ಟ್ರೋಲ್ ಗೂಂಡಾಗಿರಿ ಎಂಬ ಹೊಸ ಪದ ಹುಟ್ಟು ಹಾಕಿದ ಪ್ರಕಾಶ್ ರೈ ಪ್ರಹಸನ

Posted By:
Subscribe to Oneindia Kannada

ಬಹುಭಾಷಾ ನಟ ಪ್ರಕಾಶ್ ರೈ ತಮ್ಮ ಸಿಟ್ಟನ್ನೆಲ್ಲ ಹೊರ ಹಾಕಿದ್ದಾರೆ. ಟ್ರೋಲ್ ಗೂಂಡಾಗಿರಿ ಎಂಬುದು ಅವರೇ ನೀಡಿರುವ ಹೆಸರು ಹಾಗೂ ಅದರ ವಿರುದ್ಧ ಅಭಿಯಾನವನ್ನು ಆರಂಭಿಸಿದ್ದಾರೆ. ಇದನ್ನೆಲ್ಲ ಗಮನಿಸಿದರೆ ತುಂಬ ಕೆಲಸಗಳನ್ನು ಮೈಗೆ ಹಚ್ಚಿಕೊಂಡ ವ್ಯಕ್ತಿ ಹೀಗೆ ಏನನ್ನೂ ದೀರ್ಘವಾಗಿ ಎಳೆಯಲಾರ ಎನಿಸುತ್ತದೆ.

ಆದರೆ, ಪ್ರಕಾಶ್ ರೈ ಸಾಮಾಜಿಕ ಜಾಲ ತಾಣಗಳಲ್ಲಿನ ಟ್ರೋಲ್ ಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡಂತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ಕರೆದು ಹೇಳಿದ್ದಾರೆ. ಇನ್ನು ಗುರುಗ್ರಾಮದಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರದ್ಯುಮ್ನ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಬಸ್ ಕಂಡಕ್ಟರ್ ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಟ್ರೋಲ್ ಕಡಿವಾಣಕ್ಕೆ ಹೊರಟ ರೈ ವಿರುದ್ಧವೇ ಶುರುವಾಯ್ತು ಟ್ರೋಲ್!

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಚಾರಣೆ ನಡೆಸುತ್ತಿರುವ ಆಯೋಗದ ಎದುರು 'ಅಮ್ಮ' ಸೋದರ ಸಂಬಂಧಿ ದೀಪಾ ಹಾಜರಾಗಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ರ ಜನ್ಮ ದಿನದ ಸಂಭ್ರಮದಲ್ಲಿ ಅವರ ಮಗ- ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಾಲಿಗೆ ನಮಸ್ಕರಿಸುತ್ತಿರುವ ಚಿತ್ರ ಇದೆ.

ದೇಶದ- ವಿದೇಶದ ಇನ್ನಷ್ಟು ಆಸಕ್ತಿಕರ ಚಿತ್ರ- ಸುದ್ದಿ ಇಲ್ಲಿದೆ.

ಟ್ರೋಲ್ ವಿರುದ್ಧ ವಾರ್

ಟ್ರೋಲ್ ವಿರುದ್ಧ ವಾರ್

ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುತ್ತಿರುವ ಟ್ರೋಲ್ ವಿರುದ್ಧ ಅಭಿಯಾನ ಆರಂಭಿಸುವ ಬಗ್ಗೆ ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ನಾಯಿಗಳ ಚಿಕಿತ್ಸಾ ಕೇಂದ್ರ

ನಾಯಿಗಳ ಚಿಕಿತ್ಸಾ ಕೇಂದ್ರ

ಪಾರ್ಶ್ವ ವಾಯು ಸೇರಿದಂತೆ ವಿವಿಧ ಸಮಸ್ಯೆಯಿರುವ ನಾಯಿಗಳಿಗೆ ನೋಯ್ಡಾದಲ್ಲಿ ಫಿಸಿಯೋ ಥೆರಪಿ ಹಾಗೂ ಹೈಡ್ರೋ ಥೆರಪಿ ಚಿಕಿತ್ಸೆ ನೀಡುವ ಕೇಂದ್ರ ಆರಂಭಿಸಲಾಗಿದೆ.

