ಆಕಾಶದಲ್ಲಿ ಹೊಯ್ದಾಡಿದ ಏರ್ ಇಂಡಿಯಾ ವಿಮಾನ, ಬೆಚ್ಚಿಬಿದ್ದ ಪ್ರಯಾಣಿಕರು

Recommended Video

      ಏರ್ ಇಂಡಿಯಾ ವಿಮಾನದಲ್ಲಿ ಅನಾಹುತ | ಭಯಾನಕ ವಿಡಿಯೋ | Oneindia Kannada

      ನವದೆಹಲಿ, ಏಪ್ರಿಲ್ 23: ಅಮೃತಸರದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದ ವಿಮಾನವೊಂದು ಏಪ್ರಿಲ್ 19ರಂದು ವಿಪರೀತ ಹೊಯ್ದಾಟಕ್ಕೆ ಗುರಿಯಾಗಿದೆ. ಪರಿಣಾಮ ಮೂವರು ಗಾಯಗೊಂಡಿದ್ದಾರೆ.

      ಗಾಳಿಯಲ್ಲಿ ವಿಮಾನದ ಹೊಯ್ದಾಟ ಯಾವ ಮಟ್ಟಕ್ಕೆ ಇತ್ತು ಎಂದರೆ ವಿಮಾನದ ಕಿಟಕಿಯ ಗಾಜೊಂದು ಕಳಚಿ ಬಿದ್ದಿದೆ. ಈ ಸಂದರ್ಭದಲ್ಲಿ ಪ್ರಯಾಣೀಕರಿಗೆ ಆಮ್ಲಜನಕದ ಮಾಸ್ಕ್ ಗಳನ್ನು ತಕ್ಷಣ ನೀಡಲಾಗಿತ್ತು.

      ಬೋಯಿಂಗ್ ಡ್ರೀಮ್ ಲೈನರ್ ಸರಣಿಯ ವಿಮಾನ 8,000 ಅಡಿಯಿಂದ 21,000 ಅಡಿಗೆ ಏರುವ ಸಂದರ್ಭ ಈ ಅವಘಡ ಸಂಭವಿಸಿದೆ. ಸುಮಾರು 10 ರಿಂದ 15 ನಿಮಿಷಗಳ ಕಾಲ ವಿಮಾನ ಹೊಯ್ದಾಡಿದ್ದು ಪ್ರಯಾಣಿಕರು ಭಯಬೀತರಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.

      Air India flight hits turbulence, three injured

      ವಿಮಾನ ಹೊಯ್ದಾಡಿರುವುದರ ಬಗ್ಗೆ ವಿಮಾನಯಾನ ಸಂಸ್ಥೆ ಮತ್ತು ವಿಮಾನಯಾನ ಸಚಿವಾಲಯ ತನಿಖೆ ನಡೆಸುತ್ತಿವೆ. ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬೋರ್ಡ್ ಗೆ ಈ ಸಂಬಂಧ ತನಿಖೆ ನಡೆಸುವಂತೆಯೂ ಸೂಚಿಸಲಾಗಿದೆ.

      ಒಬ್ಬರು ಪ್ರಯಾಣಿಕರು ಸೀಟ್ ಬೆಲ್ಟ್ ಹಾಕದ ಕಾರಣ ಹೊಯ್ದಾಟದಿಂದ ಅವರ ತಲೆಗೆ ಗಾಯವಾಗಿದೆ. ಇನ್ನಿಬ್ಬರಿಗೆ ಕಿಟಕಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+