ತ್ರಿಪುರ ಮುಖ್ಯಮಂತ್ರಿಯಾಗಿ ವಿಪ್ಲವ್ ದೇವ್ ಪ್ರಮಾಣ ವಚನ

Posted By:
Subscribe to Oneindia Kannada

ಅಗರ್ತಲ, ಮಾರ್ಚ್ 09: ತ್ರಿಪುರದ ಭಾರತೀಯ ಜನತಾ ಪಕ್ಷದ ಮೊದಲ ಮುಖ್ಯಮಂತ್ರಿಯಾಗಿ ವಿಪ್ಲವ್ ದೇವ್ ಇಂದು ಪ್ರಮಾಣವಚನ ಸ್ವೀಕರಿಸಿದರು.

48 ವರ್ಷದ ವಿಪ್ಲವ್ ದೇವ್ ಅವರಿಗೆ ತ್ರಿಪುರದ ರಾಜ್ಯಪಾಲ ತಥಾಗಥ ರಾಯ್ ಪ್ರಮಾಣವಚನ ಬೋಧಿಸಿದರು. ಫೆ.18 ರಂದು ನಡೆದಿದ್ದ ತ್ರಿಪುರ ವಿಧಾನಸಭೆ ಚುನಾವಣೆಯ ಫಲಿತಾಂಶ ಮಾ.03 ರಂದು ಹೊರಬಿದ್ದಿತ್ತು. 25 ವರ್ಷಗಳಿಂದ ಎಡಪಕ್ಷದ ತೆಕ್ಕೆಯಲ್ಲಿದ್ದ ತ್ರಿಪುರವನ್ನು ಬಿಜೆಪಿ ತನ್ನ ಬಿಗಿಮುಷ್ಠಿಗೆ ಹಾಕಿಕೊಂಡಿರುವ ಕಾರಣ ಈ ಗೆಲುವನ್ನು ಅಭೂತಪೂರ್ವ ಗೆಲುವು ಎಂದೇ ಬಣ್ಣಿಸಲಾಗುತ್ತಿದೆ.

ಈಶಾನ್ಯದ ಮೂರು ರಾಜ್ಯಗಳಲ್ಲೂ ಬಿಜೆಪಿಯದ್ದೇ ಸರ್ಕಾರ!

ತ್ರಿಪುರದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸುತ್ತಿರುವುದರಿಂದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಹಾಜರಿದ್ದರು. ಬಿಜೆಪಿ ಮುಖಂಡರಾದ ಎಲ್ ಕೆ ಆಡ್ವಾಣಿ, ಮುರಳಿ ಮನೋಹರ್ ಜೋಷಿ, ರಾಜನಾಥ್ ಸಿಂಗ್ ಜೊತೆಗೆ ತ್ರಿಪುರದಲ್ಲಿ ಕಳೆದ ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Agartala: Viplav Dev takes oath as Chief Minister of Tripura

ಮುಖ್ಯಮಂತ್ರಿ ವಿಪ್ಲವ್ ದೇವ್ ಅವರೊಂದಿಗೆ, ಉಪಮುಖ್ಯಮಂತ್ರಿಯಾಗಿ ಜಿಷ್ಣು ದೇವ್ ವರ್ಮನ್ ಸಹ ಪ್ರಮಾಣವಚನ ಸ್ವೀಕರಿಸಿದರು.

ತ್ರಿಪುರ ವಿಧಾನಸಭೆ ಚುನಾವಣಾ ಫಲಿತಾಂಶ: ಬಿಜೆಪಿ-43, ಕಾಂಗ್ರೆಸ್-0, ಸಿಪಿಎಂ- 16

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Agartala: Viplav Dev takes oath as the next Chief Minister of Tripura. Prime minister Narendra Modi, Former CM of Tripura Manik Sarkar, Senior BJP leaders LK Advani, Murli Manohar Joshi & HM Rajnath Singh presented in swearing in ceremony.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