ದಾವೂದ್ ಇಬ್ರಾಹಿಂ ಸೋದರ ಸೊಸೆಯ ಮದುವೆಯಲ್ಲಿ ನಾಸಿಕ್ ಪೊಲೀಸರು!
ಮೇ 22 ಸೋಮವಾರದಂದು ಮಹಾರಾಷ್ಟ್ರದ ನಾಸಿಕ್ ನಲ್ಲಿ ದಾವೂದ್ ಇಬ್ರಾಹಿಂನ ಸೋದರ ಸೊಸೆಯ ಮದುವೆ ನಡೆದಿತ್ತು. ಈ ಮದುವೆಗೆ ಇಲ್ಲಿನ ಕೆಲ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು ಎಂಬ ಬಗ್ಗೆ ಮಹಾರಾಷ್ಟ್ರದ ದೈನಿಕವೊಂದು ವರದಿ ಮಾಡಿತ್ತು.
ನಾಸಿಕ್ (ಮಹಾರಾಷ್ಟ್ರ), ಮೇ 25: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ಪೊಲೀಸ್ ಸಿಬ್ಬಂದಿಗಳನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತನಿಖೆಗೆ ಒಳಪಡಿಸಲಾಗುತ್ತಿದೆ.
ಮೇ 22 ಸೋಮವಾರದಂದು ಮಹಾರಾಷ್ಟ್ರದ ನಾಸಿಕ್ ನಲ್ಲಿ ದಾವೂದ್ ಇಬ್ರಾಹಿಂನ ಸೋದರ ಸೊಸೆಯ ಮದುವೆ ನಡೆದಿತ್ತು. ಈ ಮದುವೆಗೆ ಇಲ್ಲಿನ ಕೆಲ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು ಎಂಬ ಬಗ್ಗೆ ಮಹಾರಾಷ್ಟ್ರದ ದೈನಿಕವೊಂದು ವರದಿ ಮಾಡಿತ್ತು.[ದಾವೂದ್, ಹಫೀಜ್ ರನ್ನು ಭಾರತಕ್ಕೆ ಕರೆ ತರುವ ಯತ್ನ ನಡೆದಿಲ್ಲ!]

ಈ ಆರೋಪದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನಾಸಿಕ್ ಸಿಟಿ ಪೊಲೀಸ್ ಆಯುಕ್ತ ರವೀಂದ್ರ ಸಿಂಘಲ್ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳು ಮಾತ್ರವಲ್ಲದೆ, ಕೆಲ ರಾಜಕಾರಣಿಗಳೂ ಈ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ದೈನಿಕವೊಂದು ವರದಿಮಾಡಿತ್ತು.












Click it and Unblock the Notifications