• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವ ನಾಣ್ಯವನ್ನೂ ನಿರಾಕರಿಸುವಂತಿಲ್ಲ: ಆರ್‌ಬಿಐ ಸೂಚನೆ

|

ನವದೆಹಲಿ, ಜೂನ್ 28: ಹತ್ತು ರೂಪಾಯಿ ನಾಣ್ಯ ಸೇರಿದಂತೆ ಯಾವುದೇ 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ನಾಣ್ಯವನ್ನು ವ್ಯವಾಹರದಲ್ಲಿ ನಿರಾಕರಿಸುವಂತಿಲ್ಲವೆಂದು ಆರ್‌ಬಿಐ (ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ) ಹೇಳಿದೆ.

ಹತ್ತು ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಲು ಹಲವೆಡೆ ಹಿಂದೇಟು ಹಾಕುತ್ತಾರೆ. ಹಲವರು ಹತ್ತು ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳುವುದೇ ಇಲ್ಲ, ಆದರೆ ಆರ್‌ಬಿಐ ಇದನ್ನು ಸ್ಪಷ್ಟವಾಗಿ ತಪ್ಪು ಎಂದು ಹೇಳಿದ್ದು, 50 ಪೈಸೆಗಿಂತಲೂ ಹೆಚ್ಚಿನ ಮೌಲ್ಯದ ಯಾವ ನಾಣ್ಯವನ್ನೂ ತೆಗೆದುಕೊಳ್ಳದೆ ನಿರಾಕರಿಸುವಂತಿಲ್ಲ ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐನ ಡೆಪ್ಯುಟಿ ಗವರ್ನರ್ ಆಚಾರ್ಯ ರಾಜೀನಾಮೆ

ಕೆಲವು ವ್ಯಾಪಾರಿಗಳು ಕೆಲವು ಚಿತ್ರಗಳು, ವರ್ಷಗಳು ಇದ್ದ ನಾಣ್ಯಗಳನ್ನು ಸಹ ವ್ಯಾಪಾರಕ್ಕೆ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಆದರೆ ಹಾಗೆ ನಿರಾಕರಿಸುವಂತಿಲ್ಲವೆಂದು ಆರ್‌ಬಿಐ ಹೇಳಿದೆ.

ಕೆಲವರು ಅಕಾರಣವಾಗಿ ನಾಣ್ಯ ನಿರಾಕರಿಸುತ್ತಿದ್ದಾರೆ

ಕೆಲವರು ಅಕಾರಣವಾಗಿ ನಾಣ್ಯ ನಿರಾಕರಿಸುತ್ತಿದ್ದಾರೆ

ಒಂದು, ಎರಡು, ಐದು ಮತ್ತು ಹತ್ತು ರೂಪಾಯಿಯ ಹೊಸ ಮಾದರಿಯ ನಾಣ್ಯಗಳನ್ನು ಆರ್‌ಬಿಐ ಕೆಲವು ತಿಂಗಳ ಮುನ್ನಾ ಬಿಡುಗಡೆಗೊಳಿಸಿತ್ತು. ಇವನ್ನು ತೆಗೆದುಕೊಳ್ಳಲು ಕೆಲವು ವ್ಯಾಪಾರಸ್ತರು ಅಕಾರಣವಾಗಿ ನಿರಾಕರಿಸಿದ್ದರು, ಇದರಿಂದ ಇಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆರ್‌ಬಿಐ ಮೇಲಿನಂತೆ ಸೂಚನೆ ನೀಡಿದೆ.

ಗುಡ್ News : ಎಟಿಎಂನಲ್ಲಿ ಇನ್ಮುಂದೆ 'ನೋ ಕ್ಯಾಶ್' ಬೋರ್ಡ್ ಹಾಕುವ ಹಾಗಿಲ್ಲ

ನಾಣ್ಯಗಳ ಬಗ್ಗೆ ಗಾಳಿ ಸುದ್ದಿ ಬೇಡ: ಆರ್‌ಬಿಐ

ನಾಣ್ಯಗಳ ಬಗ್ಗೆ ಗಾಳಿ ಸುದ್ದಿ ಬೇಡ: ಆರ್‌ಬಿಐ

ನಾಣ್ಯಗಳ ಕುರಿತಾಗಿ ಕೆಲವು ಗಾಳಿ ಸುದ್ದಿಗಳೂ ಸಹ ಹರಡಿ ನಾಣ್ಯಗಳನ್ನು ಸ್ವೀಕರಿಸಲು ವ್ಯಾಪಾರಿಗಳು ನಿರಾಕರಿಸುತ್ತಿದ್ದಾರೆಂದು ತಿಳಿದು ಬಂದಿರುವ ಕಾರಣ, ಹೀಗೆ ಗಾಳಿ ಸುದ್ದಿ ಹರಡಿಸಬಾರದೆಂದು ಆರ್‌ಬಿಐ ಮನವಿ ಮಾಡಿದೆ.

ನಾಣ್ಯಗಳನ್ನು ಸ್ವೀಕರಿಸದಿರುವುದು ಸೂಚನೆಯ ಉಲ್ಲಂಘನೆ

ನಾಣ್ಯಗಳನ್ನು ಸ್ವೀಕರಿಸದಿರುವುದು ಸೂಚನೆಯ ಉಲ್ಲಂಘನೆ

ಇಷ್ಟಾಗಿಯೂ ವ್ಯಾಪಾರಿಗಳು ಅಥವಾ ಇನ್ನಾರಾದರೂ ವ್ಯವಹಾರದ ಸಂಬಂಧ ಆರ್‌ಬಿಐನ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದರೆ, ಆರ್‌ಬಿಐನ ಸೂಚನೆಯ ಉಲ್ಲಂಘನೆ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಾರ್ಷಿಕ 10 ಲಕ್ಷ ನಗದು ವಿತ್ ಡ್ರಾ ಮಾಡಿದ್ರೆ ತೆರಿಗೆ?

ಯಾವ ಯಾವ ನಾಣ್ಯಗಳು ಚಾಲ್ತಿಯಲ್ಲಿವೆ?

ಯಾವ ಯಾವ ನಾಣ್ಯಗಳು ಚಾಲ್ತಿಯಲ್ಲಿವೆ?

50 ಪೈಸೆ, ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ, ಹತ್ತು ರೂಪಾಯಿಯ ನಾಣ್ಯಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ. 50 ಪೈಸೆಗಿಂತಲೂ ಕಡಿಮೆ ಮೌಲ್ಯದ ನಾಣ್ಯಗಳು ಪ್ರಸ್ತುತ ಚಾಲ್ತಿಯಲ್ಲಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reserve bank of India (RBI) instructed that all coins must be accepted as leagel tender. It released statement today about coins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more