ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಕಡಿಮೆಯಾದರೂ ಹೋಟೆಲ್ ತಿಂಡಿ-ಊಟ ದುಬಾರಿ, 10 ಅಂಶ

|
Google Oneindia Kannada News

ರೆಸ್ಟೋರೆಂಟ್ ಗಳಿಗೆ ಯಾವುದೇ ಭಯ ಪಡದೆ ಹೋಗಬಹುದು. ಏಕೆಂದರೆ ಈ ಹಿಂದೆ ಇದ್ದ 12 ಅಥವಾ 18ರಷ್ಟು ಜಿಎಸ್ ಟಿ (ರೆಸ್ಟೋರೆಂಟ್ ಏಸಿಯೋ ಅಥವಾ ಏಸಿ ಅಲ್ಲವೋ ಎಂಬುದರ ಆಧಾರದಲ್ಲಿ) ಶೇ 5ಕ್ಕೆ ಇಳಿಸಲಾಗಿದೆ ಎಂಬ ಮಾತನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೇನೋ ಶುಕ್ರವಾರ ಹೇಳಿದರು.

ಆದರೆ, ವಾಸ್ತವದಲ್ಲಿ ಏನಾಗಬಹುದು ಗೊತ್ತಿದೆಯೆ? ರೆಸ್ಟೋರೆಂಟ್ ಅಥವಾ ಹೋಟೆಲ್ ನವರು ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆ ಮಾಡಬಹುದಾ ಅಂತ ಕೇಳಿದರೆ ಸಿಗುವ ಉತ್ತರ: ಬೆಲೆ ಖಂಡಿತಾ ಕಡಿಮೆ ಆಗಲ್ಲ. ಜಿಎಸ್ ಟಿಯನ್ನೇನೋ ಇಳಿಕೆ ಮಾಡಿದ ಸರಕಾರವು ಅದರ ಜತೆಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ತೆಗೆದುಹಾಕಿದೆ.

ಜಿಎಸ್ ಟಿ ದರ ಇಳಿಕೆ; ಇದು ಯಾರ ವಿಜಯ?ಜಿಎಸ್ ಟಿ ದರ ಇಳಿಕೆ; ಇದು ಯಾರ ವಿಜಯ?

ಏನಿದು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಅಂದರೆ, ರೆಸ್ಟೋರೆಂಟ್ ನವರು ತಾವು ಖರೀದಿ ಮಾಡಿದ ವಸ್ತುಗಳಿಗೆ ಜಿಎಸ್ ಟಿ ಪಾವತಿಸಿರುತ್ತಾರೆ. ತಮ್ಮ ವ್ಯಾಪಾರ- ವ್ಯವಹಾರದ ಮೇಲೆ ಜಿಎಸ್ ಟಿ ಕಟ್ಟುವ ವೇಳೆಯಲ್ಲಿ ಅವರೀಗಾಗಲೇ ನಾನಾ ರೂಪದಲ್ಲಿ ಕಟ್ಟಿರುವ ಜಿಎಸ್ ಟಿಯ ಮೊತ್ತವನ್ನು ಕಡಿತ ಮಾಡಿ, ಬಾಕಿ ಮೊತ್ತ ಕಟ್ಟಬೇಕಾಗುತ್ತದೆ.

ಗಬ್ಬರ್ ಸಿಂಗ್ ಟ್ಯಾಕ್ಸ್ 'ಹೆರಿಗೆ' ನೋವಿಗೆ ದನಿಯಾದರೆ ರಾಹುಲ್ ಗಾಂಧಿ?ಗಬ್ಬರ್ ಸಿಂಗ್ ಟ್ಯಾಕ್ಸ್ 'ಹೆರಿಗೆ' ನೋವಿಗೆ ದನಿಯಾದರೆ ರಾಹುಲ್ ಗಾಂಧಿ?

