ಅಖಿಲೇಶ್ ಯಾದವ್ ಇಮೇಜ್ ಬೆಳೆಸಿದ ಪ್ರೊಫೆಸರ್ ಯಾರು?

Posted By:
Subscribe to Oneindia Kannada

ಲಕ್ನೋ, ಜನವರಿ 06: ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಸಮಾಜವಾದಿ ಪಕ್ಷದಲ್ಲಿ ಕೌಟುಂಬಿಕ ಕಲಹ ಇದ್ದಂತೆ ಕಂಡು ಬಂದರೂ ಗ್ರಾಮೀಣ ಭಾಗದಲ್ಲಿ ಪಕ್ಷದ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ. ಸಿಎಂ ಅಖಿಲೇಶ್ ಯಾದವ್ ಅವರ ಇಮೇಜ್ ಬದಲಾಗಲು ಕಾರಣರಾದ ವ್ಯಕ್ತಿ ಬಗ್ಗೆ ಇಲ್ಲಿದೆ ಮಾಹಿತಿ...

ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತನ್ನ ತಂದೆಗೇ ಸಡ್ಡು ಹೊಡೆದಿದ್ದರೂ ಅವರ ಜನಪ್ರಿಯತೆಗೆ ಒಂದಿನಿತೂ ಕುಂದುಂಟಾಗಿಲ್ಲವೆಂಬ ಭಾವನೆಯಿದೆ. ಇದಕ್ಕೆ ಕಾರಣ ಬ್ರ್ಯಾಂಡ್ ಅಖಿಲೇಶ್ ಅನ್ನು ಗ್ರಾಮೀಣ ಭಾಗದ ಜನರ ಮುಂದಿಡಲು ಸರಕಾರ ಮತ್ತು ಜನರ ನಡುವೆ ಸಂರ್ಪ ಸೇತು ಬೆಳೆಸಲು ಇನ್ನಿಲ್ಲದ ಪ್ರಯತ್ನಗಳು ನಡೆಸಿ ಸೋತ ಬಳಿಕ ಹಾರ್ವರ್ಡ್ ಕೆನಡಿ ಸ್ಕೂಲ್ ನ ಪ್ರೊಫೆಸರ್ ಮೊರೆ ಹೋಗಲಾಯಿತು.[ಉತ್ತರಪ್ರದೇಶದಲ್ಲಿ ಸೈಕಲ್ 'ಬ್ರ್ಯಾಂಡ್'ಗಾಗಿ ಅಪ್ಪ-ಮಕ್ಕಳ ಕಾದಾಟ]

Akhilesh Yadav image makeover Harvard Kennedy School Steve Jarding

ಪ್ರೊ. ಸ್ಟೀವ್ ಜಾರ್ಡಿಂಗ್. ಜಾರ್ಡಿಂಗ್ ಅವರ ಹಳೆ ವಿದ್ಯಾರ್ಥಿ ಅದ್ವೈತ್ ವಿಕ್ರಮ್ ಸಿಂಗ್ ಅವರ ನೇತೃತ್ವದಲ್ಲಿ 100 ಜನರ ತಂಡ ಈಗ ಅಖಿಲೇಶ್ ಪ್ರಚಾರ ಕಾರ್ಯದ ಹೊಣೆ ಹೊತ್ತಿದೆ. ಅಖಿಲೇಶ್ ಅವರು ರಾಜ್ಯದಲ್ಲಿ ಹಲವು ವಿಭಾಗಗಳಲ್ಲಿ ಅಭಿವೃದ್ಧಿ ಸಾಧಿಸಲು ಸಫಲರಾಗಿದ್ದಾರೆ ಎಂಬುದನ್ನು ವಿಪಕ್ಷದ ಮುಖಂಡರೇ ಒಪ್ಪಿಕೊಂಡಿದ್ದಾರೆ.

