ಶಶಿಕಲಾ ನಟರಾಜನ್ ಮತ್ತು ಮನ್ನಾರ್ ಗುಡಿ ಗ್ಯಾಂಗ್

ಶಶಿಕಲಾ ನಟರಾಜನ್ ಸಿಎಂ ಹುದ್ದೆಗೇರಲು ಒಂದೇ ಮೆಟ್ಟಲು ಕೆಳಗಿದ್ದಾರೆ. ತಾನೇ ಬೆಳೆಸಿದ ಮನ್ನಾರ್ ಗುಡಿ ಮಾಫಿಯಾ ತಮಿಳುನಾಡಿನ ಅಧಿಕಾರವನ್ನು ನೇರವಾಗಿ ಅನುಭವಿಸುತ್ತದೆಯಾ?

ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ನಟರಾಜನ್, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ದಿನ ಹತ್ತಿರ ಬರುತ್ತಿದೆ. ಕಾನೂನು ತೊಡಕು ಎದುರಾಗಿದ್ದರೂ, ಅದನ್ನೆಲ್ಲಾ ಮೀರಿ ಇನ್ನೊಂದು ವಾರದೊಳಗೆ ಶಶಿಕಲಾ ಪಟ್ಟಾಭಿಷೇಕವಾಗುವುದು ಹೆಚ್ಚುಕಮ್ಮಿ ಗ್ಯಾರಂಟಿ.

ಎಂಜಿಆರ್ ನಿಧನದ ನಂತರ ದಿವಂಗತ ಮುಖ್ಯಮಂತ್ರಿ ಜಯಲಲಿತಾಗೆ ಮೂರ್ನಾಲ್ಕು ದಶಕಗಳ ಕಾಲ ಸರ್ವಸ್ವದಂತಿದ್ದ ಶಶಿಕಲಾ ನಟರಾಜನ್ ಎನ್ನುವ ಹೆಸರಿನ ಜೊತೆಜೊತೆಗೆ ತುಳುಕು ಹಾಕುವ ಹೆಸರು ಮನ್ನಾರ್ ಗುಡಿ ಗ್ಯಾಂಗ್.
(ಸಿಎಂ ಹುದ್ದೆಗೆ ಶಶಿಕಲಾ: ಪ್ರಧಾನಿ ಮೋದಿ ಭಯ ಕಾಡಿತೇ)

ವಿಡಿಯೋ ಕ್ಯಾಸೆಟ್ ಅಂಗಡಿ ಇಟ್ಟುಕೊಂಡು, ಎಐಎಡಿಎಂಕೆ ಪಕ್ಷದ ಕಾರ್ಯಕ್ರಮವನ್ನು ಕವರ್ ಮಾಡಿಕೊಂಡು ಬರುತ್ತಿದ್ದ ಶಶಿಕಲಾ ಇಂದು ತಮಿಳುನಾಡು ಸಿಎಂ ಆಗುವ ಮಟ್ಟಕ್ಕೆ ಬೆಳೆದರೆಂದರೆ, ಅದಕ್ಕೆ ಆಕೆಯ ಬೆನ್ನಿಗೆ ನಿಂತಿದ್ದು ಮನ್ನಾರ್ ಗುಡಿ ಗ್ಯಾಂಗ್, ಆಕೆ ಪ್ರತಿನಿಧಿಸುವ ದೇವರ್ ಸಮುದಾಯ ಮತ್ತು ಜಯಾ ನಿಷ್ಠೆ ಎನ್ನುವ ಹೆಸರಿನ ಹಿಂದಿರುವ ಭಯಂಕರ ರಾಜಕೀಯ ಆಸೆ ಎನ್ನುವ ಮಾತು ಸುದ್ದಿಯಲ್ಲಿದೆ.

