ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆ: ಟಾಪ್ ಸ್ಪಾಟ್ ಯಾವವು?

|
Google Oneindia Kannada News

ನವದೆಹಲಿ, ನವೆಂಬರ್‌ 8: ಇತ್ತೀಚೆಗೆ ದೆಹಲಿಯಲ್ಲಿ ವಾಯುಮಾಲಿನ್ಯ ಕಳಪೆಮಟ್ಟವನ್ನು ತಲುಪಿದೆ. ಇದರಿಂದಾಗಿ ಬಹುತೇಕ ಶಾಲಾ-ಕಾಲೇಜುಗಳಿಗೆ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೆಹಲಿ ಮಾತ್ರವಲ್ಲದೆ ಕಲುಷಿತ ಗಾಳಿಯನ್ನು ಹೊಂದಿದ ಭಾರತೀಯ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

2022 ರಲ್ಲಿ ಭಾರತದಲ್ಲಿ ವಾಯು ಮಾಲಿನ್ಯದ ಮಟ್ಟವು ಹದಗೆಟ್ಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನವೆಂಬರ್ 7 ರಂದು 163 ಭಾರತೀಯ ನಗರಗಳಲ್ಲಿ ಬಿಹಾರದ ಕತಿಹಾರ್ ಅತಿ ಹೆಚ್ಚು AQI (ವಾಯು ಗುಣಮಟ್ಟ ಸೂಚ್ಯಂಕ) 360 ಅನ್ನು ಹೊಂದಿತ್ತು.

Delhi Air Quality Index : ಕಳಪೆ ಮಟ್ಟಕ್ಕೆ ತಲುಪಿದ ನವದೆಹಲಿ ಗಾಳಿಯ ಗುಣಮಟ್ಟ Delhi Air Quality Index : ಕಳಪೆ ಮಟ್ಟಕ್ಕೆ ತಲುಪಿದ ನವದೆಹಲಿ ಗಾಳಿಯ ಗುಣಮಟ್ಟ

ದೆಹಲಿಯ ಎಕ್ಯೂಐ 354, ನೋಯ್ಡಾ 328 ಮತ್ತು ಗಾಜಿಯಾಬಾದ್ 304 ರಷ್ಟಿದೆ ಎಂದು ಡೇಟಾ ತೋರಿಸುತ್ತದೆ. ಬೇಗುಸರಾಯ್ (ಬಿಹಾರ), ಬಲ್ಲಬ್‌ಗಢ್, ಫರಿದಾಬಾದ್, ಕೈತಾಲ್ ಮತ್ತು ಹರಿಯಾಣದ ಗುರುಗ್ರಾಮ್ ಮತ್ತು ಗ್ವಾಲಿಯರ್ (ಎಂಪಿ) ಸೋಮವಾರ ಅತ್ಯಂತ ಕಲುಷಿತ ನಗರಗಳಲ್ಲಿ ಸೇರಿವೆ.

 ಅತ್ಯಂತ ಕಲುಷಿತ ಭಾರತೀಯ ನಗರಗಳ ಪಟ್ಟಿ ಬಿಡುಗಡೆ

ಅತ್ಯಂತ ಕಲುಷಿತ ಭಾರತೀಯ ನಗರಗಳ ಪಟ್ಟಿ ಬಿಡುಗಡೆ

ಡೇಟಾ ಭಾರತಕ್ಕೆ ಎಚ್ಚರಿಕೆಯ ಕರೆಯಾಗಿದ್ದು ಮತ್ತಷ್ಟು ಹದಗೆಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಇದಕ್ಕೆ ಕಾರಣ ಕೃಷಿ ಬೆಂಕಿ, ವಾಹನಗಳಿಂದ ಹೊರಸೂಸುವ ಹೊಗೆ ಆಗಿದೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ಪಂಜಾಬ್‌ನಲ್ಲಿ ಬುಧವಾರ 3,634 ಕೃಷಿ ಬೆಂಕಿಗಳನ್ನು ವರದಿ ಮಾಡಿದೆ. ಇದು ಈ ವರ್ಷದಲ್ಲಿ ದಾಖಲಾದ ಅತಿ ಹೆಚ್ಚು ಕೃಷಿ ಬೆಂಕಿ ಆಗಿದೆ.

 ಟ್ರಕ್‌ಗಳ ಮೇಲೆ ಕ್ರಮಕ್ಕೆ ಮನವಿ

ಟ್ರಕ್‌ಗಳ ಮೇಲೆ ಕ್ರಮಕ್ಕೆ ಮನವಿ

ವಾಹನಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಪರಿಸರ ಸಚಿವ ಗೋಪಾಲ್ ರೈ ಅವರು ಉತ್ತರ ಪ್ರದೇಶ ಮತ್ತು ಹರಿಯಾಣ ಮುಖ್ಯಮಂತ್ರಿಗಳಿಗೆ ರಾಜಧಾನಿಯ ಗಡಿಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಅನಗತ್ಯ ಸರಕುಗಳನ್ನು ಸಾಗಿಸುವ ಟ್ರಕ್‌ಗಳ ಮೇಲೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು.

 ದೀರ್ಘಕಾಲದ ಉಸಿರಾಟದ ತೊಂದರೆ

ದೀರ್ಘಕಾಲದ ಉಸಿರಾಟದ ತೊಂದರೆ

ಭೂಮಿ ಮತ್ತು ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸಫರ್ ಪ್ರಕಾರ, ಸಾರಿಗೆಯಿಂದ ದೆಹಲಿಯ ಗಾಳಿಯ ಗುಣಮಟ್ಟ ಶುಕ್ರವಾರ ಶೇ 30 ರಿಂದ ಶನಿವಾರ ಶೇ 21ಕ್ಕೆ ಇಳಿದಿದೆ. ಸಾರಿಗೆ ಕಲುಷಿತ ಗಾಳಿಯು ವಾತಾವರಣವನ್ನು ಹಾಳು ಮಾಡುತ್ತದೆ. ಪೋಸ್ಫಿಯರ್ ಮತ್ತು ಸ್ಟ್ರಾಟೋಸ್ಪಿಯರ್ ಅನ್ನು ಫಾರ್ಮ್ ಬೆಂಕಿಯ ಹೊಗೆ ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಒಯ್ಯುತ್ತದೆ. ಕಲುಷಿತ ಸೂಕ್ಷ್ಮ ಕಣಗಳು ರಕ್ತವನ್ನು ಪ್ರವೇಶಿಸಬಹುದು. ಶ್ವಾಸಕೋಶ ಮತ್ತು ಹೃದಯವನ್ನು ಪ್ರವೇಶಿಸಬಹುದು. ಇದು ದೀರ್ಘಕಾಲದ ಉಸಿರಾಟದ ಕಾಯಿಲೆಗಳನ್ನು ಹೆಚ್ಚಿಸಬಹುದು.

 ಭಾರತೀಯರ ಅಕಾಲಿಕ ಸಾವು

ಭಾರತೀಯರ ಅಕಾಲಿಕ ಸಾವು

ವಿಷಕಾರಿ ಗಾಳಿಯು ಆರೋಗ್ಯಕರ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಲ್ಲದೆ, ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಅಕಾಲಿಕ ಮರಣವನ್ನು ಉಂಟುಮಾಡುತ್ತದೆ. ಗ್ರೀನ್‌ಪೀಸ್ ಪ್ರಕಾರ, ವಾಯು ಮಾಲಿನ್ಯದಿಂದಾಗಿ 2017 ರಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.

English summary
Central Pollution Control Board has released a list of the most polluted Indian cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X