡೋಣ ಮುಂದೆ ಯಾರೆಲ್ಲಾ ಬರ್ತಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+