ಭೂ ಸ್ಪರ್ಶದ ವೇಳೆ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟ
ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುವಾಗ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟ. ಜಮ್ಮವಿನ ವಿಮಾನ ನಿಲ್ದಾಣದಲ್ಲಿ ಜೂನ್ 9ರಂದು ಮಧ್ಯಾಹ್ನ ನಡೆದ ಘಟನೆ. ವಿಮಾನದಲ್ಲಿದ್ದ ಎಲ್ಲಾ 134 ಜನರು ಸುರಕ್ಷಿತ. ದೆಹಲಿಯಿಂದ ಜಮ್ಮುವಿಗೆ ಆಗಮಿಸಿದ್ದ ವಿಮಾನ.
ಶ್ರೀನಗರ, ಜೂನ್ 9: ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುವಾಗ ಭೂಸ್ಪರ್ಶದ ವೇಳೆ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟಗೊಂಡ ಘಟನೆ ಜಮ್ಮು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ 2:15ರ ಸುಮಾರಿಗೆ ನಡೆದಿದೆ.
ಘಟನೆಯ ವೇಳೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. AI821 ಮಾದರಿಯ ವಿಮಾನ ಈ ಅವಗಢಕ್ಕೀಡಾಗಿತ್ತು.
[ಶೀಘ್ರದಲ್ಲೇ ಏರ್ ಇಂಡಿಯಾ ಖಾಸಗೀಕರಣ?]

ಈ ವಿಮಾನವು ದೆಹಲಿಯಿಂದ ಆಗಮಿಸಿತ್ತು. ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷ ಕಾಣಿಸಿಕೊಂಡಿರಲಿಲ್ಲ.
ವಿಮಾನದಲ್ಲಿ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಸೇರಿ 134 ಜನರಿದ್ದರು. ಭೂಸ್ಪರ್ಶದ ವೇಳೆ ಉಂಟಾದ ಅವಗಢದ ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿಕೊಳ್ಳಲಾಯಿತು.











Click it and Unblock the Notifications