ಚೆನ್ನೈನಿಂದ 310ಕಿಲೋಮೀಟರ್ ದೂರದಲ್ಲಿರುವ ಕಾವೇರಿ ಜಲಾಯನ ಪ್ರದೇಶದ ತಿರುವರೂರು ಜಿಲ್ಲೆಯಲ್ಲಿನ ಹಳ್ಳಿಯೊಂದರ ಹೆಸರು ಮನ್ನಾರ್ ಗುಡಿ, ಶಶಿಕಲಾ ಬೆಳೆದಿದ್ದು ಇದೇ ಊರಲ್ಲಿ. ಎಂಬತ್ತರ ದಶಕದಲ್ಲಿ ಸೌತ್ ಆರ್ಕಾಟ್ ಜಿಲ್ಲೆಯ ಕಲೆಕ್ಟರ್ ವಿ ಎಸ್ ಚಂದ್ರಲೇಖಾ ಮೂಲಕ ಶಶಿಕಲಾಗೆ ಸೆಲ್ವಿ ಜಯಲಲಿತಾ ಅವರ ಪರಿಚಯವಾಗುತ್ತದೆ.

ತೋರಿಕೆಯ ಪ್ರೀತಿ, ಕಾಳಜಿಯಿಂದಾಗಿ ದಿನದಿಂದ ದಿನಕ್ಕೆ ಜಯಾಗೆ ಆಪ್ತರಾಗುವ ಶಶಿಕಲಾ, ಜಯಾ ಸುತ್ತಮುತ್ತ ಮನ್ನಾರ್ ಗುಡಿಯ ತನ್ನ ಆಪ್ತರು, ಸಂಬಂಧಿಕರನ್ನು ನೇಮಿಸುತ್ತಾರೆ. ಜೊತೆಗೆ, ಜಯಾ ಅಧಿಕೃತ ನಿವಾಸವಾದ ಪೊಯೀಸ್ ಗಾರ್ಡನ್ ನಲ್ಲಿ ನಲವತ್ತಕ್ಕೂ ಹೆಚ್ಚು ಮುನ್ನಾರ್ ಗುಡಿ ಗ್ಯಾಂಗ್ ನವರನ್ನು ನೇಮಿಸುತ್ತಾರೆ.

ಜಯಾ ರಕ್ಷಣೆ ಮತ್ತು ದೈನಂದಿನ ವ್ಯವಹಾರಗಳಲ್ಲಿ ಕಿಂಚಿತ್ತೂ ಲೋಪ ಬರದಂತೆ, ಅಸಾಧಾರಣ ವೃತ್ತಿಪರತೆ ತೋರಿ ಒಂದೊಂದೇ ಮೆಟ್ಟಲು ಏರುತ್ತಾ ಬರುತ್ತಾರೆ ಶಶಿಕಲಾ, ತನ್ನ ಮೇಲೆ ತೋರುತ್ತಿರುವ ಕಾಳಜಿಯನ್ನು ಕಂಡು ಜಯಾ, ಶಶಿಕಲಾಗೆ ಮತ್ತಷ್ಟು ಆಪ್ತರಾಗುತ್ತಾರೆ. ಇಂಟರೆಸ್ಟಿಂಗ್ ಸುದ್ದಿ ಮುಂದಿದೆ..

 ಶಶಿಕಲಾ ಆಧಿಪತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತೆ

ಶಶಿಕಲಾ ಆಧಿಪತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತೆ

ಪೊಯೀಸ್ ಗಾರ್ಡನ್ ನಲ್ಲಿ ಶಶಿಕಲಾ ಆಧಿಪತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ, ಸರಕಾರದ ಆಡಳಿತದಲ್ಲೂ ಶಶಿಕಲಾ ಆವರಿಸಿಕೊಂಡು. ಪಕ್ಷದಲ್ಲಿ ನಂಬರ್ 2 ಎನ್ನುವ ಮಟ್ಟಿಗೆ ಪ್ರಭಾವಿಯಾಗಿ ಬೆಳೆಯುತ್ತಾರೆ. ಜೊತೆಗೆ ಮನ್ನಾರ್ ಗುಡಿ ಗ್ಯಾಂಗನ್ನೂ ಆಡಳಿತ ವ್ಯವಸ್ಥೆಯೊಳಗೆ ತರಲು ಶಶಿಕಲಾ ಯಶಸ್ವಿಯಾಗುತ್ತಾರೆ.

