ಐರೋಮ್ ಶರ್ಮಿಳಾ ಹೊಸ ರಾಜಕೀಯ ಪಕ್ಷ ಘೋಷಣೆ

Posted By:
Subscribe to Oneindia Kannada

ಮಣಿಪುರ, ಅಕ್ಟೋಬರ್ 06: ಸರಿ ಸುಮಾರು 16 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದ ಮಣಿಪುರದ ಉಕ್ಕಿನ ಮಹಿಳೆ ಐರೋಮ್ ಶರ್ಮಿಳಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ (AFSPA)ಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಶರ್ಮಿಳಾ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಕ್ಕಾಗಿ ಶರ್ಮಿಳಾ ಅವರ ಮೇಲೆ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದ ಬಳಿಕ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗುತ್ತಿದ್ದಾರೆ.

ಮುಂದಿನ ವರ್ಷ ಮಣಿಪುರದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಶರ್ಮಿಳಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಆಗಸ್ಟ್ 9 ರಂದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಶರ್ಮಿಳಾ,ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದರು.

ನವೆಂಬರ್ 1, 2000ರಂದು ಮಣಿಪುರದ ಇಂಫಾಲ್‌ ವಿಮಾನ ನಿಲ್ದಾಣದ ಸಮೀಪದ 'ಮಾಲೋಂ' ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನ ಸಾರ್ವಜನಿಕರನ್ನು ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಇದನ್ನು ಪ್ರತಿಭಟಿಸಿ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಚುನಾವಣೆಗೆ ಸ್ಪರ್ಧಿಸುವಂತೆ ಈ ಹಿಂದೆ ಆಹ್ವಾನ

ಚುನಾವಣೆಗೆ ಸ್ಪರ್ಧಿಸುವಂತೆ ಈ ಹಿಂದೆ ಆಹ್ವಾನ

2014ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್‌ ಮತ್ತು ಆಮ್‌ಆದ್ಮಿ ಪಕ್ಷಗಳು ಶರ್ಮಿಳಾ ಬಳಿ ವಿನಂತಿಸಿಕೊಂಡಿದ್ದವು. ಆದರೆ ಶರ್ಮಿಳಾ ಈ ಬೇಡಿಕೆ ತಿರಸ್ಕರಿಸಿದ್ದು 'ನಾನು ರಾಜಕಾರಣಿಯಲ್ಲ, ಸಾಮಾಜಿಕ ಹೋರಾಟಗಾರ್ತಿ, ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ' ಎಂದು ಹೇಳಿದ್ದರು.

ಐರೋಮ್ ಶರ್ಮಿಳಾ ಏತಕ್ಕಾಗಿ ಹೋರಾಟ

ಐರೋಮ್ ಶರ್ಮಿಳಾ ಏತಕ್ಕಾಗಿ ಹೋರಾಟ

ಸಶಸ್ತ್ರ ಪಡೆಗಳಿಗೆ ಈ ಕಾಯ್ದೆ ವಿಶೇಷಾಧಿಕಾರ ನೀಡುತ್ತದೆ. ಅನುಮಾನ ಬಂದವರನ್ನು ಬಂಧಿಸುವ ಮತ್ತು ಹತ್ಯೆ ಮಾಡುವ ಅಧಿಕಾರ ಪೊಲೀಸರಿಗೆ ದೊರೆಯುತ್ತದೆ. ಈಶಾನ್ಯ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರಕ್ಕೆ ಈ ಕಾನೂನು ಅನ್ವಯಿಸುತ್ತದೆ. ಮಣಿಪುರ ಸೇರಿದಂತೆ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳಿಗೆ ವಿಶೇಷಾಧಿಕಾರ ನೀಡಿರುವುದನ್ನು ವಿರೋಧಿಸಿ ಹೋರಾಟ ಆರಂಭ.ಸಶಸ್ತ್ರ ಪಡೆಗಳಿಗೆ ವಿಶೇಷಾಧಿಕಾರ ಕಾಯ್ದೆ ಸಪ್ಟೆಂಬರ್ 11, 1958ರಲ್ಲಿ ಜಾರಿಯಾಯಿತು.

ನ್ಯಾಯಾಂಗ ಬಂಧನದ ವಶದಲ್ಲಿದ್ದ ಶರ್ಮಿಳಾ

ನ್ಯಾಯಾಂಗ ಬಂಧನದ ವಶದಲ್ಲಿದ್ದ ಶರ್ಮಿಳಾ

2006ರಲ್ಲಿ ದೆಹಲಿ ಜಂತರ್ ಮಂತರ್ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡ ವೇಳೆ ಐರೋಮ್ ಅವರ ವಿರುದ್ಧ ಐಪಿಸಿ ಸೆಕ್ಷನ್ 309 (ಆತ್ಮಹತ್ಯೆಗೆ ಯತ್ನ) ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ನ್ಯಾಯಾಂಗ ಬಂಧನದ ವಶದಲ್ಲಿದ್ದ ಶರ್ಮಿಳಾ ಅವರಿಗೆ ಮೂಗಿನ ಮೂಲಕ ನಳಿಕೆಯಿಂದ ದ್ರವ ಆಹಾರ ನೀಡಲಾಗುತ್ತಿದೆ. ಈಗ ಕೋರ್ಟಿನಲ್ಲಿ ಆತ್ಮಹತ್ಯಾ ಪ್ರಕರಣದಿಂದ ಮುಕ್ತರಾಗಿದ್ದಾರೆ.

ರವೀಂದ್ರನಾಥ ಠಾಗೋರ್‌ ಶಾಂತಿ ಪ್ರಶಸ್ತಿ ಸಿಕ್ಕಿದೆ

ರವೀಂದ್ರನಾಥ ಠಾಗೋರ್‌ ಶಾಂತಿ ಪ್ರಶಸ್ತಿ ಸಿಕ್ಕಿದೆ

ಮಾನವ ಹಕ್ಕುಗಳ ಹೋರಾಟಕ್ಕೆ ಸಂಬಂಧಿಸಿ ಶರ್ಮಿಳಾ ಅವರಿಗೆ ಗ್ವಾನ್‌ಗು, ಮಲೆಯಾಳಂ ಫೌಂಡೇಶನ್‌ನಿಂದ 'ಮೈಲಮ್ಮಾ', ಮತ್ತು ರವೀಂದ್ರನಾಥ ಠಾಗೋರ್‌ ಶಾಂತಿ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗಿದೆ.


ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A district court in Manipur on Wednesday acquitted rights activist Irom Chanu Sharmila in an attempted suicide case and the 'Iron Lady' announced that she would launch her political party this month.
Please Wait while comments are loading...