ಭೂತಾನ್‌ನಲ್ಲಿ 570 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆ ಒಪ್ಪಂದಕ್ಕೆ ಅದಾನಿ ಪವರ್ ಮತ್ತು ಡಿಜಿಪಿಸಿ ಸಹಿ
ಅದಾನಿ ಪವರ್ ಭಾರತದ ಅತಿದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕ ಸಂಸ್ಥೆಯಾಗಿದೆ. ಇದೀಗ ಇದು ಹಾಗೂ ಭೂತಾನ್‌ನ ಸರ್ಕಾರಿ ಸ್ವಾಮ್ಯದ ಡ್ರಕ್ ಗ್ರೀನ್ ಪವರ್ ಕಾರ್ಪ್ ಲಿಮಿಟೆಡ್ ಭೂತಾನ್‌ನ ಹಿಮಾಲಯ ಭಾಗದಲ್ಲಿ 570 ಮೆಗಾವ್ಯಾಟ್ ಸಾಮರ್ಥ್ಯದ ವಾಂಗ್ಚು ಜಲವಿದ್ಯುತ್ ಯೋಜನೆ ಸ್ಥಾಪನೆಗೆ ಷೇರುದಾರರ ಒಪ್ಪಂದಕ್ಕೆ ಸಹಿ ಹಾಕಿದವು. ಪವರ್ ಖರೀದಿ ಕುರಿತು ತಾತ್ಕಾಲಿಕ ಒಪ್ಪಂದವನ್ನೂ ಆರಂಭಿಸಲಾಗಿದೆ. ಬಹುಮುಖ್ಯವಾಗಿ, ಡೆವಲಪರ್‌ಗಳು ಈ ಯೋಜನೆಗಾಗಿ ಭೂತಾನ್ ರಾಜಶಾಸಿತ ಸರ್ಕಾರದೊಂದಿಗೆ ಕನ್ಸೆಷನ್ ಅಗ್ರಿಮೆಂಟ್‌ಗೆ ಸಹಿ ಹಾಕಿದರು.
ಭೂತಾನಿನ ಗೌರವಾನ್ವಿತ ಪ್ರಧಾನ ಮಂತ್ರಿ ದಾಶೋ ತ್ಸೆರಿಂಗ್ ಟೋಬ್ಗೆ ಮತ್ತು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರ ಸಮ್ಮುಖದಲ್ಲಿ ಸಹಿ ಈ ಒಪ್ಪಂಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದಗಳು, ಅದಾನಿ ಪವರ್ ಮತ್ತು ಡಿಜಿಪಿಸಿಗೆ ವಾಂಗ್ಚು ಜಲವಿದ್ಯುತ್ ಯೋಜನೆಯ ಈ ಅನುಷ್ಠಾನವನ್ನು BOOT (Build, Own, Operate, Transfer) ಮಾದರಿಯಲ್ಲಿ ಪ್ರಾರಂಭಿಸಲು ದಾರಿ ಮಾಡಿಕೊಡುತ್ತವೆ.

ವಾಂಗ್ಚು ಯೋಜನೆಗೆ ನವೀಕರಿಸಬಹುದಾದ ಇಂಧನ ವಿದ್ಯುತ್ ಸ್ಥಾವರ ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸುಮಾರು ರೂ. 60 ಬಿಲಿಯನ್ ಹೂಡಿಕೆ ಆಗಲಿದೆ. ವಿವರವಾದ ಯೋಜನಾ ವರದಿ (ಡಿಪಿಆರ್)ಯ ತಯಾರಿಕೆಯು ಈಗಾಗಲೇ ಪೂರ್ಣಗೊಂಡಿದೆ. 2026ರ ವೇಳೆಗೆ ನಿರ್ಮಾಣ ಕಾರ್ಯಗಳು ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಶಿಲಾನ್ಯಾಸ ಮಾಡಿದ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ.