 ಎಲ್ಲಾ ಟೆಂಡರುಗಳು ಮನ್ನಾರ್ ಗುಡಿ ಪಾಲು

ಎಲ್ಲಾ ಟೆಂಡರುಗಳು ಮನ್ನಾರ್ ಗುಡಿ ಪಾಲು

ಶಶಿಕಲಾ, ಸರಕಾರದ ಎಲ್ಲಾ ಟೆಂಡರುಗಳು ತಾನೇ ಹುಟ್ಟು ಹಾಕಿದ ಮನ್ನಾರ್ ಗುಡಿ ಗ್ಯಾಂಗ್ ಕೈತಪ್ಪದಂತೆ ನೋಡಿಕೊಳ್ಳುತ್ತಾರೆ. ಕೋಟ್ಯಾಂತರ ರೂಪಾಯಿ ಸರಕಾರದ ಪ್ರಾಜೆಕ್ಟುಗಳು ಶಶಿಕಲಾ ಅಣತಿಯಂತೇ ಅನುಮೋದನೆಗೊಳ್ಳುತ್ತವೆ. ಬಹುತೇಕ ಟೆಂಡರುಗಳು ಮನ್ನಾರ್ ಗುಡಿ ಗ್ಯಾಂಗಿನಿಂದ ಬಿಟ್ಟು ಬೇರೆಯವರಿಗೆ ಹೋಗುವುದು ಬಹಳ ಅಪರೂಪ.

 ಸುಬ್ರಮಣಿಯನ್ ಸ್ವಾಮಿ

ಸುಬ್ರಮಣಿಯನ್ ಸ್ವಾಮಿ

ದಿನದಿಂದ ದಿನಕ್ಕೆ ಹೆಸರಿಗೆ ಜಯಾ, ತೆರೆಯ ಹಿಂದಿನ ಆಡಳಿತಗಾರ್ತಿಯಾಗಿ ಶಶಿಕಲಾ ಮೆರೆಯುತ್ತಾರೆ. ಜೊತೆಗೆ ತನ್ನ ಮುನ್ನಾರ್ ಗುಡಿ ಗ್ಯಾಂಗ್ ಅನ್ನೂ ಬೆಳೆಸುತ್ತಾರೆ. ಸರಕಾರದ ಎಲ್ಲಾ ಪ್ರಾಜೆಕ್ಟುಗಳು ಮತ್ತು ಟೆಂಡರುಗಳು ಒಂದೇ ಗ್ಯಾಂಗಿಗೆ ಹೋಗುತ್ತಿರುವುದನ್ನು ಅರಿತ ಸುಬ್ರಮಣಿಯನ್ ಸ್ವಾಮಿ ತಮಿಳುನಾಡಿನಲ್ಲಿ ಸದ್ಯ ಚಾಲ್ತಿಯಲ್ಲಿರುವುದು 'ಮುನ್ನಾರ್ ಗುಡಿ ಗ್ಯಾಂಗ್ ಮಾಫಿಯಾ' ಎಂದು ಅಡ್ಡ ಹೆಸರಿಡುತ್ತಾರೆ.

