ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಭಾವ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಒಂದಷ್ಟು

ಹೆಚ್ಚೇನೂ ಪರಿಚಿತರಲ್ಲದ ದ್ರೌಪದಿ ಮುರ್ಮು ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಬಹುತೇಕ ಖಚಿತಗೊಳಿಸಿರುವುದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 06: ಭಾರತದ ಮುಂದಿನ ರಾಷ್ಟ್ರಪತಿ ಯಾರು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಾಗಿದೆ. ಇದೀಗ ಜಾರ್ಖಂಡ್ ಗವರ್ನರ್ ದ್ರೌಪದಿ ಮುರ್ಮು ಭಾರತದ ರಾಷ್ಟ್ರಪತಿಯಾಗುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ, ಇದುವರೆಗೂ ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿದ್ದ ಪ್ರಮುಖ ಹೆಸರುಗಲನ್ನೆಲ್ಲ ಹಿಂದಿಕ್ಕಿ ದ್ರೌಪದಿ ಮುರ್ಮು ಹೆಸರು ಕೇಳಿಬರುತ್ತಿರುವುದು ಅಚ್ಚರಿ ಮೂಡಿಸಿದೆ.

ರಾಷ್ಟ್ರಪತಿ ರೇಸ್ ನಲ್ಲಿ ಇದುವರೆಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಮುರಳೀ ಮನೋಹರ್ ಜೋಷಿ ಜೊತೆಗೆ ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಹೆಸರೂ ಕೇಳಿಬಂದಿತ್ತು. ಆದರೆ ಇದೀಗ ಹೆಚ್ಚೇನೂ ಪರಿಚಿತರಲ್ಲದ ದ್ರೌಪದಿ ಮುರ್ಮು ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಬಹುತೇಕ ಖಚಿತಗೊಳಿಸಿರುವುದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾದದ್ದೇ ಆದರೆ, ಬುಡಕಟ್ಟು ಸಮುದಾಯದ ಮಹಿಳೆಯರೊಬ್ಬರು ಪ್ರಪ್ರಥಮ ಬಾರಿಗೆ ಭಾರತದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಹೆಗ್ಗಳಿಕೆ ಪಡೆಯುತ್ತಾರೆ. ಅಷ್ಟಕ್ಕೂ ಈ ದ್ರೌಪದಿ ಮುರ್ಮು ಯಾರು? ಅವರ ರಾಜಕೀಯ ಹಿನ್ನೆಲೆ ಏನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಯಾರೀ ದ್ರೌಪದಿ ಮುರ್ಮು?

ಯಾರೀ ದ್ರೌಪದಿ ಮುರ್ಮು?

ಒಡಿಶಾ ಮೂಲದ ದ್ರೌಪದಿ ಮುರ್ಮು ತಂದೆ ಬಿರಂಚಿ ನಾರಾಯಣ್ ಟುಡು. ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದ್ರೌಪದಿ ಒಡಿಶಾದ ಮಾಜಿ ಸಚಿವರು. ಸದ್ಯಕ್ಕೆ ಜಾರ್ಖಂಡ್ ನ ರಾಜ್ಯಪಾಲರಾಗಿರುವ ಇವರು ರಾಷ್ಟ್ರಪತಿಯಾದರೆ ಭಾರತದ ಎರಡನೇ ಮಹಿಳಾ ರಾಜ್ಯಪಾಲರು ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ. ಪ್ರತಿಭಾ ಪಾಟೀಲ್ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದರು.

ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ

ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ

ಎಲ್ಲವೂ ಅಂದುಕೊಂಡಂತೆ ಆಗಿ, ದ್ರೌಪದಿ ಮುರ್ಮು ಭಾರತದ ಮುಂದಿನ ರಾಷ್ಟ್ರಪತಿಯಾದರೆ ಬುಡಕಟ್ಟು ಸಮುದಾಯದಿಂದ ಬಂದು ರಾಷ್ಟ್ರಪತಿ ಹುದ್ದೆಯನ್ನು, ಅಂದರೆ ಭಾರತದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಕೀರ್ತಿಗೆ ದ್ರೌಪದಿ ಭಾಜನರಾಗುತ್ತಾರೆ.

ಉತ್ತಮ ಶಾಸಕಿಯ ಗೌರವ

ಉತ್ತಮ ಶಾಸಕಿಯ ಗೌರವ

ದ್ರೌಪದಿ ಮುರ್ಮು ತಮ್ಮ ನಿಸ್ವಾರ್ಥ ಜನಸೇವೆಯಿಂದಾಗು ಉತ್ತಮ ಶಾಸಕಿ ಎಂಬ ಪ್ರಶಸ್ತಿಯನ್ನೂ ಪಡೆದಿದ್ದರು. 2007 ರಲ್ಲಿ ನೀಲಕಂಠ ಎಂಬ ಪ್ರಶಸ್ತಿಯನ್ನೂ ಪಡೆದರು. 1997 ರಲ್ಲಿ ಅವರನ್ನು ಕೌನ್ಸಿಲರ್ ಆಗಿ ಆರಿಸಲಾಯಿತು. ನಂತರ ರಾಷ್ಟ್ರೀಯ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿಯೂ ನೇಮಕಗೊಂಡರು. ಒಡಿಶಾದ ಶಾಸಕಿಯಾಗಿ ಆಯ್ಕೆಯಾಗಿದ್ದಲ್ಲದೆ, ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2002 ರಿಂದ 2009ರವರೆಗೆ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರಾಗಿಯೂ ನೇಮಕಗೊಂಡರು.

ಪ್ರಣಬ್ ಮುಖರ್ಜಿಯವರ ಉತ್ತರಾಧಿಕಾರಿ

ಪ್ರಣಬ್ ಮುಖರ್ಜಿಯವರ ಉತ್ತರಾಧಿಕಾರಿ

ಇದೇ ಜುಲೈ 25 ರಂದು ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಲಿರುವ ಕಾರಣ ವಿರೋಧ ಪಕ್ಷಕ್ಕೂ ಇವರನ್ನು ವಿರೋಧಿಸುವುದು ಕಷ್ಟ.

ಮೋದಿ ಉಪಾಯವೇನು?

ಮೋದಿ ಉಪಾಯವೇನು?

ಬುಡಕಟ್ಟು ಜನರನ್ನು ವಿಶ್ವಾಸಕ್ಕೆ ತೆಗೆದುಕೊಲ್ಳುವ ಜೊತೆಯಲ್ಲೇ, ಮಹಿಳೆಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶ ದ್ರೌಪಡಿ ಮುರ್ಮು ಅವರ ಆಯ್ಕೆಯಲ್ಲಿ ಅಡಕವಾಗಿದೆಯೇ? ಹೀಗೆ ಒಂದೇ ಅಭ್ಯರ್ಥಿಯಿಂದ ಎರಡು ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದಲೇ ‌ಬಿಜೆಪಿ ಮುರ್ಮು ಎಂಬ ಅನಿರೀಕ್ಷಿತ ಹೆಸರನ್ನು ಆಯ್ಕೆ ಮಾಡಿದೆಯೇ? ಉತ್ತರಕ್ಕೆ ಕಾದುನೋಡಬೇಕು!

English summary
Draupadi Murmu is all set to be the next President of India. Sources say that the name has almost been finalised and she will be Narendra Modi's pick to succeed Pranab Mukherjee as the next President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X