"ಸುಸ್ಥಿರ ಅಭಿವೃದ್ಧಿಯಲ್ಲಿ ಭೂತಾನ್ ಜಗತ್ತಿಗೆ ಮಾದರಿಯಾಗಿದೆ. ಈ ನವೀಕರಿಸಬಹುದಾದ ಇಂಧನ ಯೋಜನೆಯ ಮೂಲಕ ದೇಶದ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ವಾಂಗ್ಚು ಜಲವಿದ್ಯುತ್ ಯೋಜನೆ ಭೂತಾನ್‌ನ ಶೀತಕಾಲದ ಗರಿಷ್ಠ ಬೇಡಿಕೆಯನ್ನು ನಿರ್ಣಾಯಕವಾಗಿ ಪೂರೈಸುತ್ತದೆ. ಏಕೆಂದರೆ ಆ ಸಮಯದಲ್ಲಿ ಜಲವಿದ್ಯುತ್ ಉತ್ಪಾದನೆ ಕಡಿಮೆ ಇರುತ್ತದೆ. ಬೇಸಿಗೆ ತಿಂಗಳಲ್ಲಿ ಇದು ಭಾರತಕ್ಕೆ ವಿದ್ಯುತ್ ರಫ್ತು ಮಾಡಲಿದೆ," ಎಂದು ಅದಾನಿ ಪವರ್‌ನ ಸಿಇಒ ಎಸ್.ಬಿ.ಖ್ಯಾಲಿಯಾ ಹೇಳಿದರು.
"1960ರ ದಶಕದಿಂದಲೂ ಭೂತಾನ್ ಮತ್ತು ಭಾರತವು ಭೂತಾನ್ ಹೊಂದಿರುವ ಅಪಾರ ಜಲವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಿಕಟವಾಗಿ ಕೆಲಸ ಮಾಡುತ್ತಿವೆ. ಜಲವಿದ್ಯುತ್ ಕ್ಷೇತ್ರದಲ್ಲಿನ ಈ ಸಹಕಾರವು ಎರಡೂ ದೇಶಗಳಿಗೆ ಅಪಾರ ಪ್ರಯೋಜನವನ್ನು ನೀಡಿದೆ. ಇದನ್ನು ಇವುಗಳ ನಡುವೆ ಇರುವ ಆದರ್ಶ ಮತ್ತು ಸ್ನೇಹಪೂರ್ಣ ಸಂಬಂಧಗಳ ಮೂಲಾಧಾರವೆಂದು ಪರಿಗಣಿಸಲಾಗಿದೆ," ಎಂದು ಡಿಜಿಪಿಸಿಯ ಎಂಡಿ ದಾಶೋ ಚೆವಾಂಗ್ ರಿಂಜಿನ್ ಹೇಳಿದರು .
"ಮುಂದಿನ ದಶಕದೊಳಗೆ ಭೂತಾನ್ ಹೆಚ್ಚಿನ ಆದಾಯದ GNH ರಾಷ್ಟ್ರವಾಗಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಜಲವಿದ್ಯುತ್ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಿಂದ ಲಭ್ಯವಾಗುವ ವಿಶ್ವಾಸಾರ್ಹ ಮತ್ತು ಕೈಗೆಟುಕುವ ವಿದ್ಯುತ್, ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಇತರ ಹೂಡಿಕೆಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಈ ಹಿನ್ನೆಲೆ ಭೂತಾನ್ 2040ರ ವೇಳೆಗೆ ಹೆಚ್ಚುವರಿ 15,000 ಮೆಗಾವಾಟ್ ಜಲವಿದ್ಯುತ್ ಮತ್ತು 5,000 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸುವ ಯೋಜನೆ ಹೊಂದಿದೆ," ಎಂದು ಹೇಳಿದರು.
"ಆದ್ದರಿಂದ, 570 ಮೆಗಾವಾಟ್ ಸಾಮರ್ಥ್ಯದ ವಾಂಗ್ಚು ಜಲವಿದ್ಯುತ್ ಯೋಜನೆಯನ್ನು ಸ್ಥಾಪಿಸಲು ಅದಾಣಿ ಗ್ರೂಪ್ ಜೊತೆಗೆ ಪಾಲುದಾರಿಕೆ ಹೊಂದಲು DGPC ಸಂತೋಷ ವ್ಯಕ್ತಪಡಿಸುತ್ತದೆ. ಅವರ ತಾಂತ್ರಿಕ ಮತ್ತು ಆರ್ಥಿಕ ಸಾಮರ್ಥ್ಯ, ಜೊತೆಗೆ ಅದಾನಿ ಗ್ರೂಪ್ ತರುವ ಅಪಾರ ಅನುಭವ ಮತ್ತು ಪರಿಣತಿಯನ್ನು ಪರಿಗಣಿಸಿ, ಯೋಜನೆಯ ಅನುಷ್ಠಾನವನ್ನು ತ್ವರಿತವಾಗೊಳಿಸಲಾಗುತ್ತದೆ. ಇದು ಇಂತಹ ಇತರ ಯೋಜನೆಗಳಿಗೆ ಮಾದರಿಯಾಗಲಿದೆ ಎಂಬ ನಿರೀಕ್ಷೆಯಿದೆ," ಎಂದು ಹೇಳಿದರು.