ಆ ರೀತಿ ಸಿಗುವ ತೆರಿಗೆ ವಿನಾಯಿತಿಯನ್ನು ಇನ್ ಪುಟ್ ಟಾಕ್ಸ್ ಕ್ರೆಡಿಟ್ ಎನ್ನಲಾಗುತ್ತದೆ. ಆದರೆ ಈಗ ಜೇಟ್ಲಿ ಅವರು ರೆಸ್ಟೋರೆಂಟ್ ಗಳಲ್ಲಿನ ಜಿಎಸ್ ಟಿ ಇಳಿಕೆ ಮಾಡಿದ ನಂತರ ಆ ಇನ್ ಪುಟ್ ಕ್ರೆಡಿಟ್ ತೆಗೆದುಹಾಕಿದ್ದಾರೆ. ಆ ಕಾರಣವನ್ನು ಮುಂದಿಡುತ್ತಿರುವ ರೆಸ್ಟೋರೆಂಟ್ ಗಳ ಮಾಲೀಕರು ವೆಚ್ಚ ಸರಿದೂಗಿಸಲು ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂಬ ವಾದವನ್ನು ಮುಂದಿಡುತ್ತಿದ್ದಾರೆ.

 ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಇರಬೇಕಾಗಿತ್ತು

ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಇರಬೇಕಾಗಿತ್ತು

ಭಾರತೀಯ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ಒಕ್ಕೂಟಗಳ ಸಮೂಹ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿವೆ. ಆದರೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಇರಲಿ ಎಂಬುದು ಒಕ್ಕೂಟದ ಮನವಿಯಾಗಿತ್ತು. ತೆರಿಗೆ ಹೊರೆಯನ್ನು ಸ್ವಲ್ಪವಾದರೂ ತಗ್ಗಿಸಿಕೊಳ್ಳಲು ಇದ್ದಂಥ ಅವಕಾಶ ಅದು ಎಂದು ಒಕ್ಕೂಟದ ಉಪಾಧ್ಯಕ್ಷ ರಾಹುಲ್ ಸಿಂಗ್ ಪಿಟಿಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

 ಬೆಲೆ ನಿಗದಿ ಹೇಗೆ ಮಾಡುತ್ತಾರೆಂಬ ಕುತೂಹಲ

ಬೆಲೆ ನಿಗದಿ ಹೇಗೆ ಮಾಡುತ್ತಾರೆಂಬ ಕುತೂಹಲ

ಯಾವಾಗ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ನ ವಿನಾಯಿತಿ ಸಿಗುವುದಿಲ್ಲವೋ ಆಗ ವೆಚ್ಚವನ್ನು ಸರಿದೂಗಿಸುವ ಸಲುವಾಗಿ ಆಹಾರ ಪದಾರ್ಥಗಳ ಬೆಲೆಯನ್ನು ಏರಿಸಲೇಬೇಕಾಗುತ್ತದೆ ಎನ್ನುತ್ತಾರೆ ಹೋಟೆಲ್ ಮಾಲೀಕರು. ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ತೆಗೆದ ನಂತರ ಹೋಟೆಲ್ ನಲ್ಲಿನ ದರಗಳನ್ನು ಹೇಗೆ ನಿಗದಿ ಮಾಡುತ್ತಾರೆ ಎಂಬ ಕುತೂಹಲವಿದೆ ಎಂದು ತಜ್ಞರು ಹೇಳಿದ್ದಾರೆ

ಫೈವ್ ಸ್ಟಾರ್ ಹೋಟೆಲ್ ಗಳ ರೆಸ್ಟೋರೆಂಟ್ ಗಳಿಗೆ ಶೇ 18 ಜಿಎಸ್ ಟಿ

ಫೈವ್ ಸ್ಟಾರ್ ಹೋಟೆಲ್ ಗಳ ರೆಸ್ಟೋರೆಂಟ್ ಗಳಿಗೆ ಶೇ 18 ಜಿಎಸ್ ಟಿ

ಇನ್ನು ಫೈವ್ ಸ್ಟಾರ್ ಹೋಟೆಲ್ (ರೂಮ್ ಬಾಡಿಗೆ ರು.7,500ಮೇಲ್ಪಟ್ಟು) ಗಳಲ್ಲಿನ ರೆಸ್ಟೋರೆಂಟ್ ಗಳು ಮತ್ತು ಕೇಟರಿಂಗ್ ಸೇವೆ ಒದಗಿಸುವುದಕ್ಕೆ ಶೇ 18ರಷ್ಟೇ ಜಿಎಸ್ ಟಿ ಇದೆ, ಜತೆಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಕೂಡ ಇದೆ ಎಂದು ಜೇಟ್ಲಿ ಹೇಳಿದ್ದಾರೆ.

