ಸಮೀಕ್ಷೆ: ಜಗನ್, ಪಳನಿಸ್ವಾಮಿ ಕೈ ಜೋಡಿಸಿದರೂ ಮೋದಿಗೆ ಬಲವಿಲ್ಲ!

ಲೋಕಸಭೆ ಚುನಾವಣೆ 2019ಗಾಗಿ ಚುನಾವಣಾ ಪೂರ್ವ ಸಮೀಕ್ಷೆಯನ್ನು ಇಂಡಿಯಾ ಟುಡೇ ಕಾರ್ವಿ ಸಂಸ್ಥೆ ನಡೆಸಿದೆ. ಇಂಡಿಯಾ ಟುಡೇ ಪ್ರಕಟಿಸಿರುವ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಂತೆ ಈಗ ಲೋಕಸಭೆ ಚುನಾವಣೆ ನಡೆದರೆ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ಡಿಎ) ಗೆ ಬಹುಮತ ಗಳಿಸಲು 99 ಸ್ಥಾನಗಳ ಕೊರತೆ ಎದುರಾಗಲಿದೆ.

ಮೋದಿ ನೇತೃತ್ವದ ಎನ್ಡಿಎಗೆ ಎಐಎಡಿಎಂಕೆ ಹಾಗೂ ಜಗನ್ ರೆಡ್ಡಿ ಅವರ ವೈಎಸ್ಸಾರ್ ಕಾಂಗ್ರೆಸ್ ಕೂಡಾ ಕೈ ಜೋಡಿಸಿದರೂ 234 ಸ್ಥಾನ ಮಾತ್ರಗಳಿಸಲು ಸಾಧ್ಯ. ಮ್ಯಾಜಿಕ್ ನಂಬರ್ 272 ತಲುಪಲು ಎನ್ಡಿಎಗೆ ಕಷ್ಟವಾಗಲಿದೆ.

ಎಲ್ಲ ರಾಜ್ಯಗಳಲ್ಲಿನ ಎಲ್ಲ 543 ಲೋಕಸಭೆ ಕ್ಷೇತ್ರಗಳಲ್ಲಿಯೂ ಸಮೀಕ್ಷೆ ನಡೆಸಲಾಗಿದ್ದು, ಎನ್ಡಿಎ ರೇಸಿನಲ್ಲಿ ಮುಂಚೂಣಿಯಲ್ಲಿದ್ದರೂ 2014ರ ಫಲಿತಾಂಶಕ್ಕೆ ಹೋಲಿಸಿದರೆ ಇನ್ನು 86 ಸ್ಥಾನಗಳು ಕಡಿಮೆ ಬರಲಿದೆ.

AIADMK and Jagan Reddy cannot save Modi: India Today Mood of the Nation poll

ಅಧಿಕಾರಕ್ಕೇರಲು ಸಾಧ್ಯತೆ:
ಯುಪಿಎ/ ಮಹಾಘಟಬಂಧನ್ ಗೆ ಪಿಡಿಪಿ, ಟಿಎಂಸಿ, ಬಿಎಸ್ಪಿ ಹಾಗೂ ಎಸ್ಪಿ ಸೇರ್ಪಡೆ ಹಾಗೂ ಎಐಎಡಿಎಂಕೆ ಹಾಗೂ ವೈಎಸ್ಸಾರ್ ಸಿಪಿಯಿಂದ ಎನ್ಡಿಎಗೆ ಬಲ ಸಿಕ್ಕರೆ

ಶೇಕಡಾವಾರು ಮತಗಳಿಕೆ
ಎನ್ಡಿಎ : 40
ಯುಪಿಎ : 44
ಇತರೆ : 14

ಸೀಟು ಗಳಿಕೆ:
ಎನ್ಡಿಎ: 234
ಯುಪಿಎ: 272
ಇತರೆ: 37

336 ಸ್ಥಾನಗಳನ್ನು ಗಳಿಸಿದ್ದ ಎನ್ಡಿಎಗೆ 234 ನಂಬರ್ ದಾಟಲು ಆಗುತ್ತಿಲ್ಲ. 2014ರಿಂದ ಎನ್ಡಿಎ ತನ್ನ ಐದಾರು ಮಿತ್ರ ಪಕ್ಷಗಳನ್ನು ಕಳೆದುಕೊಂಡಿದೆ. ಮುಖ್ಯವಾಗಿ ಚಂದ್ರಬಾಬುನಾಯ್ಡು ಅವರ ಟಿಡಿಪಿ, ಉಪೇಂದ್ರ ಕುಶ್ವಾಹ ಅವರ ಆರ್ ಎಲ್ಎಸ್ಪಿ ಮೈತ್ರಿಯಿಂದ ಹೊರ ಬಂದಿವೆ. ಎನ್ಡಿಎಗೆ ಇನ್ನು ಕನಿಷ್ಟ 37 ಸೀಟುಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+