ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್, ಮಧ್ಯವರ್ತಿ ತಿಂದ ದುಡ್ಡೆಷ್ಟು?

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮೇ 10: ಅಗಸ್ಟಾ ವೆಸ್ಟ್ ಲ್ಯಾಂಡ್ ಬಹುಕೋಟಿ ಹೆಲಿಕಾಪ್ಟರ್ ಹಗರಣದಲ್ಲಿ ಭಾರತದ ಮಾಧ್ಯಮ ಪ್ರತಿನಿಧಿ ಪಾತ್ರದ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಯಾರು ಯಾರಿಗೆ ಎಷ್ಟು ಸಂದಾಯವಾಗಿದೆ ಎಂಬ ಲೆಕ್ಕ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೆ ಮಧ್ಯವರ್ತಿಗಳು ಲಂಚರೂಪದಲ್ಲಿ ಖರ್ಚು ಮಾಡಿದ ಮೊತ್ತ ಎಷ್ಟು ಎಂಬುದು ಸಿಬಿಐಗೆ ಸಿಕ್ಕಿದೆ.

ಸುಮಾರು 3,727 ಕೋಟಿ ರು ಡೀಲ್ ಕ್ಯಾನ್ಸಲ್ ಆಗುತ್ತದೆ ಎಂಬುದರ ಬಗ್ಗೆ ಕೆಲ ಮಾಧ್ಯಮಗಳಿಗೆ ಅವಧಿಗೆ ಮುನ್ನ ತಿಳಿದಿತ್ತು. ಈ ಡೀಲ್ ನಲ್ಲಿ ಮಧ್ಯವರ್ತಿಗಳಿಗೆ ಸುಮಾರು 327 ಕೋಟಿ ರು ಸಿಕ್ಕಿದ್ದು, ಎಲ್ಲವನ್ನು ಭಾರತ ವಿವಿಧ ಮಾಧ್ಯಮಗಳ ಅಧಿಕಾರಿಗಳಿಗೆ ಲಂಚ ರೂಪದಲ್ಲಿ ನೀಡಲಾಗಿದೆ. [ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

agustawestland-bribe-of-rs-327-crore-was-paid-since-2003

ಇದಲ್ಲದೆ ಮಾಧ್ಯಮಗಳ ಮುಖ್ಯಸ್ಥರಿಗೆ ನೀಡಿದ ಮೊತ್ತದ ಬಗ್ಗೆ ಇನ್ನೂ ತಿಳಿಯಬೇಕಿದೆ ಎಂದು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐನ ಅಧಿಕಾರಿಗಳು ಹೇಳಿದ್ದಾರೆ. [ಪತ್ರಕರ್ತ ಸರ್ದೇಸಾಯಿ ಅಗಸ್ಟಾ ಡೀಲ್ ಫಲಾನುಭವಿಯೇ?]

ಸದ್ಯಕ್ಕೆ ಸಿಬಿಐ ತಂಡ, ಇಟಲಿಯ ಕೋರ್ಟಿನ ತೀರ್ಪನ್ನು ಅಧ್ಯಯನ ಮಾಡುತ್ತಿದೆ. ಭಾರತದಲ್ಲಿ ಡೀಲ್ ಕ್ಯಾನ್ಸಲ್ ವಿಷಯ ಸರ್ಕಾರದಿಂದ ಮಧ್ಯವರ್ತಿಗಳಿಗೆ ತಲುಪಿಸುವ ಕೆಲಸವನ್ನು ವಾಯು ಸೇನೆಯ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರ ಕಸಿನ್ ಗಳು ಮಾಡಿದ್ದಾರೆ.[ಸೋನಿಯಾರನ್ನು ಬಂಧಿಸಲು ಮೋದಿಗೆ ಧೈರ್ಯವಿಲ್ಲ : ಕೇಜ್ರಿ]

ತ್ಯಾಗಿ ಬ್ರದರ್ಸ್ ಹೆಸರಿನಲ್ಲೇ ಕಾರ್ಯನಿರ್ವಹಿಸುತ್ತಿದ್ದ ಇವರು, ಸರ್ಕಾರದ ಉನ್ನತ ಮಟ್ಟದ ಮಾಹಿತಿಗಳನ್ನು ಮಧ್ಯವರ್ತಿಗಳಿಗೆ ಹಂಚಿದ್ದಾರೆ. ಲಂಚದ ಹಣ ಎಲ್ಲೆಲ್ಲಿ ಹರಿದಾಡಿದೆ. ಯುಕೆ, ಯುಎಇಗಳಲ್ಲಿರುವ ಡೀಲರ್ ಗಳಿಗೆ ಏನೇನು ಲಾಭವಾಗಿದೆ ಎಂಬುದರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಏನಿದು ಹಗರಣ: ವಿವಿಐಪಿಗಳ ಪ್ರಯಾಣಕ್ಕಾಗಿ ವಾಯುಪಡೆಗೆ 12 ಹೆಲಿಕಾಪ್ಟರ್ ಖರೀದಿಗೆ ಸರ್ಕಾರ ಟೆಂಡರ್ ಕರೆಯಲಾಗಿತ್ತು. ಅಮೆರಿಕ, ಇಟಲಿ ಸೇರಿದಂತೆ ಪ್ರತಿಷ್ಠಿತ ರಾಷ್ಟ್ರಗಳ ಕಂಪನಿಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ಆದರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿ ಕೆಲ ರಾಜಕಾರಣಿಗಳಿಗೆ 360 ಕೋಟಿ ರೂಪಾಯಿ ಲಂಚ ನೀಡಿ ಟೆಂಡರ್ ಪಡೆದಿತ್ತು. ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ವಿರುದ್ಧವೂ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿತ್ತು.ನಂತರ ಒಪ್ಪಂದ ರದ್ದುಮಾಡಿರುವುದಾಗಿ ಅಂದಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಘೋಷಿಸಿದರು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The middlemen who were part of the AgustaWestland deal were well aware of all decisions that were being taken by the government well in advance.
Please Wait while comments are loading...