75 ಲಕ್ಷ ರೂ. ಖರ್ಚು ಮಾಡಿ ಕಟ್ಟಿಸಿದ ಮನೆಯಿಂದಲೇ ವೃದ್ಧ ಅಪ್ಪ-ಅಮ್ಮನನ್ನ ಹೊರಹಾಕಿದ ಮಗ ಸೊಸೆ!

ಉತ್ತರ ಪ್ರದೇಶ: ವಯಸ್ಸಾದ ಕಾಲದಲ್ಲಿ ಪೋಷಕರನ್ನ ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಳ್ಳಬೇಕಾದ ಮಕ್ಕಳೇ ಅವರನ್ನು ಬೀದಿಗೆ ತಳ್ಳುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದೀಗ ಇಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆಗ್ರಾ ವೃದ್ಧ ದಂಪತಿ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿರುವ ಈ ವಿಡಿಯೋ ಸಮಾಜದ ಕಟು ವಾಸ್ತವವನ್ನು ತೆರೆದಿಟ್ಟಿದೆ.

75 ಲಕ್ಷ ರೂ. ಖರ್ಚು ಮಾಡಿ ಕಟ್ಟಿಸಿದ ಮನೆಯಿಂದಲೇ ಗೇಟ್‌ಪಾಸ್

ರಾಮ್ ಬಿಲಾಸ್ ಕಟಾರಾ ಎಂಬ 70 ವರ್ಷದ ವೃದ್ಧ ಹಾಗೂ ಅವರ ಪತ್ನಿ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಕಷ್ಟವನ್ನ ಹೇಳಿಕೊಂಡಿದ್ದಾರೆ. ಜೀವನದ ಬಹುಪಾಲು ಸಂಪಾದನೆಯನ್ನ ಕೂಡಿಟ್ಟು, ಸುಮಾರು 75 ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಸ್ವಂತ ಮನೆಯಿಂದಲೇ ಮಗ ಹಾಗೂ ಸೊಸೆ ನಮ್ಮನ್ನ ಹೊರದಬ್ಬಿದ್ದಾರೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.

Agra Elderly Couple Alleges Son Kicked Them Out Of Rs 75 Lakh House Viral Video Sparks Outrage

ಜನವರಿ 2022ರಲ್ಲಿ ಈ ಘಟನೆ ನಡೆದಿದ್ದು, ಅಂದಿನಿಂದ ತಾವು ಬಾಡಿಗೆ ಮನೆಯಲ್ಲಿ ಕಷ್ಟಕರ ಜೀವನ ಸಾಗಿಸುತ್ತಿರುವುದಾಗಿ ವೃದ್ಧ ಕಟಾರಾ ಹೇಳಿದ್ದಾರೆ. ವಿಡಿಯೋದಲ್ಲಿ ಅವರ ಪತ್ನಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಎಂಥವರ ಕರುಳನ್ನೂ ಹಿಂಡುವಂತಿದೆ.

"ಇಷ್ಟು ಕಷ್ಟಪಟ್ಟು ಮನೆ ಕಟ್ಟಿಸಿದರೆ, ನಮ್ಮ ಮಗ ಮತ್ತು ಸೊಸೆ ನಮ್ಮನ್ನೇ ಮನೆಯಿಂದ ಹೊರಹಾಕಿದ್ದಾರೆ. ಐದು ವರ್ಷಗಳಿಂದ ನಾವು ಹೋರಾಡುತ್ತಿದ್ದರೂ ನಮ್ಮ ಗೋಳು ಕೇಳುವವರೇ ಇಲ್ಲ," ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮಗನನ್ನು ಔರಂಗಜೇಬನಿಗೆ ಹೋಲಿಸಿದ ತಂದೆ!

ಕೇವಲ ಮನೆಯಿಂದ ಹೊರಹಾಕಿದ್ದಷ್ಟೇ ಅಲ್ಲದೆ, ತಮಗೆ ನ್ಯಾಯ ಒದಗಿಸುವಂತೆ ಅವರು ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ತಮ್ಮ ಹೆತ್ತ ಮಗನನ್ನು "ಔರಂಗಜೇಬನಿಗಿಂತಲೂ ಕಡೆ" ಎಂದು ಅವರು ಜರಿದಿದ್ದಾರೆ. ಕಳೆದ ಐದು ವರ್ಷಗಳಿಂದ ತಾವು ಅನೇಕ ಬಾರಿ ಅಧಿಕಾರಿಗಳ ಮೊರೆ ಹೋಗಿದ್ದರೂ ಹಾಗೂ ಹಲವು ವಿಡಿಯೋಗಳನ್ನ ಮಾಡಿ ಹಂಚಿಕೊಂಡಿದ್ದರೂ ಯಾರೊಬ್ಬರೂ ತಮ್ಮ ನೆರವಿಗೆ ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ತಮಗೆ ನ್ಯಾಯ ಸಿಗಬೇಕು ಮತ್ತು ತಮ್ಮನ್ನ ಈ ಬೀದಿಗೆ ತಂದ ಮಗ ಹಾಗೂ ಸೊಸೆಗೆ ತಕ್ಕ ಶಿಕ್ಷೆಯಾಗಬೇಕು, ಆಗಲೇ ತಮಗೆ ಸ್ವಲ್ಪಮಟ್ಟಿನ ನೆಮ್ಮದಿ ಸಿಗುತ್ತದೆ ಎಂದು ವೃದ್ಧ ರಾಮ್ ಬಿಲಾಸ್ ಕಟಾರಾ ವಿಡಿಯೋದಲ್ಲಿ ಆಗ್ರಹಿಸಿದ್ದಾರೆ.

ಆಸ್ತಿ ವಿವಾದ ಮತ್ತು ಆಗ್ರಾ ಪೊಲೀಸರ ಸ್ಪಷ್ಟನೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಆಗ್ರಾ ಪೊಲೀಸರು, ಘಟನೆಯ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮಾಲ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು ಕೌಟುಂಬಿಕ ಆಸ್ತಿ ವಿವಾದ ಹಾಗೂ ಪಾಲುದಾರಿಕೆಗೆ ಸಂಬಂಧಿಸಿದ ವಿಚಾರ ಎಂಬುದು ತಿಳಿದುಬಂದಿದೆ.

ಆಗ್ರಾ ಪೊಲೀಸ್ ಕಮಿಷನರೇಟ್ ನೀಡಿರುವ ಮಾಹಿತಿಯ ಪ್ರಕಾರ, ವಿವಾದಿತ ಮನೆಯು ವಾಸ್ತವವಾಗಿ ಸೊಸೆಯ ಹೆಸರಿನಲ್ಲಿಯೇ ನೋಂದಣಿಯಾಗಿದೆ. ಮನೆಯ ಪಾಲಿಗೆ ಸಂಬಂಧಿಸಿದಂತೆ ವೃದ್ಧ ದಂಪತಿ ಹಾಗೂ ಮಗ-ಸೊಸೆಯ ನಡುವೆ ತೀವ್ರ ವಿವಾದವಿದ್ದು, ಈ ಕುರಿತಾದ ಆಸ್ತಿ ವಿಭಜನೆ ಪ್ರಕರಣವು ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಪ್ರಕರಣದ ಮೇಲೆ ನಿಗಾ ಇರಿಸಲಾಗಿದ್ದು, ನ್ಯಾಯಾಲಯದ ತೀರ್ಪು ಮತ್ತು ನಿಯಮಗಳ ಅನ್ವಯ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+