"ಯೋಜನೆಯು ಪೂರ್ಣಗೊಂಡ ನಂತರ, ಅದು ಭೂತಾನ್‌ನ ಇಂಧನ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಈ ಮೂಲಕ ಭೂತಾನ್ ಮತ್ತು ಭಾರತದ ನಡುವಿನ ಗ್ರಿಡ್ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ," ಎಂದು ಡಿಜಿಪಿಸಿಯ ಎಂಡಿ ದಾಶೋ ಚೆವಾಂಗ್ ರಿಂಜಿನ್ ಹೇಳಿದರು .
ವಾಂಗ್‌ಚು ಯೋಜನೆ, ಭೂತಾನ್‌ನಲ್ಲಿ ಜಂಟಿಯಾಗಿ 5,000 ಮೆಗಾವ್ಯಾಟ್ ಜಲವಿದ್ಯುತ್ ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಮತ್ತು ಡಿಜಿಪಿಸಿ ನಡುವೆ ಮೇ 2025 ರಲ್ಲಿ ಸಹಿ ಹಾಕಲಾದ ಒಪ್ಪಂದದಡಿಯಲ್ಲಿ ಕೈಗೆತ್ತಿಕೊಳ್ಳಲಾದ ಮೊದಲ ಜಲವಿದ್ಯುತ್ ಯೋಜನೆಯಾಗಿದೆ. ಈ ಕಾರ್ಯತಂತ್ರದ ಪಾಲುದಾರಿಕೆ ಅಡಿಯಲ್ಲಿ ಮುಂಬರುವ ಯೋಜನೆಗಳಿಗಾಗಿ ಅದಾನಿ ಗ್ರೂಪ್ ಮತ್ತು ಡಿಜಿಪಿಸಿ ಹೆಚ್ಚಿನ ಚರ್ಚೆಗಳನ್ನು ನಡೆಸುತ್ತಿವೆ.
ದಯವಿಟ್ಟು ಗಮನಿಸಿ, ಇದು ಕೇವಲ ಉದ್ದೇಶಿತ ಸ್ವೀಕರಿಸುವವರ ಬಳಕೆಗೆ ಮಾತ್ರ ಉದ್ದೇಶಿಸಲ್ಪಟ್ಟಿವೆ. ನೀವು ಉದ್ದೇಶಿತ ಸ್ವೀಕರಿಸುವವರು ಅಲ್ಲದಿದ್ದರೆ, ಈ ಸಂದೇಶ ಮತ್ತು ಗೌಪ್ಯತೆ ಪರಿಶೀಲನೆ, ಬಳಕೆ, ಬಹಿರಂಗಪಡಿಸುವುದು, ಹಂಚಿಕೆ, ವಿತರಣೆ ಅಥವಾ ನಕಲು ಮಾಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನೀವು ಈ ಇಮೇಲ್ ಅನ್ನು ತಪ್ಪಾಗಿ ಸ್ವೀಕರಿಸಿದ್ದರೆ, ದಯವಿಟ್ಟು ತಕ್ಷಣ ಕಳುಹಿಸಿದವರಿಗೆ ತಿಳಿಸಿ ಮತ್ತು ಈ ಇಮೇಲ್ ಅನ್ನು ಅಳಿಸಿ. ಅಲ್ಲದೆ, ಈ ಸಂದೇಶದಲ್ಲಿ ತಿಳಿಸಲಾದ ಯಾವುದೇ ಅಭಿಪ್ರಾಯಗಳು, ತೀರ್ಮಾನಗಳು ಅಥವಾ ಬದ್ಧತೆಗಳು ಕೇವಲ ಕಳುಹಿಸಿದ ವ್ಯಕ್ತಿಗಷ್ಟೇ ಸೇರಿದ್ದು. ಅವುಗಳು ಕಡ್ಡಾಯವಾಗಿ ವರ್ಸೆ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ.












Click it and Unblock the Notifications