ಹಾರ್ವರ್ಡ್ ನಲ್ಲಿ ಅದ್ವೈತ್ ಅವರು ಜಾರ್ಡಿಂಗ್ ಅವರ ಖ್ಯಾತ 'ಮೇಕಿಂಗ್ ಆಫ್ ಎ ಪಾಲಿಟೀಶಿಯನ್' ಕೋರ್ಸ್'ನಲ್ಲಿ ಭಾಗವಹಿಸಿದ್ದರು. ಜಾರ್ಡಿಂಗ್ ಅವರು ಬಾಂಗ್ಲಾದೇಶದ ಶೇಖ್ ಹಸೀನಾ ಸೇರಿದಂತೆ ವಿಶ್ವದ ಹಲವಾರು ರಾಜಕಾರಣಿಗಳ ರಾಜಕೀಯ ಸಲಹೆಗಾರರಾಗಿದ್ದವರು.

ಪ್ರಧಾನಿ ಮೋದಿಯ ಪ್ರಭಾವ ಹೆಚ್ಚಿದ್ದರೂ ಗ್ರಾಮೀಣ ಯುವಜನತೆ ಅಖಿಲೇಶ್ ಅವರಲ್ಲಿ ಆಶಾಕಿರಣ ಕಾಣುವಂತೆ ಮಾಡುವುದು ಈ ತಂಡದ ಉದ್ದೇಶವಾಗಿದೆ. ಉತ್ತರ ಪ್ರದೇಶದ ಒಂದು ಲಕ್ಷಕ್ಕೂ ಅಧಿಕ ಮತದಾನ ಬೂತ್ ಗಳನ್ನು ಗಣನೆಗೆ ತೆಗೆದುಕೊಂಡು ಅವರು ಲಕ್ಷಗಟ್ಟಲೆ ಜನರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.[ಮುಲಾಯಂ ಅಖಿಲೇಶ್ ನಾಟಕಕ್ಕೆ ಕೊನೆಗೂ ಬಿದ್ದ ಪರದೆ]

ಅಖಿಲೇಶ್ ಸರಕಾರದ ವಿವಿಧ ಯೋಜನೆಗಳಾದ ಸಮಾಜವಾದಿ ಪಿಂಚಣಿ ಯೋಜನೆ, ಕಾಮಧೇನು ಡೈರಿ ಯೋಜನೆ, ನೀರಾವರಿ ಯೋಜನೆ, 2017ರ ಚುನಾವಣೆ ನಂತರ ಸ್ಮಾರ್ಟ್ ಫೋನ್ ವಿತರಣೆ ಮುಂತಾದ ಯೋಜನೆಗಳ ರಾಯಭಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಲ್ಲಾ ಜಾತಿ, ಧರ್ಮಗಳ ಮಂದಿಯೂ ಸಮಾಜವಾದಿ ವಿಕಾಸ್ ಯೋಜನಾ ಪ್ರಮುಖ್ ಆಗಿದ್ದಾರೆ.

ಮೋದಿ ಅವರ ಜನಪ್ರಿಯ ಯೋಜನೆಗೆ ತಕ್ಕಂತೆ ತಂತ್ರಗಾರಿಕೆ ರೂಪಿಸಿರುವ ಈ ತಂಡ ಅಖಿಲೇಶ್ ಅವರ ಜನಪ್ರಿಯತೆಯನ್ನು ಹಿಗ್ಗಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಅದ್ವೈತ್ ವಿಕ್ರಮ್ ಸಿಂಗ್ ಅವರ ತಂಡ ಪಕ್ಷದ ಕಾರ್ಯಕರ್ತರ ಬಲವರ್ಧನೆಗಿಂತ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ತುಂಬಿ, ಪಕ್ಷದ ಚಿನ್ಹೆ ಒಂದು ವೇಳೆ ಬದಲಾದರೂ ಅಖಿಲೇಶ್ ಅವರ ಪರ ನಿಲ್ಲುವಂಥ ವಾತಾವರಣ ಸೃಷ್ಟಿಸಿದ್ದಾರೆ. ಚುನಾಣೆ ಹತ್ತಿರಾಗುತ್ತಿದ್ದಂತೆ ಇನ್ನೇನು ಯೋಜನೆ ಅನುಷ್ಠಾನಗೊಳಿಸುತ್ತಾರೋ ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Akhilesh Yadav achieved an image makeover in rural areas of Uttar Pradesh this was made possible by Steve Jarding, a public policy professor at the Harvard Kennedy School.
Please Wait while comments are loading...