• search

ಉತ್ತರಪ್ರದೇಶವನ್ನು ಕೇಸರೀಕರಣ ಮಾಡೋಕೆ ಹೊರಟ್ರಾ ಸಿಎಂ ಯೋಗಿ?

By Balaraj Tantri
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಈ ಹಿಂದಿನ ಮಾಯಾವತಿ, ಅಖಿಲೇಶ್ ಸರಕಾರ ಮಾಡಲಿಲ್ಲವೇ, ಬಿಜೆಪಿ ಮಾಡಿದರೆ ತಪ್ಪೇನು ಎನ್ನುವ ಪ್ರಶ್ನೆಗೆ ಬಹುಷ: ಉತ್ತರ ಹುಡುಕುವುದು ಕಷ್ಟ. ಆದರೆ, ಅವರಿಬ್ಬರಿಗಿಂತ, ನನ್ನ ಕಾರ್ಯವೈಖರಿ ಡಿಫರೆಂಟ್ ಎನ್ನುವುದನ್ನು ತೋರಿಸುವುದಕ್ಕೆ ಹಾಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸುವರ್ಣಾವಕಾಶವಿದೆ.

  ಅಭೂತಪೂರ್ವ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಮೇಲೆ, ಮತದಾರರ ನಿರೀಕ್ಷೆ ಬೆಟ್ಟದಷ್ಟಿದೆ. ಆದರೆ, ಇತ್ತೀಚಿನ ಯೋಗಿ ಸರಕಾರದ ಕೆಲವು ನಿರ್ಧಾರಗಳು, ಅಭಿವೃದ್ದಿಗೆ ಹಾತೊರೆಯುತ್ತಿರುವ ಉತ್ತರಪ್ರದೇಶಕ್ಕೆ ಒಳ್ಳೆ ಬೆಳವಣಿಗೆಗಳಂತೆ ಕಾಣಿಸುತ್ತಿಲ್ಲ.

  ಶ್ರೀರಾಮ ಪುತ್ಥಳಿ ನಿರ್ಮಾಣಕ್ಕೆ ಉಪ್ರ ಸರಕಾರ ಸಿದ್ಧತೆ

  ಉತ್ತರಪ್ರದೇಶಕ್ಕೆ ಪ್ರಮುಖವಾಗಿ ಬೇಕಾಗಿರುವ ಕಾನೂನು, ಸುವ್ಯವಸ್ಥೆ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಯೋಗಿ ಸರಕಾರ ಕೈಗೊಂಡಿದ್ದರೂ, ಇಡೀ ಸರಕಾರೀ ಯಂತ್ರ ಕೇಸರೀಕರಣದತ್ತ ಸಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ, ರಾಜ್ಯ ಸರಕಾರೀ ಸಾರಿಗೆ ಸಂಸ್ಥೆ ಬಸ್ಸುಗಳು.

  ಕೆಲವು ದಿನಗಳ ಹಿಂದೆ ಸರಯೂ ನದಿಯ ತಟದಲ್ಲಿ ಬೃಹತ್ ಶ್ರೀರಾಮಚಂದ್ರನ ವಿಗ್ರಹವನ್ನು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ವಿಚಾರ ಪ್ರಕಟಿಸಿದ್ದ ಯೋಗಿ ಆದಿತ್ಯನಾಥ್ ಸರಕಾರದ ನಿರ್ಧಾರ ಬಹುಚರ್ಚಿತ ವಿಷಯವಾಗಿತ್ತು.

  'ಸಬ್ ಕಾ ವಿಕಾಸ್' ಎಂದು ಹೇಳುತ್ತಲೇ ಇರುವ ಯೋಗಿ ಸರಕಾರ ಮಾಡಬೇಕಾಗಿರುವುದು ಬಗೆದಷ್ಟು ಇದ್ದಾಗ, ರಾಮನ ವಿಗ್ರಹ ಪ್ರತಿಷ್ಠಾಪನೆಯೇ ಆಗಿರಲಿ, ರಹೀಮನ ಕೆಲಸಕ್ಕಾಗಿಯೇ ಇರಲಿ ನೂರು ಕೋಟಿ ಖರ್ಚುಮಾಡುವುದು ತರವಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಮುಂದೆ ಓದಿ..

