ಹಂತಕರ ಹೆಸರು ಉಲಿದು ಪ್ರಕರಣ ಬೇಧಿಸಿದ ಗಿಳಿರಾಯ

Agra Neelam Sharma murder mystery solved by pet parrot- nephew Ashu the murderer
ಆಗ್ರಾ, ಫೆ.26- ರಹಸ್ಯವಾಗಿ ಕಾಡುತ್ತಿದ್ದ ಹತ್ಯೆ ಪ್ರಕರಣವನ್ನು ಗಿಳಿಯೊಂದು ಬೇಧಿಸಿದೆ. ಇದರಿಂದ ಸ್ಥಳೀಯ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯ್ ಶರ್ಮಾ ಎಂಬುವವರ ಪತ್ನಿ ನೀಲಂ ಮತ್ತು ಅವರ ಮುದ್ದಾದ ಸಾಕು ನಾಯಿ ಇತ್ತೀಚೆಗೆ ಹತ್ಯೆಗೀಡಾಗಿದ್ದರು. ಆದರೆ ಪೊಲೀಸರಿಗೆ ಮೊನ್ನೆ ಸೋಮವಾರದ ವರೆಗೂ ಹಂತಕರ ಬಗ್ಗೆ ಯಾವುದೇ ಸುಳಿವು ಸಹ ಲಭಿಸಿರಲಿಲ್ಲ. ( ಶಿವಾಜಿನಗರ: ಇಲ್ಲಿ ಇಲಿಯೇ ಶಾಸ್ತ್ರ ಹೇಳುತ್ತದೆ! )

ಆದರೆ ಪ್ರಾಣಿ ಪ್ರಿಯರಾಗಿದ್ದ ನೀಲಂ ಶರ್ಮಾ ಅವರು ಒಂದು ನಾಯಿ ಮತ್ತು ಒಂದು ಗಿಳಿಯನ್ನು ಅತ್ಯಂತ ಜತನದಿಂದ ಸಾಕಿದ್ದರು. ಮೂವರೂ ಹೀಗೆ ಅನ್ಯೋನ್ಯವಾಗಿರುವಾಗ ಇತ್ತೀಚೆಗೆ ನೀಲಂ ಮತ್ತು ಅವರ ಸಾಕು ನಾಯಿ ಸಾವಿಗೀಡಾಗಿದ್ದರು. ಇದು ಗಿಳಿಗೆ ಅರಗಿಸಿಕೊಳ್ಳಲಾಗಿಲ್ಲ. ಅದು ತಿನ್ನುವುದನ್ನೇ ಬಿಟ್ಟಿತ್ತು.

ಆದರೆ ವಿಜಯ್ ಶರ್ಮಾ ಅವರ ಸೋದರ ಸಂಬಂಧಿ ಯಾವಾಗಲೇ ಆಗಲಿ ಮನೆಯೊಳಕ್ಕೆ ಪ್ರವೇಶಿಸಿದರೆ ಈ ಗಿಳಿರಾಮ ಭಯಭೀತಿಗೊಂಡು ಪುರ್ರನೆ ಹಾರಿಹೋಗಿ ತನ್ನ ಪಂಜರವನ್ನು ಸೇರಿಕೊಂಡು ಬಿಡುತ್ತಿತ್ತು. ಇದು ವಿಜಯ್ ಅವರಿಗೆ ಅನುಮಾನಾಸ್ಪದವಾಗಿ ಕಂಡಿದೆ. ಈ ಹಿಂದೆ ಯಾವತ್ತೂ ಹೀಗೆ ಮಾಡದ ಗಿಳಿರಾಮನ ವರ್ತನೆಯಲ್ಲಿ ಇತ್ತೀಚೆಗೆ ಬದಲಾವಣೆ ಬಂದಿರುವುದನ್ನು ವಿಜಯ್ ಗುರುತಿಸಿದ್ದಾರೆ.

