ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್, ಸಮಾಜವಾದಿ ಪ್ರಣಾಳಿಕೆ ಬಿಡುಗಡೆ

Posted By:
Subscribe to Oneindia Kannada

ಲಕ್ನೋ, ಜನವರಿ 22: ಸಮಾಜವಾದಿ ಪಕ್ಷದ ಪ್ರಣಾಳಿಕೆ, ಘೋಷಣಾ ಪತ್ರವನ್ನು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭಾನುವಾರ ಪ್ರಕಟಿಸಿದ್ದಾರೆ. ಈ ಸಂದರ್ಭ ಅಖಿಲೇಶ್ ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಗೈರು ಹಾಜರಾಗಿದ್ದಾರೆ.

ಈ ಸಂದರ್ಭದಲ್ಲಿ ಮಹಿಳೆಯರೆಗೆ ಫ್ರೆಶರ್ ಕುಕ್ಕರ್ ಹಾಗೂ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಹಂಚುವ ಭರವಸೆ ನೀಡಿದ್ದಾರೆ. ಮೋದಿ ಅವರ ಡಿಜಿಟಲ್ ಇಂಡಿಯಾಕ್ಕೂ ಮೊದಲೇ ಉತ್ತರಪ್ರದೇಶದಲ್ಲಿ ಲ್ಯಾಪ್ ಟಾಪ್ ಹಂಚುವ ಮೂಲಕ ಕ್ರಾಂತಿ ಮಾಡಲಾಗಿದೆ ಎಂದರು.

Akhilesh Yadav Releases Samajwadi Party Manifesto UP Election 2017

ಇದಕ್ಕೂ ಮುನ್ನ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ನಡುವಿನ ಮೈತ್ರಿಗೆ ಅಧಕೃತ ಮುದ್ರೆ ಬಿದ್ದಿತು. ಸೀಟು ಹಂಚಿಕೆ ವಿಷಯದಲ್ಲಿ ಇದ್ದ ಅಸಮಾಧಾನ ತಿಳಿಗೊಂಡಿದ್ದು, ಕಾಂಗ್ರೆಸ್ 105 ಸೀಟುಗಳಿಕೆ ಟಿಕೆಟ್ ಪಡೆದುಕೊಂಡರೆ, ಸಮಾಜವಾದಿ ಪಕ್ಷ 298 ಸ್ತಾನ ಉಳಿಸಿಕೊಂಡಿದೆ. ಎಸ್ ಪಿಗೆ 300 ಸೀಟು ಗೆಲ್ಲುವ ಭರವಸೆಯಿದೆ ಎಂದು ಅಖಿಲೇಶ್ ತಮ್ಮ ಭಾಷಣದಲ್ಲಿ ಹೇಳಿದರು.

ಅಚ್ಛೇ ದಿನ ತರುತ್ತೇವೆ ಎಂದು ಮೋದಿ ಭರವಸೆ ನೀಡಿದರು. ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆಯುತ್ತಿದೆ, ಅಚ್ಛೇ ದಿನದ ಸುಳಿವಿಲ್ಲ. ನಮ್ಮ ಜನತೆ ಅಚ್ಛೇ ದಿನದ ಹುಡುಕಾಟ ನಡೆಸುತ್ತಿದ್ದಾರೆ. ಅಚ್ಛೇ ದಿನದ ಹೆಸರಿನಲ್ಲಿ ನಮ್ಮ ಜತೆ ಯೋಗ ಮಾಡಿಸಿದರು, ಕೈಗೆ ಪೊರಕೆ ಕೊಟ್ಟರು ಈಗ ಡಿಜಿಟಲ್ ಇಂಡಿಯಾ ಎನುತ್ತಿದ್ದಾರೆ ಎಂದು ಮೋದಿ ಬಗ್ಗೆ ನಗೆಯಾಡಿದರು.

ಆದರೆ, ಎಸ್ ಪಿ ಸರ್ಕಾರ 2012ರಲ್ಲಿ ನೀಡಿದ ಭರವಸೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ನಮ್ಮ ಮೇಲೆ ಜನತೆ ಭರವಸೆ ಇರಿಸಿದ್ದು ಈ ಭಾರಿಯೂ ಸೈಕಲ್​ಗೆ ಮತ ಚಲಾಯಿಸಲಿದ್ದಾರೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
UP Election 2017 : Akhilesh Yadav releases Samajwadi Party Manifesto
Please Wait while comments are loading...