ಲಾಭವನ್ನು ಗ್ರಾಹಕರಿಗೆ ದಾಟಿಸುವುದಿಲ್ಲ ಎಂಬ ಅನುಮಾನ

ಲಾಭವನ್ನು ಗ್ರಾಹಕರಿಗೆ ದಾಟಿಸುವುದಿಲ್ಲ ಎಂಬ ಅನುಮಾನ

ಆದರೆ, ಜೇಟ್ಲಿ ಅವರ ಪ್ರಕಾರ: ರೆಸ್ಟೋರೆಂಟ್ ಮಾಲೀಕರಿಗೆ ನೀಡುವ ಅನುಕೂಲವನ್ನು ಗ್ರಾಹಕರಿಗೆ ದಾಟಿಸುವುದಿಲ್ಲ ಎಂಬ ಅಭಿಪ್ರಾಯ ಇದೆ. ಆದರೆ ತಜ್ಞರು ಹೇಳುವುದೇನೆಂದರೆ, ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ತೆಗೆದಿದ್ದು ಒಳ್ಳೆ ನೀತಿಯಲ್ಲ.

178 ವಸ್ತುಗಳ ತೆರಿಗೆ ದರ ಇಳಿಕೆ

178 ವಸ್ತುಗಳ ತೆರಿಗೆ ದರ ಇಳಿಕೆ

ಇನ್ನು ಜಿಎಸ್ ಟಿ ಶೇ 28ರ ಸ್ಲ್ಯಾಬ್ ನಲ್ಲಿ ಬರುತ್ತಿದ್ದ 200ಕ್ಕೂ ಹೆಚ್ಚು ವಸ್ತುಗಳ ಪೈಕಿ 178 ವಸ್ತುಗಳ ತೆರಿಗೆ ದರವನ್ನು ಇಳಿಕೆ ಮಾಡಲಾಗಿದೆ. ಅದರಲ್ಲಿ ಚಾಕೊಲೇಟ್, ಶಾಂಪೂ, ಟೂಥ್ ಪೇಸ್ಟ್ ಮತ್ತಿತರ ವಸ್ತುಗಳಿವೆ.

 20 ಸಾವಿರ ಕೋಟಿ ಆದಾಯ ಕಡಿಮೆ

20 ಸಾವಿರ ಕೋಟಿ ಆದಾಯ ಕಡಿಮೆ

ಈ ರೀತಿ ಜಿಎಸ್ ಟಿ ದರಗಳನ್ನು ತಗ್ಗಿಸಿದ್ದರಿಂದ, ಎಷ್ಟೋ ವಸ್ತುಗಳ ಸ್ಲ್ಯಾಬ್ ಗಳನ್ನು ಬದಲಾಯಿಸಿದ್ದರಿಂದ ಪ್ರಸಕ್ತ ಆರ್ಥಿಕ ವರ್ಷದ ಸರಕಾರದ ಆದಾಯದಲ್ಲಿ 20 ಸಾವಿರ ಕೋಟಿ ಕಡಿಮೆ ಆಗುತ್ತದೆ ಎಂದು ಜಿಎಸ್ ಟಿ ಕೌನ್ಸಿಲ್ ನ ಸುಶೀಲ್ ಮೋದಿ ಹೇಳಿದ್ದಾರೆ

