ಏರ್ ಇಂಡಿಯಾ ಪೈಲಟ್ ಮತ್ತು ಸಿಬ್ಬಂದಿಗೆ 'ಜೈ ಹಿಂದ್' ಹೇಳಲು ಆದೇಶ

ನವದೆಹಲಿ, ಮಾರ್ಚ್‌ 04: ಏರ್ ಇಂಡಿಯಾ ಸಂಸ್ಥೆಯು ತನ್ನ ವಿಮಾನ ಸೇವಾ ಸಿಬ್ಬಂದಿಗೆ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆಗಳ ನಂತರ 'ಜೈ ಹಿಂದ್' ಎಂದು ಹೇಳುವಂತೆ ಆದೇಶ ಮಾಡಿದೆ.

ಏರ್‌ ಇಂಡಿಯಾ ನಿರ್ದೇಶಕ ಅಮಿತಾಬ್ ಸಿಂಗ್ ಅವರು ಈ ಆದೇಶ ಹೊರಡಿಸಿದ್ದು, ವಿಮಾನ ಸೇವಾ ಸಿಬ್ಬಂದಿ ಮಾತ್ರವೇ ಅಲ್ಲದೆ ಕಾಕ್‌ಪೀಟ್‌ನಿಂದ ಹೊರಡುವ ಸೂಚನೆಗಳ ನಂತರವೂ 'ಜೈ ಹಿಂದ್' ಎಂದು ಹೇಳುವಂತೆ ಆದೇಶಿಸಲಾಗಿದೆ.

ಆದೇಶವು ತತ್‌ಕ್ಷಣದಿಂದ ಪಾಲಿಸುವಂತೆ ಸೂಚಿಸಲಾಗಿದ್ದು, ಇನ್ನು ಮುಂದೆ ಏರ್‌ ಇಂಡಿಯಾದ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ಸೂಚನೆಗಳ ನಂತರ 'ಜೈ ಹಿಂದ್' ಕೇಳಿಸಿಕೊಳ್ಳುತ್ತಾರೆ.

Air Andia directs crew to say jai hind after every announcement

ಇದೇ ರೀತಿಯ ಆದೇಶವನ್ನು 2016 ರಲ್ಲಿ ಏರ್‌ ಇಂಡಿಯಾದ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಶ್ವಿನಿ ಲೋಹಾನಿ ಅವರು ಮಾಡಿದ್ದರು. ಆದರೆ ಅದು ವಿವಿಧ ಕಾರಣಗಳಿಗಾಗಿ ಪಾಲಿಸಲಾಗಿರಲಿಲ್ಲ. ಈಗ ಮತ್ತೆ ಆದೇಶ ಹೊರಡಿಸಲಾಗಿದೆ.

ವಿಮಾನದ ಕ್ಯಾಪ್ಟನ್, ಸೇವಾ ಸಿಬ್ಬಂದಿಗಳು ಪ್ರಯಾಣಿಕರ ಜೊತೆ ಸದಾ ಪರಸ್ಪರ ಸಂಪರ್ಕ ಹೊಂದಿರಲೇಬೇಕಾಗಿರುತ್ತದೆ. ಪ್ರತಿ ಸೂಚನೆಯ ನಂತರ ಜೈ ಹಿಂದ್ ಹೇಳುವುದರಿಂದ ಉತ್ತಮ ವಾತಾವರಣ ವಿಮಾನದಲ್ಲಿ ಉಂಟಾಗುತ್ತದೆ. ಪ್ರಯಾಣಿಕರ, ವಿಮಾನ ಸಿಬ್ಬಂದಿಯ ನಡುವೆ ಬಂಧ ಏರ್ಪಡುತ್ತದೆ ಎಂದು ಏರ್‌ ಇಂಡಿಯಾ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+