ದಾವೂದ್ ಇಬ್ರಾಹಿಂ ಸೋದರ ಸೊಸೆಯ ಮದುವೆಯಲ್ಲಿ ಬಿಜೆಪಿ ಸಚಿವ!
ದಾವೂದ್ ಇಬ್ರಾಹಿಂ ಸೋದರ ಸೊಸೆಯ ಮದುವೆಗೆ ಬಿಜೆಪಿ ಹಿರಿಯ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಭಾಗವಹಿಸಿದ್ದರು ಎಂಬುದು ಇದೀಗ ಮತ್ತೊಮ್ಮೆ ವಿವಾದವನ್ನುಂಟುಮಾಡಿದೆ.
ನಾಸಿಕ್ (ಮಹಾರಾಷ್ಟ್ರ), ಮೇ 26: ಮಹಾರಾಷ್ಟ್ರದ ನಾಸಿಕ್ ನಲ್ಲಿ ಇತ್ತೀಚೆಗೆ ನಡೆದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರ ಸೊಸೆಯ ಮದುವೆಗೆ ಇಲ್ಲಿನ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ತೆರಳಿದ್ದಾರೆಂಬುದು ವಿವಾದಕ್ಕೀಡುಮಾಡಿತ್ತು. ಈ ಬಗ್ಗೆ ತನಿಖೆ ನಡೆಸುವುದಾಗಿ ಇಲ್ಲಿನ ಪೊಲೀಸರೂ ತಿಳಿಸಿದ್ದರು.
ಆದರೆ ಈ ಮದುವೆಗೆ ಬಿಜೆಪಿ ಹಿರಿಯ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಭಾಗವಹಿಸಿದ್ದರು ಎಂಬುದು ಇದೀಗ ಮತ್ತೊಮ್ಮೆ ವಿವಾದವನ್ನುಂಟುಮಾಡಿದೆ. ಗಿರೀಶ್ ಮಹಾಜನ್ ಈ ಮದುವೆಯಲ್ಲಿ ಭಾಗವಹಿಸಿದ್ದ ಫೋಟೊಗಳು ಈಗಾಗಲೇ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕೆಂದು ಇಲ್ಲಿನ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಆಗ್ರಹಿಸಿದ್ದಾರೆ.[ದಾವೂದ್ ಇಬ್ರಾಹಿಂ ಸೋದರ ಸೊಸೆಯ ಮದುವೆಯಲ್ಲಿ ನಾಸಿಕ್ ಪೊಲೀಸರು!]

ಒಬ್ಬ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸಂಬಂಧಿಕರ ಮದುವೆಗೆ ಶಾಸಕರೊಬ್ಬರು ತೆರಳುವುದು ಅತ್ಯಂತ ಗಂಭೀರ ವಿಚಾರ, ಈ ಬಗ್ಗೆ ತನಿಖೆ ನಡೆಯಲೇಬೇಕೆಂದು ಅವರು ಒತ್ತಾಯಿಸಿದ್ದಾರೆ.












Click it and Unblock the Notifications