ವಿಪಕ್ಷಗಳ ಹೋರಾಟದ ಫಲ

ವಿಪಕ್ಷಗಳ ಹೋರಾಟದ ಫಲ

ಪಶ್ಚಿಮ ಬಂಗಾಲದ ಹಣಕಾಸು ಸಚಿವ ಅಮಿತ್ ಮಿತ್ರಾ, ವಿಪಕ್ಷಗಳು ಹೋರಾಡಿ ಹಲವು ವಸ್ತುಗಳ ಜಿಎಸ್ ಟಿ ಪ್ರಮಾಣ ತಗ್ಗಿಸಿದ್ದೇವೆ. ಆದರೂ ಇನ್ನೂ ಹಲವು ಅಗತ್ಯ ವಸ್ತುಗಳು ಶೇ 28ರ ಸ್ಲ್ಯಾಬ್ ನಲ್ಲೇ ಇವೆ ಎಂದು ಹೇಳಿದ್ದಾರೆ.

ಭಯಗೊಂಡ ಸರಕಾರಕ್ಕೆ ಬೇರೆ ದಾರಿ ಇರಲಿಲ್ಲ

ಭಯಗೊಂಡ ಸರಕಾರಕ್ಕೆ ಬೇರೆ ದಾರಿ ಇರಲಿಲ್ಲ

ಬದಲಾವಣೆಗೆ ಸಲ್ಲಿಸಿದ್ದ ಬೇಡಿಕೆಗೆ ಭಯ ಬಿದ್ದ ಸರಕಾರಕ್ಕೆ ಬೇರೆ ದಾರಿಯೇ ಇರಲಿಲ್ಲ. ಅವರು ಜಿಎಸ್ ಟಿ ದರ ಕಡಿಮೆ ಮಾಡಲೇ ಬೇಕಿತ್ತು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್

ದೇಶದ ಮೇಲೆ ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಕುವುದಕ್ಕೆ ನಾವು ಬಿಡಲ್ಲ. ಸಣ್ಣ, ಮಧ್ಯಮ ವರ್ಗದ ವ್ಯಾಪಾರಸ್ಥರ ಬೆನ್ನು ಮೂಳೆ ಮುರಿಯಲು ಸಾದ್ಯವಿಲ್ಲ. ಅಸಂಘಟಿತ ವಲಯಗಳು ಹಾಗೂ ಹತ್ತಾರು ಲಕ್ಷ ಉದ್ಯೋಗಗಳನ್ನು ಹೊಸಕಿ ಹಾಕಲು ಅವಕಾಶ ನೀಡಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜಿಎಸ್ ಟಿ ಕೌನ್ಸಿಲ್ ನಿರ್ಣಯ ಹೊರಬಿದ್ದ ನಂತರ ಟ್ವೀಟ್ ಮಾಡಿದ್ದಾರೆ.

ಗುಜರಾತ್ ಚುನಾವಣೆ ಕಾರಣ

ಗುಜರಾತ್ ಚುನಾವಣೆ ಕಾರಣ

ಜಿಎಸ್ ಟಿ ಕೌನ್ಸಿಲ್ ನಲ್ಲಿ ಹೀಗೆ ತೆರಿಗೆ ದರ ಕಡಿಮೆ ಮಾಡುವ ಹಿಂದೆ ಗುಜರಾತ್ ನಲ್ಲಿನ ವಿಧಾನಸಭೆ ಚುನಾವಣೆಯೇ ಕಾರಣ. ಮುಂದಿನ ತಿಂಗಳು ಅಲ್ಲಿ ಚುನಾವಣೆ ಇದೆ. ಅಲ್ಲಿನ ಸಣ್ಣ ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಜಿಎಸ್ ಟಿ ಜಾರಿಯಿಂದ ಬಹಳ ಸಿಟ್ಟಾಗಿದ್ದಾರೆ. ಅವರನ್ನು ಓಲೈಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ವಿರುದ್ಧ ಆರೋಪಿಸಿದೆ.

English summary
Eating out has become cheaper after the GST Council Meeting led by Finance Minister Arun Jaitley revised the rates of the new national tax yesterday. But there will not be a chance of price reduction food, why? Here are the reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X