ಯುಪಿಎಸ್ ಸಿ ಅಧ್ಯಕ್ಷರಾಗಿ ಅಲ್ಕಾ ಶಿರೋಹಿ ನೇಮಕ

Posted By:
Subscribe to Oneindia Kannada

ನವದೆಹಲಿ, ಸೆ. 18: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ದ ಅಧ್ಯಕ್ಷರಾಗಿ ಮಾಜಿ ಐಎಎಸ್ ಅಧಿಕಾರಿ ಅಲ್ಕಾ ಶಿರೋಹಿ ಅವರನ್ನು ಭಾನುವಾರದಂದು ನೇಮಕ ಮಾಡಲಾಗಿದೆ. ಯುಪಿಎಸ್ಸಿಯ ಹಾಲಿ ಅಧ್ಯಕ್ಷರಾಗಿರುವ ದೀಪಕ್ ಗುಪ್ತಾ ಮಂಗಳವಾರ ನಿವೃತ್ತರಾಗಲಿದ್ದಾರೆ.

ಸೆಪ್ಟೆಂಬರ್ 21ರಿಂದ ಜಾರಿಗೆ ಬರುವಂತೆ ಯುಪಿಎಸ್ಸಿ ಅಧ್ಯಕ್ಷರ ಹುದ್ದೆಗೆ ಶಿರೋಹಿ ಅವರನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ನೇಮಕ ಮಾಡಿದ್ದಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಿಂದ ತಿಳಿದು ಬಂದಿದೆ. ಅಲ್ಕಾ ಶಿರೋಹಿ ಅವರ ಪ್ರಸ್ತುತ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಅಧ್ಯಕ್ಷ ಹುದ್ದೆಗೇರಲಿದ್ದಾರೆ.

Alka Sirohi appointed as chairman of Union Public Service Commission

ಜನವರಿ 03, 2017ರ ತನಕ ಶಿರೋಹಿ ಅವರ ಅಧಿಕಾರ ಅವಧಿ ನಿಗದಿಯಾಗಿದೆ. 2014ರಲ್ಲಿ ನಿಯಮ ಮೀರಿ ಯುಪಿಎಸ್ಸಿಯಿಂದ ಹೊರಗಿದ್ದವರನ್ನು ತಂದು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿತ್ತು.

ಮಧ್ಯಪ್ರದೇಶ ಕೆಡರ್ ನ ಐಎಎಸ್ ಅಧಿಕಾರಿಯಾಗಿರುವ ಶಿರೋಹಿ ಅವರು ಪರ್ಸನಲ್ ಅಂಡ್ ಟ್ರೈನಿಂಗ್ ವಿಭಾಗದಲ್ಲಿ ಕಾರ್ಯದರ್ಶಿಯಾಗಿ 2012ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಮೂಲಕ ನಾಗರಿಕ ಸೇವಾ ಪರೀಕ್ಷೆಗಳಾದ ಇಂಡಿಯನ್ ಆಡ್ಮಿನಿಸ್ಟ್ರೇಟಿವ್ ಸರ್ವೀಸ್(ಐಎಎಸ್), ಇಂಡಿಯನ್ ಫಾರೀನ್ ಸರ್ವೀಸ್(ಐಎಫ್ ಎಸ್) ಹಾಗೂ ಇಂಡಿಯನ್ ಪೊಲೀಸ್ ಸರ್ವೀಸ್ (ಐಪಿಎಸ್) ಗಳನ್ನು ನಡೆಸಲಾಗುತ್ತದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former IAS officer Alka Sirohi has been appointed as chairman of Union Public Service Commission (UPSC), in place of Deepak Gupta who demits office on Tuesday.
Please Wait while comments are loading...