 ಎಚ್ಚೆತ್ತುಗೊಂಡ ಜಯಲಲಿತಾ

ಎಚ್ಚೆತ್ತುಗೊಂಡ ಜಯಲಲಿತಾ

ಆ ಸಮಯದಲ್ಲಿ ಕೊಂಚ ಎಚ್ಚೆತ್ತುಕೊಳ್ಳುವ ಜಯಾ, 2011ರಲ್ಲಿ ಪರಮಾಪ್ತೆ ಶಶಿಕಲಾ ನಟರಾಜನ್ ಸೇರಿ ಮನ್ನಾರ್ ಗುಡಿ ಗ್ಯಾಂಗಿನ ಎಲ್ಲರನ್ನೂ ಮನೆಯಿಂದ / ಪಕ್ಷದಿಂದ ಹೊರಗಟ್ಟುತ್ತಾರೆ. ಆದರೆ ನಂತರ ನಡೆದ ವಿದ್ಯಮಾನದಲ್ಲಿ ಶಶಿಕಲಾ ಮತ್ತೆ ಪೊಯೀಸ್ ಗಾರ್ಡನ್ ಕಂಪೌಂಡಿನಲ್ಲಿ ಕಾಣಿಸಿಕೊಳ್ಳುತ್ತಾರೆ, ಜೊತೆಗೆ ಮನ್ನಾರ್ ಗುಡಿ ಗ್ಯಾಂಗನ್ನೂ ಕರೆದುಕೊಂಡು ಬರುತ್ತಾರೆ. ಇದರ ಜೊತೆಗೆ ಜಯಾ ಆರೋಗ್ಯದಲ್ಲೂ ಏರುಪೇರು ಆರಂಭವಾಗಲು ಶುರುವಾಗುತ್ತದೆ.

 ಆಯಕಟ್ಟಿನ ಜಾಗದಲ್ಲಿ ಮನ್ನಾರ್ ಗುಡಿ ಸದಸ್ಯರು

ಆಯಕಟ್ಟಿನ ಜಾಗದಲ್ಲಿ ಮನ್ನಾರ್ ಗುಡಿ ಸದಸ್ಯರು

ತಮಿಳುನಾಡಿನ ಆಡಳಿತ ವ್ಯವಸ್ಥೆಯ ಎಲ್ಲಾ ಆಯಕಟ್ಟಿನ ಜಾಗದಲ್ಲಿ ಶಶಿಕಲಾ ಗಂಡ ನಟರಾಜನ್, ಸಹೋದರ ದಿವಾಗರನ್, ಇತರ ಸದಸ್ಯರಾದ ಮಹದೇವನ್, ಡಾ. ವೆಂಕಟೇಶ್ ಸೇರಿದಂತೆ ಪ್ರಮುಖ ಮನ್ನಾರ್ ಗುಡಿ ಗ್ಯಾಂಗಿನವರು ಆಕ್ರಮಿಸುತ್ತಾರೆ. ಜಯಲಲಿತಾ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವೇಳೆ, ಶವಪೆಟ್ಟಿಗೆ ಸುತ್ತ ನಿಂತ ಪ್ರಮುಖ ವ್ಯಕ್ತಿಗಳೆಲ್ಲಾ ಮನ್ನಾರ್ ಗುಡಿ ಗ್ಯಾಂಗಿನವರು ಎನ್ನುವ ಮಾತಿದೆ.

 ಜಯಾ ಸಾವು ಘೋಷಣೆಯಾಗುವ 6 ಗಂಟೆಗಳ ಮುನ್ನ

ಜಯಾ ಸಾವು ಘೋಷಣೆಯಾಗುವ 6 ಗಂಟೆಗಳ ಮುನ್ನ

ಜಯಲಲಿತಾ ಸಾವು ಘೋಷಣೆಯಾಗುವ ಮುಂಚಿನ 6 ಗಂಟೆಗಳ ಮುನ್ನ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಶಶಿಕಲಾ ಪರಮಾಪ್ತ ಪಳನಿಚಾಮಿಯನ್ನು ಸಿಎಂ ಸ್ಥಾನಕ್ಕೆ ಕೂರಿಸುವ ಬಗ್ಗೆ ತೀವ್ರ ಒತ್ತಡ ಹೇರಲಾಗಿತ್ತು ಎನ್ನುವ ಸುದ್ದಿ ಫೇಸ್ ಬುಕ್ ನಲ್ಲಿ ಚಾಲ್ತಿಯಲ್ಲಿತ್ತು.