  ಶಾಲಾ ಬ್ಯಾಗನ್ನು ಕೇಸರೀಕರಣಗೊಳಿಸಿದ ಸಿಎಂ ಯೋಗಿ

  ಶಾಲಾ ಬ್ಯಾಗನ್ನು ಕೇಸರೀಕರಣಗೊಳಿಸಿದ ಸಿಎಂ ಯೋಗಿ

  ಅಧಿಕಾರಕ್ಕೆ ಬಂದ ಹೊಸದರಲ್ಲಿ ಆಗಲೇ ಮುದ್ರಣವಾಗಿದ್ದ ಅಖಿಲೇಶ್ ಯಾದವ್ ಭಾವಚಿತ್ರವಿರುವ ಸ್ಕೂಲ್ ಬ್ಯಾಗ್ ಅನ್ನು ಬದಲಾಯಿಸುವುದು ಬೇಡ, ತೆರಿಗೆದಾರರ ಹಣ ಪೋಲಾಗುವುದು ಬೇಡ ಎನ್ನುವ ನಿರ್ಧಾರ ತೆಗೆದುಕೊಂಡು ಸೈಎನಿಸಿ ಕೊಂಡಿದ್ದ ಸಿಎಂ ಯೋಗಿ, ತದನಂತರ ಶಾಲಾ ಬ್ಯಾಗನ್ನು ಕೇಸರೀಕರಣಗೊಳಿಸಿದ್ದರು.

  ಲಕ್ಷಣ್ ಮತ್ತು ರಾಣಿಲಕ್ಷ್ಮೀಬಾಯಿ ಪ್ರಶಸ್ತಿ ಸಮಾರಂಭ

  ಲಕ್ಷಣ್ ಮತ್ತು ರಾಣಿಲಕ್ಷ್ಮೀಬಾಯಿ ಪ್ರಶಸ್ತಿ ಸಮಾರಂಭ

  ಇದಾದ ನಂತರ, ಜೂನ್ ತಿಂಗಳಲ್ಲಿ ಕ್ರೀಡಾಳುಗಳಿಗಾಗಿ ಕೊಡಮಾಡುವ 'ಲಕ್ಷಣ್ ಮತ್ತು ರಾಣಿಲಕ್ಷ್ಮೀಬಾಯಿ' ಪ್ರಶಸ್ತಿ ಸಮಾರಂಭವನ್ನು ಸಂಪೂರ್ಣ ಕೇಸರೀಕರಣಗೊಳಿಸಿದ್ದ ಯೋಗಿ ಸರಕಾರ, ಈ ಪ್ರಶಸ್ತಿಗಾಗಿ ನೀಡುವ ಪ್ರಶಸ್ತಿ ಪತ್ರ, ಬುಕ್ಲೆಟ್, ಪ್ರಶಸ್ತಿ ವಿಜೇತ ಸಮಾರಂಭದ ಉಸ್ತುವಾರಿಗಳ ಉಡುಗೆತೊಡುಗೆಯನ್ನೂ ಕೇಸರಿಮಯಗೊಳಿಸಿತ್ತು.

