ಮುಂಬೈ ಬಿಟ್ಟು ಚೆನ್ನೈಗೆ ತನ್ನ ನೆಲೆ ಬದಲಿಸಿದ ನಟ ಅಮಿರ್ ಖಾನ್, ಕಾರಣವೇನು ಗೊತ್ತಾ?
ಚೆನ್ನೈ, ಅಕ್ಟೋಬರ್ 20: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಖ್ಯಾತರಾದ ಅಮೀರ್ ಖಾನ್ ತಮ್ಮ ನೆಲೆಯನ್ನು ಚೆನ್ನೈಗೆ ಬದಲಾಯಿಸಲು ಯೋಜಿಸುತ್ತಿದ್ದಾರೆ. ತನ್ನ ತಾಯಿ ಜೀನತ್ ಹುಸೇನ್ ಕಾರಣದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ವರದಿ ಪ್ರಕಾರ, ತಮ್ಮ ಕುಟುಂಬಕ್ಕೆ ಸಾಕಷ್ಟು ಹತ್ತಿರವಿರುವ ಅಮೀರ್, ಮುಂದಿನ ಎರಡು ತಿಂಗಳ ಕಾಲ ತಾತ್ಕಾಲಿಕವಾಗಿ ಚೆನ್ನೈಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದಾರೆ. ನಟ ಅಮೀರ್ ತಾಯಿ ಸ್ವಲ್ಪ ಸಮಯದಿಂದ ಆರೋಗ್ಯವಾಗಿಲ್ಲಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ರಸ್ತುತ ಚೆನ್ನೈನಲ್ಲಿರುವ ಖಾಸಗಿ ವೈದ್ಯಕೀಯ ಸೌಲಭ್ಯದ ಆರೈಕೆಯಲ್ಲಿದ್ದಾರೆ. ಈ ನಿರ್ಣಾಯಕ ಸಮಯದಲ್ಲಿ ಅಮೀರ್ ತಾಯಿಯ ಪಕ್ಕದಲ್ಲಿರಲು ಬಯಸಿದ್ದಾರೆ. ಅಮೀರ್ ತನ್ನ ತಾತ್ಕಾಲಿಕ ಮನೆಯನ್ನು ತನ್ನ ತಾಯಿಯ ಚಿಕಿತ್ಸಾ ಕೇಂದ್ರದ ಹತ್ತಿರ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಮೀರ್ ಖಾನ್ ಮತ್ತೆ ತಾವು ಸಿನೆಮಾ ಮಾಡುವ ಯೋಜನೆಯನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಈ ಸುದ್ದಿ ಬಂದಿದೆ. ಅವರು ಸಿತಾರೆ ಜಮೀನ್ ಪರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ "ನಾನು ಈ ಸಿತಾರೆ ಜಮೀನ್ ಪರ್ ಚಿತ್ರದಲ್ಲಿ ನಟಿಸುತ್ತಿದ್ದೇನೆ ಮತ್ತು ನಿರ್ಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ತಾರೆ ಜಮೀನ್ ಪರ್ ಎಂಬ ಕಾನ್ಸೆಪ್ಟ್‌ನೊಂದಿಗೆ ನಾವು ಹತ್ತು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಆ ಚಿತ್ರವು ನಿಮ್ಮನ್ನು ಅಳುವಂತೆ ಮಾಡಿತು, ಇದು ನಿಮ್ಮನ್ನು ನಗಿಸುತ್ತದೆ. ನಾನು ದರ್ಶೀಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ, ಆದರೆ ಈ ಚಿತ್ರದಲ್ಲಿ ಒಂಬತ್ತು ಜನರು ತಮ್ಮದೇ ಆದ ಸಮಸ್ಯೆಗಳೊಂದಿಗೆ ನನಗೆ ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ.
ಅಮೀರ್ ಖಾನ್ ಕೂಡ ಸನ್ನಿ ಡಿಯೋಲ್ ಅವರ ಲಾಹೋರ್ 1947 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಜ್ ಕುಮಾರ್ ಸಂತೋಷಿ ನಿರ್ದೇಶಿಸಲಿದ್ದಾರೆ. ಇದನ್ನು ಅಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್ ಹೂಡಿಕೆ ಮಾಡಿದೆ.
ನಾನು ಮತ್ತು ಎಕೆಪಿಯಲ್ಲಿನ ಇಡೀ ತಂಡವು ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಲಾಹೋರ್ 1947 ಎಂಬ ಶೀರ್ಷಿಕೆಯಡಿಯಲ್ಲಿ ಸನ್ನಿ ಡಿಯೋಲ್ ನಟಿಸಿರುವ ನಮ್ಮ ಮುಂದಿನ ಸಿನೆಮಾವನ್ನು ಘೋಷಿಸಲು ಉತ್ಸುಕರಾಗಿದ್ದೇವೆ. ಅಗಾಧವಾದ ಪ್ರತಿಭಾವಂತ ಸನ್ನಿ ಮತ್ತು ನನ್ನ ಮೆಚ್ಚಿನವರೊಂದಿಗೆ ನಟಿಸಲು ನಾವು ಎದುರು ನೋಡುತ್ತಿದ್ದೇವೆ. ನಿರ್ದೇಶಕರು ರಾಜ್ ಸಂತೋಷಿ. ನಾವು ಆರಂಭಿಸಿರುವ ಪ್ರಯಾಣವು ಅತ್ಯಂತ ಶ್ರೀಮಂತವಾಗಿದೆ ಎಂದು ಭರವಸೆ ನೀಡುತ್ತದೆ. ನಿಮ್ಮ ಆಶೀರ್ವಾದವನ್ನು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.
ಅಮೀರ್ ಖಾನ್ ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಲನಚಿತ್ರವು ಹಾಲಿವುಡ್ ಕಲ್ಟ್-ಕ್ಲಾಸಿಕ್ ಫಾರೆಸ್ಟ್ ಗಂಪ್‌ನ ಹಿಂದಿ ರಿಮೇಕ್ ಆಗಿದ್ದು, ಅಕಾಡೆಮಿ ಪ್ರಶಸ್ತಿ ವಿಜೇತ ನಟ ಟಾಮ್ ಹ್ಯಾಂಕ್ಸ್ ಅವರನ್ನು ಒಳಗೊಂಡಿತ್ತು. ಕರೀನಾ ಕಪೂರ್ ಮತ್ತು ಮೋನಾ ಸಿಂಗ್ ಕೂಡ ಲಾಲ್ ಸಿಂಗ್ ಚಡ್ಡಾದ ಭಾಗವಾಗಿದ್ದರು.












Click it and Unblock the Notifications