 ಆಸ್ಪತ್ರೆಯಿಂದ ಹೊರನಡೆದ ಮನ್ನಾರ್ ಗುಡಿ ಗ್ಯಾಂಗ್

ಆಸ್ಪತ್ರೆಯಿಂದ ಹೊರನಡೆದ ಮನ್ನಾರ್ ಗುಡಿ ಗ್ಯಾಂಗ್

ಕೇಂದ್ರ ಸರಕಾರದ ಮಧ್ಯಪ್ರವೇಶ ಮತ್ತು ಇದನ್ನು ವಿರೋಧಿಸಿದರೆ ತಕ್ಕ ಬೆಲೆ ತೆರಬೇಕಾದೀತು ಎನ್ನುವ ಎಚ್ಚರಿಕೆಯ ನಂತರ ಮನ್ನಾರ್ ಗುಡಿ ಗ್ಯಾಂಗಿನ ಸದಸ್ಯರು ಅಪೋಲೋ ಆಸ್ಪತ್ರೆಯಿಂದ ಹೊರ ನಡೆದರು ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ಜಯಾ ಸಾವಿನ ಘೋಷಣೆಯ ಮುನ್ನ ಹರಿದಾಡುತ್ತಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

 ಗೂಂಡಾಗಿರಿ, ಅಕ್ರಮ ವ್ಯವಹಾರ, ಮಾಫಿಯಾಗೆ ಹೆಸರು

ಗೂಂಡಾಗಿರಿ, ಅಕ್ರಮ ವ್ಯವಹಾರ, ಮಾಫಿಯಾಗೆ ಹೆಸರು

ಗೂಂಡಾಗಿರಿ, ಅಕ್ರಮ ವ್ಯವಹಾರ, ಮಾಫಿಯಾ ಮುಂತಾದ ಕಾನೂನಿನ ವಿರುದ್ದವಾಗಿರುವ ಎಲ್ಲಾ ಚಟುವಟಿಕೆಗಳಿಗೆ ಪರ್ಯಾಯ ಪದ ಅಂದರೆ ಅದು ' ಮನ್ನಾರ್‍ ಗುಡಿ ಗ್ಯಾಂಗ್' ಎನ್ನುವ ಮಾತು ತಮಿಳುನಾಡಿನಲ್ಲಿದೆ. ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಅವ್ಯಹಾರ ಇದುವರೆಗೆ ನಡೆದಿದೆ ಎನ್ನುವುದೂ ಸುದ್ದಿಯ ಜೊತೆಗೆ ಮತ್ತೊಂದು ಸುದ್ದಿ.

 ಅರುಣಾಚಲನಿಗೆ ಮಾತ್ರ ಉತ್ತರ ಗೊತ್ತು

ಅರುಣಾಚಲನಿಗೆ ಮಾತ್ರ ಉತ್ತರ ಗೊತ್ತು

ಶಶಿಕಲಾ ನಟರಾಜನ್ ಸಿಎಂ ಹುದ್ದೆಗೇರಲು ಒಂದೇ ಮೆಟ್ಟಲು ಕೆಳಗಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಎಂದು ತಾನೇ ಬೆಳೆಸಿದ ಮನ್ನಾರ್ ಗುಡಿ ಮಾಫಿಯಾ ತಮಿಳುನಾಡಿನ ಅಧಿಕಾರವನ್ನು ನೇರವಾಗಿ ಅನುಭವಿಸುತ್ತದೆಯಾ? ಕಾಮರಾಜ್,ಅಣ್ಣಾದೊರೈ, ಎಂಜಿಆರ್ ಮುಂತಾದ ತಮಿಳುನಾಡು ಕಂಡ ನಾಯಕರ ಆದರ್ಶಕ್ಕೆ ಶಶಿಕಲಾ ನಟರಾಜನ್ ಬೆಲೆ ಕೊಡಲಿದ್ದಾರೆಯೇ ಎನ್ನುವುದು ಸದ್ಯ ತಿರುವಣ್ಣಾಮಲೈ ಗಿರಿಯಲ್ಲಿ ನೆಲೆಸಿರುವ ಅರುಣಾಚಲನಿಗೆ ಮಾತ್ರ ಉತ್ತರ ಗೊತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+