  ಬುಕ್ಲೆಟ್, ವಾರ್ತಾ ಇಲಾಖೆಯ ಡೈರಿ, ಸಚಿವರ ಮಾಹಿತಿ ಎಲ್ಲವೂ ಕೇಸರಿಮಯ

  ಬುಕ್ಲೆಟ್, ವಾರ್ತಾ ಇಲಾಖೆಯ ಡೈರಿ, ಸಚಿವರ ಮಾಹಿತಿ ಎಲ್ಲವೂ ಕೇಸರಿಮಯ

  ಯೋಗಿ ಸರಕಾರ ನೂರು ದಿನ ಪೂರೈಸಿದ ಹಿನ್ನಲೆಯಲ್ಲಿ ಬಿಡುಗಡೆಗೊಳಿಸಿದ್ದ ಬುಕ್ಲೆಟ್, ವಾರ್ತಾ ಇಲಾಖೆಯ ಡೈರಿ, ಸಚಿವರ ಮಾಹಿತಿಯಿರುವ ವಿವರ ಎಲ್ಲವೂ ಕೇಸರಿಮಯವಾಗಿದೆ. ಕೇಸರಿ ಬ್ಯಾಕ್ ಗ್ರೌಂಡ್ ನಲ್ಲಿ ದೀನ್ ದಯಾಳ್ ಉಪಾಧ್ಯಾಯ, ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರ ಭಾವಚಿತ್ರದೊಂದಿಗೆ ಬುಕ್ಲೆಟ್ ಮುದ್ರಿಸಲಾಗಿದೆ.

  ಮಾಯಾವತಿ ಸರಕಾರ ನೀಲಿ ಬಣ್ಣ, ಅಖಿಲೇಶ್ ಸರಕಾರ ಕೆಂಪು ಮತ್ತು ಹಸಿರು ಬಣ್ಣ

  ಮಾಯಾವತಿ ಸರಕಾರ ನೀಲಿ ಬಣ್ಣ, ಅಖಿಲೇಶ್ ಸರಕಾರ ಕೆಂಪು ಮತ್ತು ಹಸಿರು ಬಣ್ಣ

  ಈ ಹಿಂದಿನ ಮಾಯಾವತಿ ಸರಕಾರ ನೀಲಿ ಬಣ್ಣ, ಅಖಿಲೇಶ್ ಸರಕಾರ ಕೆಂಪು ಮತ್ತು ಹಸಿರು ಬಣ್ಣವನ್ನು ಎಲ್ಲಾ ಕಡೆ ಬಳಸಿಕೊಂಡಿದ್ದರೆ, ಯೋಗಿ ಸರಕಾರ ನಿಧಾನವಾಗಿ ಎಲ್ಲಾ ಕಡೆಯೂ ಕೇಸರಿ ಬಣ್ಣವನ್ನು ಬಳಸಲು ಆರಂಭಿಸಿದೆ. ಸಿಎಂ ಯೋಗಿ ತನ್ನ ಕಚೇರಿಯಲ್ಲಿನ ಮತ್ತು ಕಾರಿನ ಸೀಟನ್ನು ಈಗಾಗಲೇ ಕೇಸರಿ ಬಣ್ಣಕ್ಕೆ ತಿರುಗಿಸಿದ್ದಾಗಿದೆ. ಸರಕಾರದ ಕೇಸರೀಕರಣಕ್ಕೆ ತಾಜಾ ಉದಾಹರಣೆಯಾಗಿ ಮತ್ತೊಂದು ಸೇರ್ಪಡೆಯಾಗಿದೆ.

  ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಐವತ್ತು ಬಸ್ಸುಗಳಿಗೆ ಹಸಿರು (ಕೇಸರಿ) ನಿಶಾನೆ

  ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಐವತ್ತು ಬಸ್ಸುಗಳಿಗೆ ಹಸಿರು (ಕೇಸರಿ) ನಿಶಾನೆ

  ಬುಧವಾರ (ಅ 11) ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಐವತ್ತು ಬಸ್ಸುಗಳಿಗೆ ಹಸಿರು (ಕೇಸರಿ) ನಿಶಾನೆ ಸಿಎಂ ಯೋಗಿ ಆದಿತ್ಯನಾಥ್ ತೋರಿದ್ದಾರೆ. ಬಸ್ಸು ಮತ್ತು ಕರ್ಟನ್ ಸಂಪೂರ್ಣ ಕೇಸರಿ ಕಲರ್ ನಲ್ಲಿದೆ. ಈ ಬಸ್ಸುಗಳಿಗೆ 'ಸಂಕಲ್ಪ ಸೇವಾ' ಎಂದು ಹೆಸರಿಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಈ ಬಸ್ಸುಗಳ ಓಡಾಟವಿರಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  After the BSP’s blue, SP’s red-and-green, it is time for another colour change in Uttar Pradesh to saffron. It started with a saffron towel being put on CM Yogi Adityanath’s chair at his official residence and his car seat, then moved on to government booklets, school bags and now even in buses.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more