Jayaprada : ನಟಿ ಜಯಪ್ರದಾಗೆ 6 ತಿಂಗಳು ಜೈಲು, 5 ಸಾವಿರ ದಂಡ : ಪ್ರಕರಣ ಏನು ಗೊತ್ತಾ?
ಜನಪ್ರಿಯ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈನ ಎಗ್ಮೋರ್ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಚೆನ್ನೈನ ರಾಯಪೇಟಾದಲ್ಲಿ ಆಕೆಯ ಒಡೆತನದ ಚಿತ್ರಮಂದಿರದ ನೌಕರರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಆಕೆಗೆ 5,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಸಿನಿಮಾ ಹಾಲ್ ಅನ್ನು ಚೆನ್ನೈಗೆ ಸೇರಿದ ರಾಮ್ ಕುಮಾರ್ ಮತ್ತು ರಾಜಾ ಬಾಬು ನಡೆಸುತ್ತಿದ್ದಾರೆ. ಚಿತ್ರಮಂದಿರ ಕಾರ್ಮಿಕರ ಇಎಸ್‌ಐ ಪಾವತಿಸಲು ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಸಮಸ್ಯೆ ಆರಂಭವಾಗಿದ್ದು, ಕಾರ್ಮಿಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸಿಬ್ಬಂದಿಗೆ ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿದ ನಟಿ, ಪ್ರಕರಣವನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದಾಗ್ಯೂ, ಕಾರ್ಮಿಕ ಸರ್ಕಾರಿ ವಿಮಾ ನಿಗಮದ ವಕೀಲರು ಆಕೆಯ ಮನವಿಯನ್ನು ವಿರೋಧಿಸಿದರು, ನಂತರ ಜಯಪ್ರದಾ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಇತರ ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿಗಿದೆ. ಅದೇ ರೀತಿ ಚಿತ್ರಮಂದಿರದ ಎಲ್ಲಾ ಕಾರ್ಮಿಕರಿಗೆ ತಲಾ 5,000 ರೂ.ಗಳ ದಂಡ ಕಟ್ಟುವಂತೆಯೂ ತಿಳಿಸಲಾಗಿದೆ.
ಈ ಮೊದಲು ಜಯಪ್ರದಾ ಥಿಯೇಟರ್ ಕಾಂಪ್ಲೆಕ್ಸ್‌ಗೆ ಸಂಬಂಧಪಟ್ಟಂತೆ 20 ಲಕ್ಷ ರೂಪಾಯಿ ತೆರಿಗೆ ಕಟ್ಟಿರಲಿಲ್ಲ. ನಂತರ ನ್ಯಾಯಾಲಯ ಆದೇಶ ನೀಡಿದ ಬಳಿಕ ಪಾಲಿಕೆ ಅಧಿಕಾರಿಗಳು ಥಿಯೇಟರ್ನ ಕುರ್ಚಿ, ಪ್ರೊಜೆಕ್ಟರ್ಗಳನ್ನು ಜಪ್ತಿ ಮಾಡಿದ್ದರು. ಆದರೆ ಈಗ ಮತ್ತೊಂದು ಪ್ರಕರಣದಲ್ಲಿ ಅವರಿಗೆ ಜೈಲು ಶಿಕ್ಷೆಯಾಗಿದೆ.












Click it and Unblock the Notifications