ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವುದಿಲ್ಲ ಆದರೆ... ಏಮ್ಸ್ ನಿರ್ದೇಶಕರು ಹೇಳುವುದೇನು?

|
Google Oneindia Kannada News

ನವದೆಹಲಿ, ಮೇ 25: ಕೊರೊನಾದ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಏಮ್ಸ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯವು ಕೂಡ ಹೇಳಿಕೆ ನೀಡಿದ್ದು, ಕೊರೊನಾ ಮೂರನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ಅಪಾಯ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿತ್ತು.

ಕರ್ನಾಟಕದಲ್ಲಿ ಯಾರಿಗೂ ಸಿಗುವುದಿಲ್ಲ ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕೆಕರ್ನಾಟಕದಲ್ಲಿ ಯಾರಿಗೂ ಸಿಗುವುದಿಲ್ಲ ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ

ಈ ಮೂಲಕ 3ನೇ ಅಲೆಯಲ್ಲಿ ಸೋಂಕಿಗೆ ಹೆಚ್ಚು ಮಕ್ಕಳು ತುತ್ತಾಗಲಿದ್ದಾರೆ ಎಂಬ ವರದಿಯನ್ನು ಅಲ್ಲಗಳೆದಿದೆ. ಗಾಳಿ ಮೂಲಕವೂ ಬ್ಲ್ಯಾಕ್ ಫಂಗಸ್ ಹರಡಬಲ್ಲದು ಎಂದು ಏಮ್ಸ್ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ಶಿಲೀಂಧ್ರವು ಆರೋಗ್ಯವಂತ ವ್ಯಕ್ತಿಯ ದೇಹ ಹೊಕ್ಕರೂ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕಪ್ಪು ಶಿಲೀಂಧ್ರವು ಶ್ವಾಸಕೋಶಕ್ಕೆ ಪ್ರವೇಶಿಸಬಹುದು, ಆದರೆ ಆ ಸಾಧ್ಯತೆ ಕಡಿಮೆ ಇರುತ್ತದೆ, ನಮ್ಮ ದೇಶಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ದೇಹವು ಅದರ ವಿರುದ್ಧ ಹೋರಾಡಲು ಸಮರ್ಥವಾಗಿರುತ್ತದೆ ಎಂದು ಏಮ್ಸ್‌ನ ಡೋಕ್ರೈನಾಲಜಿ ಮತ್ತು ಮೆಟಾಬಾಲಿಸಂ ವಿಭಾಗದ ಪ್ರೊ.ಡ. ನಿಖಿಲ್ ಟಂಡನ್ ಹೇಳಿದ್ದಾರೆ.

ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ 2-3 ಹಂತದ ಪ್ರಯೋಗಕ್ಕೆ ಜೂನ್‌ನಲ್ಲಿ ಚಾಲನೆ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ 2-3 ಹಂತದ ಪ್ರಯೋಗಕ್ಕೆ ಜೂನ್‌ನಲ್ಲಿ ಚಾಲನೆ

ಭಯ ಬೇಡ, ವೈಟ್ ಫಂಗಸ್, ಬ್ಲ್ಯಾಕ್ ಫಂಗಸ್‌ನಷ್ಟು ಅಪಾಯಕಾರಿಯಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ಎಂಡಿ ಡಾ.ಸುರೇಶ್ ಕುಮಾರ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

 ಮಕ್ಕಳಿಗೆ ಬೇರೆ ರೀತಿಯ ಸಮಸ್ಯೆ

ಮಕ್ಕಳಿಗೆ ಬೇರೆ ರೀತಿಯ ಸಮಸ್ಯೆ

ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಸ್ಪಷ್ಟನೆ ನೀಡಿದೆ, ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ ಎಂದು ಹೇಳಲು ಬರುವುದಿಲ್ಲ. ಅಂಥ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಹೇಳಿದೆ. ಮಕ್ಕಳಿಗೆ ಬೇರೆ ಬೇರೆ ರೀತಿಯ ಸಮ್ಯೆಗಳು ಕಾಣಿಸಬಹುದು, ಮಾನಸಿಕ ಒತ್ತಡ, ಸ್ಮಾರ್ಟ್ ಫೋನ್ ಅಡಿಕ್ಷನ್ ಹಾಗೂ ಶೈಕ್ಷಣಿಕ ಸವಾಲುಗಳಿಂದ ಬಳಲಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

 ದೇಶದಲ್ಲಿ ಸೋಂಕು ಕಡಿಮೆ

ದೇಶದಲ್ಲಿ ಸೋಂಕು ಕಡಿಮೆ

ದೇಶದಲ್ಲಿ ಕಳೆದ 17 ದಿನಗಳಿಂದ ಸೋಂಕು ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ 15 ವಾರಗಳಿಂದ ಕೊರೊನಾ ಪರೀಕ್ಷೆಗಳು ಹೆಚ್ಚಾಗುತ್ತಿವೆ.

 ರಾಜ್ಯದಲ್ಲಿ ಸೋಂಕು ಇಳಿಕೆ

ರಾಜ್ಯದಲ್ಲಿ ಸೋಂಕು ಇಳಿಕೆ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಸೋಮವಾರ 25,311 ಮಂದಿಗೆ ಸೋಂಕು ತಗುಲಿದ್ದರೆ, 57,333 ಮಂದಿಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 5701 ಮಂದಿಗೆ ಸೋಂಕು ಸೋಂಕು ತಗುಲಿದ್ದು, 34378 ಮಂದಿ ಗುಣಮುಖರಾಗಿದ್ದಾರೆ. ಆದರೆ ಸಾವಿನ ಸಂಖ್ಯೆ ಮಾತ್ರ ಸೋಮವಾರವೂ ಕಡಿಮೆ ಆಗಿಲ್ಲ. ರಾಜ್ಯದಲ್ಲಿ 529, ಬೆಂಗಳೂರಿನಲ್ಲೇ 297 ಮಂದಿ ಮೃತಪಟ್ಟಿದ್ದಾರೆ.

 ಪಾಸಿಟಿವಿಟಿ ದರ ಎಷ್ಟಿದೆ?

ಪಾಸಿಟಿವಿಟಿ ದರ ಎಷ್ಟಿದೆ?

ಸದ್ಯ ಶೇ.8.9ರಷ್ಟುಪಾಸಿಟಿವಿಟಿ ದರ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈಗ 27.20 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಒಡಿಶಾ ರಾಜ್ಯಗಳು ಶೇ.71.62ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿವೆ.

Recommended Video

ಬ್ಲಾಕ್ ಫಂಗಸ್ ಕಾಯಿಲೆ ಹೇಗೆಲ್ಲಾ ಹರಡುತ್ತೆ ಗೊತ್ತಾ? | Oneindia Kannada

English summary
AIIMS Director Randeep Guleria said that there is no indication that children will be severely or more affected in the third wave of COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X