Air India: ಏರ್ ಇಂಡಿಯಾ ವಿಮಾನ 3 ಗಂಟೆ ಆಗಸದಲ್ಲೇ ಗಿರಕಿ: ಒಟ್ಟು 140 ಜನರು ಇದ್ದ ವಿಮಾನ...
ಭಾರತೀಯರು ಇಂದು ಕನಸು & ಮನಸ್ಸಿನಲ್ಲೂ ಮರೆಯದ ಘಟನೆ ಒಂದು ನಡೆದಿದೆ. ಈ ದಿನ ಭಾರತದ ವಿಮಾನಯಾನ ಇತಿಹಾಸದಲ್ಲೇ ಒಂದು ದೊಡ್ಡ ದುರಂತಕ್ಕೆ ಸಾಕ್ಷಿಯಾಗುವ ಭಯ ಆವರಿಸಿತ್ತು. ತಾಂತ್ರಿಕ ದೋಷದ ಕಾರಣ ದಿಢೀರ್ ಏರ್ ಇಂಡಿಯಾ ವಿಮಾನ ನೆಲಕ್ಕೆ ಬೀಳುವ ಅಪಾಯ ಕೂಡ ಆವರಿಸಿತ್ತು. ಅದರಲ್ಲೂ, ಇಡೀ ದೇಶದಲ್ಲಿ ಈ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಹೀಗಿದ್ದಾಗಲೇ, ಏರ್ ಇಂಡಿಯಾ ವಿಮಾನ 3 ಗಂಟೆ ಆಗಸದಲ್ಲೇ ಗಿರಕಿ ಹೊಡೆದು, ಒಟ್ಟು 140 ಜನರು ಇದ್ದ ವಿಮಾನ...
ಅಂದಹಾಗೆ, ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್‌ನಲ್ಲಿ ದೋಷ ಕಂಡುಬಂದಿತ್ತು. ಹೀಗೆ ವಿಮಾನದ ಹೈಡ್ರಾಲಿಕ್‌ನಲ್ಲಿ ದೋಷ ಕಂಡುಬಂದ ವಿಚಾರ ತಿಳಿದ ತಕ್ಷಣವೇ ಪೈಲಟ್ ತುರ್ತು ಲ್ಯಾಂಡಿಂಗ್ ಘೋಷಣೆ ಮಾಡಿದ್ದರು. ಆದರೆ ತುರ್ತು ಲ್ಯಾಂಡಿಂಗ್ ಮಾಡಲು ಹಲವು ಅಡೆತಡೆ ಎದುರಾದವು. ವಿಚಾರ ತಿಳಿದ ತಕ್ಷಣ ತಮಿಳುನಾಡು ಮಾತ್ರವಲ್ಲ ಇಡೀ ಭಾರತದಲ್ಲೇ ಈ ಬಗ್ಗೆ ಭಯದ ವಾತಾವರಣ ನಿರ್ಮಾಣ ಆಗಿತ್ತು. ಈ ಭಯ ಯಾಕೆ ಅಂದ್ರೆ ಸಮಸ್ಯೆಗೆ ಸಿಲುಕಿದ್ದ ವಿಮಾನದಲ್ಲಿ ಸುಮಾರು 140 ಜನರು ಇದ್ದರು. ಹೀಗಿದ್ದಾಗಲೇ ಸುಮಾರು 03 ಗಂಟೆಗಳ ಕಾಲ ಏರ್ ಇಂಡಿಯಾ ವಿಮಾನ ಗಾಳಿಯಲ್ಲಿ ಸುತ್ತಿದ ನಂತರ ಭಯ ಇನ್ನಷ್ಟು ಹೆಚ್ಚಾಗಿತ್ತು...

ವಿಮಾನಯಾನ ಸಚಿವರು ಹೇಳಿದ್ದು ಏನು?
ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ ವ್ಯವಸ್ಥೆ ಕೈಕೊಟ್ಟ ನಂತರ, ಸುಮಾರು 03 ಗಂಟೆಗಳ ಕಾಲ ಏರ್ ಇಂಡಿಯಾ ವಿಮಾನ ಗಾಳಿಯಲ್ಲಿ ಸುತ್ತಾಡಿ ಕೊನೆಗೂ ಸೇಫ್ ಆಗಿ ಲ್ಯಾಂಡಿಂಗ್ ಆಗಿದೆ. ಈ ಕುರಿತು ಈಗ ವಿಮಾನಯಾನ ಸಚಿವರಾದ ರಾಮ್ ಮೋಹನ್ ನಾಯ್ಡು ಅವರು ಮಾಹಿತಿ ನೀಡಿದ್ದು, ಘಟನೆಯ ಹಿನ್ನೆಲೆ ಬಗ್ಗೆ ತಿಳಿಸಿದ್ದಾರೆ. ಹಾಗಾದ್ರೆ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ತಮ್ಮ ಪತ್ರದಲ್ಲಿ ಹೇಳಿರುವುದು ಏನು? ಮುಂದೆ ಓದಿ.
ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಎಮೆರ್ಜೆನ್ಸಿ ಲ್ಯಾಂಡಿಂಗ್ ಬಗ್ಗೆ ಇದೀಗ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು, 'ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಎಎಕ್ಸ್‌ಬಿ-613 ಹೈಡ್ರಾಲಿಕ್ ವೈಫಲ್ಯವಾದ ನಂತರ ತಮಿಳುನಾಡು ರಾಜ್ಯದ ತಿರುಚ್ಚಿ ಏರ್ಪೋರ್ಟ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಲು ಹಾಗೂ ವಿಮಾನದಲ್ಲಿ ಇದ್ದ 141 ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಿಮಾನ ನಿಲ್ದಾಣದ ಸಿಬ್ಬಂದಿ ಎಲ್ಲಾ ರೀತಿ ಕ್ರಮ ಕೈಗೊಂಡಿದ್ದರು. ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಅಗತ್ಯ ವ್ಯವಸ್ಥೆ ಮಾಡುವಂತೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೂಚಿಸಲಾಗಿದೆ.' ಎಂದು ತಿಳಿಸಿದ್ದಾರೆ.
ಎಂ.ಕೆ. ಸ್ಟಾಲಿನ್ ಅವರಿಂದ ಶ್ಲಾಘನೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೂಡ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ IX613 ಸುರಕ್ಷಿತವಾಗಿ ಲ್ಯಾಂಡ್ ಆಗಲು ಹಾಗೂ ಆ ವಿಮಾನದಲ್ಲಿ ಇದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲು ಶ್ರಮ ವಹಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಪ್ಟನ್ ಮತ್ತು ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.












Click it and Unblock the Notifications