ನಾಸಾ ಬಿಡುಗಡೆ ಮಾಡಿದ ಚಿತ್ರ

ನಾಸಾ ಬಿಡುಗಡೆ ಮಾಡಿದ ಚಿತ್ರ

ಗಗನ ಯಾತ್ರಿಗಳಾದ ಜೋ ಅಕಾಬ, ಬ್ರೆಸ್ನಿಕ್ ಮತ್ತು ಮಾರ್ಕ್ ವಾಂಡೆ ಹೈ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ನೀಡಿದ ಸಂದರ್ಶನದ ಫೋಟೋ ಇದು. ಆದರೆ ಯಾವ ದಿನದಂದು ಎಂಬುದನ್ನು ಫೋಟೋ ಬಿಡುಗಡೆ ಮಾಡಿರುವ ನಾಸಾ ತಿಳಿಸಿಲ್ಲ.

ಬಸ್ ಕಂಡಕ್ಟರ್ ಗೆ ಜಾಮೀನು

ಬಸ್ ಕಂಡಕ್ಟರ್ ಗೆ ಜಾಮೀನು

ಗುರುಗ್ರಾಮದ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಪ್ರದ್ಯುಮ್ನ ಕೊಲೆ ಪ್ರಕರಣದಲ್ಲಿ ಬಂಧಿಸಿದ್ದ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಗೆ ಜಾಮೀನಿನ ಮೇಲೆ ಬಿಡುಗಡೆ ಆದ ನಂತರ ಮಾಧ್ಯಮಗಳ ಎದುರು ಕಾಣಿಸಿಕೊಂಡಿದ್ದು ಹೀಗೆ.

ಬಿಜೆಪಿ ಬೆಂಬಲಿಗರಿಂದ ಮೋಂಬತ್ತಿ ಸಂಭ್ರಮ

ಬಿಜೆಪಿ ಬೆಂಬಲಿಗರಿಂದ ಮೋಂಬತ್ತಿ ಸಂಭ್ರಮ

ಗುಜರಾತ್ ವಿಧಾನಸಭಾ ಚುನಾವಣೆ ಕಣ್ಣಳತೆಯಲ್ಲೇ ಇರುವ ವೇಳೆಯಲ್ಲಿ ಬಿಜೆಪಿ ಬೆಂಬಲಿಗರು ರಾಜ್ಯದ ನಕಾಶೆ ರಚಿಸಿ, ಅದರಲ್ಲಿ ಮೋಂಬತ್ತಿ ಹೊತ್ತಿಸಿ ಕಂಡುಬಂದಿದ್ದು ಹೀಗೆ.

ವಿಚಾರಣೆಗೆ ಸೋದರ ಸಂಬಂಧಿ

ವಿಚಾರಣೆಗೆ ಸೋದರ ಸಂಬಂಧಿ

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಆಯೋಗದ ಎದುರು 'ಅಮ್ಮ' ಸೋದರ ಸಂಬಂಧಿ ಜೆ.ದೀಪಾ ಹಾಜರಾಗಿದ್ದರು.

ಡ್ಯಾನ್ಸಿಂಗ್ ಸ್ಟಾರ್ ಚಾಂಪಿಯನ್ಸ್

ಡ್ಯಾನ್ಸಿಂಗ್ ಸ್ಟಾರ್ ಚಾಂಪಿಯನ್ಸ್

ಡ್ಯಾನ್ಸಿಂಗ್ ವಿಥ್ ಸ್ಟಾರ್ಸ್ ಚಾಂಪಿಯನ್ಸ್ ಆಗಿ ಆಯ್ಕೆಯಾದ ಜೋರ್ಡಾನ್ ಫಿಷರ್ ಮತ್ತು ಲಿಂಡ್ಸೆ ಅರ್ನಾಲ್ಡ್ ಲಾಸ್ ಏಂಜಲೀಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಡುಬಂದಿದ್ದು ಹೀಗೆ.

ಪಾದಕ್ಕೆ ನಮಸ್ಕರಿಸಿದ ಅಖಿಲೇಶ್ ಯಾದವ್

ಪಾದಕ್ಕೆ ನಮಸ್ಕರಿಸಿದ ಅಖಿಲೇಶ್ ಯಾದವ್

ಮುಲಾಯಂ ಸಿಂಗ್ ಯಾದವ್ ರ ಜನ್ಮ ದಿನದ ಸಂಭ್ರಮಾಚರಣೆ ವೇಳೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ತಂದೆಯ ಕಾಲಿಗೆ ನಮಸ್ಕರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the PTI photo feature with the theme actor Prakash Rai press meet, Mulayam Singh Yadav birthday and other incident.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