• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಪಿಎಗೆ ಮತ್ತಷ್ಟು ಸಂಕಷ್ಟ: ಇನ್ನಿಬ್ಬರು 'ಅಗಸ್ಟಾ' ಆರೋಪಿಗಳ ಗಡಿಪಾರು

|

ನವದೆಹಲಿ, ಜನವರಿ 31: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅತಿ ಗಣ್ಯರ ಐಷಾರಾಮಿ ಹೆಲಿಕಾಪ್ಟರ್ ಖರೀದಿ ಹಗರಣದ ತನಿಖೆಗೆ ಮಹತ್ವದ ಮುನ್ನಡೆ ದೊರಕಿದೆ.

ಹಗರಣದಲ್ಲಿ ಬೇಕಾಗಿರುವ ಆರೋಪಿ, ಉದ್ಯಮಿ ರಾಜೀವ್ ಸಕ್ಸೇನಾ ಮತ್ತು ಕಾರ್ಪೊರೇಟ್ ವಿಮಾನಯಾನ ಲಾಬಿಗಾರ ದೀಪಕ್ ತಲ್ವಾರ್ ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್: ಎರಡನೇ ಆರೋಪಿ ಸಕ್ಸೇನ ದುಬೈನಿಂದ ಭಾರತಕ್ಕೆ

ಅಗಸ್ಟಾ ವೆಸ್ಟ್‌ಲ್ಯಾಂಡ್‌ನ 3,600 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ರಾಜೀವ್ ಶಂಶೇರ್ ಬಹದ್ದೂರ್ ಸಕ್ಸೇನಾನನ್ನು ದುಬೈನಲ್ಲಿ ಬುಧವಾರ ಬೆಳಿಗ್ಗೆ ಅಲ್ಲಿನ ಅಧಿಕಾರಿಗಳು ಬಂಧಿಸಿದ್ದಾರೆ. ಆತನನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಹಸ್ತಾಂತರ ಮಾಡುವ ನಿರೀಕ್ಷೆಯಿದೆ.

ಅಕೌಂಟೆಂಟ್ ಕೂಡ ಆಗಿರುವ ಸಕ್ಸೇನಾನನ್ನು, ಇ.ಡಿ.ಯ ಮನವಿಯಂತೆ ಕೋರ್ಟ್ ಹೊರಡಿಸಿದ ಜಾಮೀನುರಹಿತ ವಾರಂಟ್ ಅಧಾರದಲ್ಲಿ ದುಬೈ ಅಧಿಕಾರಿಗಳು ಗಡಿಪಾರು ಮಾಡಲು ಸಿದ್ಧತೆ ನಡೆಸಿದ್ದಾರೆ. ಅವರನ್ನು ಈಗಾಗಲೇ ಅಕ್ರಮವಾಗಿ ಗಡಿಪಾರು ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.

90 ಕೋಟಿ ರೂ. ವಿದೇಶಿ ನಿಧಿ ದುರ್ಬಳಕೆ

90 ಕೋಟಿ ರೂ. ವಿದೇಶಿ ನಿಧಿ ದುರ್ಬಳಕೆ

ಕಾರ್ಪೊರೇಟ್ ವಿಮಾನಯಾನ ಲಾಬಿಗಾರ ದೀಪಕ್ ತಲ್ವಾರ್‌ನನ್ನು ವಶಕ್ಕೆ ಪಡೆದುಕೊಳ್ಳಲು ಇಡಿ ಮತ್ತು ಸಿಬಿಐ ಎರಡೂ ಸಂಸ್ಥೆಗಳು ಪ್ರಯತ್ನ ನಡೆಸಿವೆ. ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಭಾಗವಾಗಿ ಸಕ್ಸೇನಾ ವಿದೇಶಿ ನಿಧಿಯ ಮೂಲಕ 90 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ದೀಪಕ್‌ನನ್ನು ಸಹ ಸಕ್ಸೇನಾ ಜೊತೆಗೆ ದುಬೈ ಅಧಿಕಾರಿಗಳು ಗಡಿಪಾರು ಮಾಡಲಿದ್ದಾರೆ.

ಇನ್ನೂ ಹಲವು ಪ್ರಕರಣ

ಇನ್ನೂ ಹಲವು ಪ್ರಕರಣ

ತಲ್ವಾರ್ ವಿರುದ್ಧ ಅಪರಾಧ ಸಂಚು, ನಕಲು ಮತ್ತು ಯುರೋಪ್‌ನ ಪ್ರಮುಖ ಕ್ಷಿಪಣಿ ತಯಾರಕಾ ಸಂಸ್ಥೆಯೊಂದು ಆತನ ಎನ್‌ಜಿಓಗೆ ಆಂಬುಲೆನ್ಸ್ ಹಾಗೂ ಇತರೆ ಸಾಧನಗಳ ಖರೀದಿಗಾಗಿ ನೀಡಿದ 90.72 ಕೋಟಿ ವಿದೇಶಿ ದೇಣಿಗೆಯನ್ನು ಬೇರೆಡೆಗೆ ವರ್ಗಾಯಿಸಿದ್ದಕ್ಕಾಗಿ ಎಫ್‌ಸಿಆರ್‌ಎ ಅಡಿ ವಿವಿಧ ಸೆಕ್ಷನ್‌ಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ, ಯುಪಿಎ ಸರ್ಕಾರದ ಅವಧಿಯಲ್ಲಿ ಈತನ ವಿವಿಧ ವಿಮಾನಯಾನ ಒಪ್ಪಂದ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ.

