ನಮ್ಮ ಗೆಲುವು ಬಡವರಿಗೆ, ಅಲ್ಪಸಂಖ್ಯಾತರಿಗೆ ಅರ್ಪಣೆ: ಅಖಿಲೇಶ್

ಲಕ್ನೋ, ಮಾರ್ಚ್ 15: "ಉಪಚುನಾವಣೆಯ ನಮ್ಮ ಗೆಲುವನ್ನು ನಾವು ಬಡವರಿಗೆ, ಅಲ್ಪಸಂಖ್ಯಾತರಿಗೆ ಅರ್ಪಿಸುತ್ತೇವೆ" ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಿನ್ನೆ ಹೊರಬಿದ್ದ ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಈ ಗೆಲುವು ಬಡವರು, ಕಾರ್ಮಿಕರು, ರೈತರು, ಯುವಕರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಗೆಲುವು... ಇದೊಂದು ಮಹಾನ್ ವಿಜಯ" ಎಂದು ಹೆಮ್ಮೆಯಿಂದ ಬಣ್ಣಿಸಿದರು.

ಗೋರಖ್ ಪುರ ಕ್ಷೇತ್ರದಲ್ಲಿ ಗೆದ್ದ ಪ್ರವೀಣ್ ನಿಶಾದ್ ಮತ್ತು ಫುಲ್ಪುರದಲ್ಲಿ ಗೆದ್ದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಸಂಸತ್ತಿನಲ್ಲಿ ಇವರು ಸಾರ್ವಜನಿಕರ ಧ್ವನಿಯಾಗಲಿದ್ದಾರೆ ಎಂದರು.

Akhilesh dedicates bypoll victory to poor, minorities

"ಫುಲ್ಪುರದಲ್ಲಿ ಕಮಲ ಬಾಡಿದೆ. ಇಲ್ಲಿನ ಜನರಿಗೆ ನಾನು ಆಭಾರಿ. ದುರಹಂಕಾರ ಮತ್ತು ಸಭ್ಯವಲ್ಲದ ಭಾಷೆಗಳಿಗೆ ಇಲ್ಲಿನ ಜನರು ಸರಿಯಾದ ಉತ್ತರ ನೀಡಿದ್ದಾರೆ" ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಉಪಚುನಾವಣೆಯಲ್ಲಿ ಗೆಲ್ಲುವುದಕ್ಕೆ ಕಾರಣವಾದ ಎಲ್ಲ ಕಾರ್ಯಕರ್ತರಿಗೂ ಅವರು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಿದರು.
ಫುಲ್ಪುರ್ ನಲ್ಲಿ ಸಮಾಜವಾದಿ ಪಕ್ಷದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್, 3,37,683 ಮತಗಳನ್ನು ಪಡೆದು, ಬಿಜೆಪಿಯ ಕೌಶಲೇಂದ್ರ ಸಿಂಗ್ ಪಟೇಲ್(2,80,535) ಅವರನ್ನು 59,613 ಮತಗಳ ಅಂತರದಿಂದ ಸೋಲಿಸಿದರು.

ಯೋಗಿ ಆದಿತ್ಯನಾಥ್ ಕ್ಷೇತ್ರವಾದ ಗೋರಖ್ ಪುರದಲ್ಲಿ ಎಸ್ಪಿಯ ಪ್ರವೀಣ್ ಕುಮಾರ್ ನಿಶಾದ್, ಬಿಜೆಪಿಯ ಉಪೇಂದ್ರ ದತ್ ಶುಕ್ಲಾ ಅವರನ್ನು ಸೋಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+