ಈ ಮಧ್ಯೆ, ಗಿಳಿ ಜತೆ ಮಾತನಾಡಿಸಲು ವಿಜಯ್ ಪ್ರಯತ್ನಿಸಿದ್ದಾರೆ. ಆದರೆ ಅದು ಮುಖ ತಿರುಗಿಸಿಕೊಂಡು, ಆತಂಕ ವ್ಯಕ್ತಪಡಿಸುತ್ತಿರುವುದು ವಿಜಯ್ ಕಣ್ಣಿಗೆ ಬಿದ್ದಿದೆ. ಆಗ ಗಿಳಿಯ ಜತೆ ಹೆಚ್ಚು ಸಮಯ ಕಳೆಯುತ್ತಾ, ಅದರ ಆತಂಕವನ್ನು ದೂರ ಮಾಡುತ್ತಾ, ಅದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ( ಅನಿತಾ, ರಮ್ಯಾ ಭವಿಷ್ಯ ಹೇಳಿದ ಶಿವಾಜಿನಗರದ ಇಲಿ! )

ಮಧ್ಯೆ, ನೀಲಂಳನ್ನು ಕೊಂದಿದ್ದು ಯಾರೋ ಎಂದು ಕೇಳುತ್ತಾ, ಒಂದಷ್ಟು ಹೆಸರುಗಳನ್ನು ಪಠಿಸಿದ್ದಾರೆ. ಶಾಂತವಾಗಿ ಅಷ್ಟೂ ಹೆಸರುಗಳನ್ನು ಕೇಳತೊಡಗಿದ ಬುದ್ಧಿವಂತ ಗಿಳಿರಾಮ ವಿಜಯ್, ತಮ್ಮ ಸಂಬಂಧಿ ಆಶು ಹೆಸರನ್ನು ಎತ್ತಿಕೊಂಡಾಗ 'ಅವರೇ ಸಾಯಿಸಿದ್ದು, ಅವರೇ ಸಾಯಿಸಿದ್ದು' ಎಂದು ಹಿಂದಿಯಲ್ಲಿ ಉಲಿಯತೊಡಗಿದೆ.

ಪೊಲೀಸರು ಸಹ ಈ ಹಿಂದೆ ಆಶು ಮೇಲೆಯೇ ಅನುಮಾನ ಪಟ್ಟಿದ್ದರು. ಆದರೆ ಈ ಬಾರಿ ತನ್ನ ಮುದ್ದಿನ ಗಿಳಿ ಹಂತಕನ ಬಗ್ಗೆ ಸುಳಿವು ಕೊಟ್ಟಾಗ ಒಂದು ಕ್ಷಣವೂ ತಡ ಮಾಡದೆ ಸೀದಾ ಪೊಲೀಸ್ ಠಾಣೆಗೆ ತೆರಳಿ, ಈ ಹಿಂದೆ ನೀವು ಅನುಮಾನಪಟ್ಟಿದ್ದೇ ಸರಿಯಾಗಿದೆ. ತನ್ನ ಪತ್ನಿಯನ್ನು ಹತ್ಯೆ ಮಾಡಿರುವುದು ಆಶು ಎಂದು ಖಚಿತ ಧ್ವನಿಯಲ್ಲಿ ಹೇಳಿದ್ದಾರೆ.

ಪೊಲೀಸರಿಗೆ ಅಷ್ಟು ಸಾಕಾಗಿತ್ತು. ಸೀದಾ ಆಶು ಬೆನ್ನತ್ತಿ ಏನ್ಸಮಾಚಾರ ಎಂದು ವಿಚಾರಿಸಿದ್ದಾರೆ. ಆಶು ಬೆಬ್ಬೆಬ್ಬೆ ಅಷ್ಟೇ! ನೀಲಂ ಒಬ್ಬರೇ ಮನೆಯಲ್ಲಿದ್ದಾಗ ಆಶು ತನ್ನ ಸಹಚರರ ಜತೆಗೂಡಿ ಮನೆ ಪ್ರವೇಶಿಸಿದ್ದಾನೆ. ನೀಲಂರನ್ನು ಹತ್ಯೆ ಮಾಡಲು ಅವರ ಮೇಲೆ ದಾಳಿ ನಡೆಸಿದಾಗ ಸಾಕು ನಾಯಿ ಅವರ ಮೇಲೆ ಎಗರಿಬಿದ್ದಿದೆ. ಆಶು ಬೆರಳನ್ನು ಸಹ ನಾಯಿ ಕಚ್ಚಿಬಿಟ್ಟಿದೆ. ಇದರಿಂದ ವ್ಯಘ್ರಗೊಂಡ ಆಶು ಮತ್ತು ಅವನ ಅನುಚರರು ನಾಯಿ ಮತ್ತು ನೀಲಂ ಅವರಿಬ್ಬರನ್ನೂ ಹತ್ಯೆ ಮಾಡಿ ಪರಾರಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+