ತಲ್ವಾರ್ ವಿರುದ್ಧ ಇಡಿ ಮತ್ತು ಸಿಬಿಐ ಭ್ರಷ್ಟಾಚಾರದ ಅಪರಾಧ ಪ್ರಕರಣಗಳನ್ನು ದಾಖಲಿಸಿವೆ. ಅಲ್ಲದೆ, ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆ ವಂಚನೆ ಪ್ರಕರಣ ದಾಖಲಿಸಿದೆ.

ಅಗಸ್ಟಾ ವೆಸ್ಟ್ ಲ್ಯಾಂಡ್: ಇಟಲಿ ಮಹಿಳೆಯ ಮಗನ ಹೆಸರು ಹೇಳಿದ ಮೈಕಲ್

ಸಕ್ಸೇನಾ ವಕೀಲರ ಆರೋಪ

ಸಕ್ಸೇನಾ ವಕೀಲರ ಆರೋಪ

ದುಬೈನಲ್ಲಿ ಯಾವುದೇ ಗಡಿಪಾರು ಪ್ರಕ್ರಿಯೆ ಆರಂಭವಾಗಿರಲಿಲ್ಲ ಎಂದು ಸಕ್ಸೇನಾ ಪರ ವಕೀಲರು ಹೇಳಿದ್ದಾರೆ. ಭಾರತಕ್ಕೆ ಕಳುಹಿಸುವಾಗ ಆತನಿಗೆ ಕುಟುಂಬ ಮತ್ತು ವಕೀಲರನ್ನು ಭೇಟಿ ಮಾಡಲು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ದುಬೈನ ಪಾಮ್ ಜುಮೀರಾದ ನಿವಾಸಿಯಾಗಿರುವ ರಾಜೀವ್ ಸಕ್ಸೇನಾಗೆ ಇಡಿ ಹಲವು ಬಾರಿ ಸಮನ್ಸ್ ಕಳುಹಿಸಿತ್ತು. ಅಲ್ಲದೆ, ಆತನ ಪತ್ನಿಯನ್ನು 2017ರ ಜುಲೈನಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು. ಅವರೀಗ ಜಾಮೀನಿನ ಮೇಲೆ ಹೊರಗಿದ್ದಾರೆ.

ಮೈಕಲ್ ಮಾಮಾ ಜೊತೆ ಗಾಂಧಿ ಕುಟುಂಬಕ್ಕೆ ಏನು ಸಂಬಂಧ : ಮೋದಿ ವ್ಯಂಗ್ಯ

58 ಮಿಲಿಯನ್ ಯುರೋ ಕಿಕ್‌ಬ್ಯಾಕ್

58 ಮಿಲಿಯನ್ ಯುರೋ ಕಿಕ್‌ಬ್ಯಾಕ್

ಸಕ್ಸೇನಾ, ಆತನ ಪತ್ನಿ ಮತ್ತು ದುಬೈ ಮೂಲದ ಎರಡು ಸಂಸ್ಥೆಗಳಾದ ಯುಎಚ್‌ವೈ ಸಕ್ಸೇನಾ ಹಾಗೂ ಮ್ಯಾಟ್ರಿಕ್ಸ್ ಹೋಲ್ಡಿಂಗ್ಸ್, ಸ್ಥಿರಾಸ್ತಿಗಳನ್ನು ಖರೀದಿಸುವುದರಲ್ಲಿ ಮತ್ತು ಹಂಚಿಕೆಯಲ್ಲಿ ಅವ್ಯವಹಾರಗಳನ್ನು ನಡೆಸಿದ್ದಾರೆ ಎಂದು ಸಹ ಇಡಿ ಆರೋಪಿಸಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಕಂಪೆನಿಯು ಟ್ಯುನಿಷಿಯಾದ ಗಾರ್ಡಿಯನ್ ಸರ್ವೀಸಸ್ ಸರ್ಲ್ ಮತ್ತು ಐಡಿಎಸ್ ಸರ್ಲ್ ಮೂಲಕ 58 ಮಿಲಿಯನ್ ಯುರೋ ಹಣವನ್ನು ಕಿಕ್ ಬ್ಯಾಕ್ ರೂಪದಲ್ಲಿ ನೀಡಿತ್ತು ಎಂದು ಇಡಿ ತಿಳಿಸಿದೆ.

ಅಗಸ್ಟಾ ಹಗರಣ: ಸೋನಿಯಾ ಬಯಕೆಯಂತೆ ಹೆಲಿಕಾಪ್ಟರ್ ಖರೀದಿ ಒಪ್ಪಂದ?

ಜೈಲಿನಲ್ಲಿರುವ ಕ್ರಿಶ್ಚಿಯನ್

ಜೈಲಿನಲ್ಲಿರುವ ಕ್ರಿಶ್ಚಿಯನ್

ಅತಿ ಗಣ್ಯರಿಗೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಸುವ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಹಣ ಪಡೆದುಕೊಂಡಿದ್ದ ಆರೋಪ ಎದುರಿಸುತ್ತಿರುವ ಕ್ರಿಶ್ಚಿಯನ್ ಮೈಕಲ್‌ನನ್ನು ಇತ್ತೀಚೆಗೆ ದುಬೈನಿಂದ ಗಡಿಪಾರು ಮಾಡಲಾಗಿತ್ತು. ಇ.ಡಿ. ಅಧಿಕಾರಿಗಳು ಡಿ.22ರಂದು ಆತನನ್ನು ಬಂಧಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Businessman Rajiv Saxena and corporate aviation lobbyist Deepak Talwar are being deported to India from Dubai in the AgustaWestland Helicopter case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more