ಮೋದಿ ಸಾಮ್ರಾಜ್ಯ ಗುಜರಾತಿನಲ್ಲಿ ಅಖಿಲೇಶ್ ಚಿತ್ರವಿರುವ ಶಾಲಾ ಬ್ಯಾಗ್‌!

Posted By:
Subscribe to Oneindia Kannada

ಸಾಮ್ರಾಜ್ಯ

ಅಹಮದಾಬಾದ್, ಜೂನ್ 14 : ಬಿಜೆಪಿ ಆಡಳಿತವಿರುವ ಗುಜರಾತ್‌ ನ ಛೋಟಾ ಉಡಿಪುರ ಜಿಲ್ಲೆಯಲ್ಲಿ ಅಖಿಲೇಶ್ ಯಾದವ್‌ ಅವರು ಸುದ್ದಿಯಲ್ಲಿದ್ದಾರೆ.

ಛೋಟಾ ಉಡಿಪುರ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್‌ ಅವರ ಭಾವಚಿತ್ರವಿರುವ 12 ಸಾವಿರ ಶಾಲಾ ಚೀಲ(ಸ್ಕೂಲ್‌ ಬ್ಯಾಗ್)ಗಳನ್ನು ವಿತರಿಸಲಾಗಿದೆ. ಮೋದಿ ಸಾಮ್ರಾಜ್ಯವಾಗಿರುವ ಗುಜರಾತ್ ನ ಶಾಲೆಗಳಲ್ಲಿ ಅಖಿಲೇಶ್ ಯಾದವ್‌ ಭಾವಚಿತ್ರವಿರುವ ಸ್ಕೂಲ್ ಬ್ಯಾಗ್ ಇದೀಗ ಎಲ್ಲರ ಉಬ್ಬೇರಿಸುವಂತೆ ಮಾಡಿದೆ.

Akhilesh Yadav makes an appearance on school bags distributed in Gujarat

ಶಾಲಾ ಚೀಲಗಳನ್ನು ಗುಜರಾತ್‌ ಸರ್ಕಾರ ಶಾಲಾ ದಾಖಲಾತಿ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ ನಡೆಯುವ 'ಶಾಲಾ ಪ್ರವೇಶೋತ್ಸವ'ಕಾರ್ಯಕ್ರಮದಡಿ ಒಂದನೇ ತರಗತಿ ವಿದ್ಯಾರ್ಥಿಗಳ ಸೇರ್ಪಡೆ ವೇಳೆ ವಿತರಿಸಲಾಗಿದೆ. ಈ ಬ್ಯಾಗ್‌ಗಳು ಅಖಿಲೇಶ್ ಯಾದವ್‌ ಅವರ ಭಾವಚಿತ್ರ ಒಳಗೊಂಡಿವೆ.

Akhilesh Yadav makes an appearance on school bags distributed in Gujarat

ವಾಸೆಡಿ ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ 'ಜಿಲ್ಲಾ ಪಂಚಾಯತ್ ಶಾಲಾ ಪ್ರವೇಶೋತ್ಸವ' ಕಾರ್ಯಕ್ರಮದಲ್ಲಿ ಅಖಿಲೇಶ್ ಯಾದವ್‌ ಅವರ ಭಾವಚಿತ್ರ ಹೊಂದಿರುವ ಬ್ಯಾಗ್‌ಗಳನ್ನು ಶಿಕ್ಷಕರು ಮೊದಲು ನೋಡಿದ್ದಾರೆ.

'ಜವಾಬ್ದಾರಿ ನಿರ್ವಹಣೆಯಲ್ಲಿ ಆಗಿರುವ ಲೋಪದ ವಿರುದ್ಧ ತನಿಖೆ ನಡೆಸಲಾಗುವುದು ಹಾಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ರಾಜ್ಯ ಶಿಕ್ಷಣ ಸಚಿವ ಭೂಪೇಂದ್ರಸಾ ಚುದಾಸಾಮ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A recent Gujarat government led school enrollment drive 'Shala Pravesh Utsav' tossed a surprise at officials after many of the 12,000 bags that were distributed to school children carried former Uttar Pradesh chief minister Akhilesh Yadav's image.
Please Wait while comments are loading...