
ಶ್ರದ್ಧಾ ವಾಕರ್ ದೇಹ ಪೀಸ್ ಪೀಸ್ ಮಾಡಲು ಚೀನಾದ ಚಾಕು ಬಳಕೆ!
ನವದೆಹಲಿ, ಡಿಸೆಂಬರ್ 02: ಶ್ರದ್ಧಾ ವಾಕರ್ ಭೀಕರ ಹತ್ಯೆಯ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್-ಇನ್ ಗೆಳತಿಯ ಮೃತದೇಹವನ್ನು ಚೀನಾದ ಚಾಕುವನ್ನು ಬಳಸಿ ಛಿದ್ರ ಛಿದ್ರವಾಗಿ ಕತ್ತರಿಸಿದ್ದಾನೆ ಎಂದು ಗೊತ್ತಾಗಿದೆ. ನಾರ್ಕೋ ಪರೀಕ್ಷೆಯ ವೇಳೆ ಅಫ್ತಾಬ್ ಈ ಬಗ್ಗೆ ತಪ್ಪೊಪ್ಪಿಗೆಯ ಹೇಳಿಕೆಯನ್ನು ನೀಡಿದ್ದಾನೆ.
ನಾರ್ಕೋ ಪರೀಕ್ಷೆಯಲ್ಲಿ ಆರೋಪಿಯ ತಪ್ಪೊಪ್ಪಿಗೆಯನ್ನು ನ್ಯಾಯಾಲಯದಲ್ಲಿ ಬಳಸಲಾಗದಿದ್ದರೂ, ತನಿಖಾಧಿಕಾರಿಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದು ಸಾಬೀತಾಗಿದೆ. ಪಾಲಿಗ್ರಾಫ್ ಮತ್ತು ನಾರ್ಕೋ ಪರೀಕ್ಷೆಯ ಫಲಿತಾಂಶಗಳು ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಲ್ಲ ಎಂದು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ. ಈ ಪರೀಕ್ಷೆಗಳು ದೆಹಲಿ ಪೊಲೀಸರಿಗೆ ಪುರಾವೆಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಆ ಮೂಲಕ ತಪ್ಪಿತಸ್ಥರ ವಿಚಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
Video: ಬಹಿರಂಗ ಸಭೆಯಲ್ಲೇ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ!
ಇದರ ಮಧ್ಯೆ, ಪೊಲೀಸರು ಇನ್ನೂ ಶ್ರದ್ಧಾ ವಾಕರ್‌ನ ತಲೆಬುರುಡೆಯನ್ನು ಕಂಡುಹಿಡಿಯಬೇಕಾಗಿಲ್ಲ. ಆರೋಪಿ ಪೂನಾವಾಲಾ ವಿಚಾರಣೆಯ ಸಮಯದಲ್ಲಿ ಮತ್ತು ನಂತರದ ಪಾಲಿಗ್ರಾಫ್ ಮತ್ತು ನಾರ್ಕೋ ವಿಶ್ಲೇಷಣೆಯ ಸಮಯದಲ್ಲಿ ತಪ್ಪೊಪ್ಪಿಕೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶ್ರದ್ಧಾ ವಾಕರ್ ಹತ್ಯೆಯ ಪ್ರಮುಖ ಬೆಳವಣಿಗೆಗಳು ಹೀಗಿದೆ
* ಕೋಪದ ಭರದಲ್ಲಿ ಶ್ರದ್ಧಾಳನ್ನು ಕೊಂದಿರುವುದಾಗಿ ಆರೋಪಿ ಆಫ್ತಾಬ್ ಒಪ್ಪಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.
* ನಾರ್ಕೋ ಪರೀಕ್ಷೆಗಾಗಿ ಅಫ್ತಾಬ್‌ಗೆ ಸೋಡಿಯಂ ಪೆಂಟೋಥಾಲ್ ಅನ್ನು ನೀಡಲಾಯಿತು, ನಂತರ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
* ಡಿಸೆಂಬರ್ 5 ರಂದು ಅಫ್ತಾಬ್ ಎರಡನೇ ನಾರ್ಕೊ ಪರೀಕ್ಷೆಗೆ ಒಳಪಡಿಸಲಾಗುತ್ತದೆ
* "ಎರಡನೇ ನಾರ್ಕೊ ಪರೀಕ್ಷೆಯು ಯಾವುದೇ ಔಷಧವನ್ನು ನೀಡದೆ ಇರುತ್ತದೆ. ಅವರು ಸಂಪೂರ್ಣ ಜಾಗೃತರಾಗಿಯೇ ಇರುತ್ತಾರೆ ಮತ್ತು ಅವರ ಉತ್ತರಗಳನ್ನು ವಿಶ್ಲೇಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
* ಶ್ರದ್ಧಾಳನ್ನು ಕೊಂದ ನಂತರ ಅಫ್ತಾಬ್ ಅನ್ನು ಭೇಟಿಯಾದ ಮಹಿಳೆಯನ್ನು ದೆಹಲಿ ಪೊಲೀಸರು ಸಂಪರ್ಕಿಸಿದ್ದಾರೆ.
* ಅಕ್ಟೋಬರ್ 12ರಂದು ವೃತ್ತಿಯಲ್ಲಿ ಮನಶ್ಶಾಸ್ತ್ರಜ್ಞ ಮಹಿಳೆಗೆ ಆಫ್ತಾಬ್ ಉಡುಗೊರೆಯಾಗಿ ನೀಡಿದ್ದ ಶ್ರದ್ಧಾಳ ಉಂಗುರವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಪೊಲೀಸರು ಕೊಲೆಗೆ ಸಂಬಂಧಿಸಿದ ಆಯುಧ ವಶಕ್ಕೆ ಪಡೆದರು
ಶ್ರದ್ಧಾ ವಾಕರ್ ಅನ್ನು ಕೊಂದ ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಲು ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ಬಳಸಿದ ಕೊಲೆಯ ಆಯುಧವನ್ನು ದೆಹಲಿ ಪೊಲೀಸರು ಕಳೆದ ನವೆಂಬರ್ 28ರ ಸೋಮವಾರ ವಶಪಡಿಸಿಕೊಂಡಿದ್ದರು. ಈ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ದೆಹಲಿಯ ತಿಹಾರ್ ಜೈಲಿನ ಬ್ಯಾರಕ್ ಸಂಖ್ಯೆ 4ರಲ್ಲಿ ಇರಿಸಲಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆಯಿತು. ಅಫ್ತಾಬ್ ತನ್ನ ಲಿವ್-ಇನ್ ಪಾಲುದಾರೆ ಶ್ರದ್ಧಾಳನ್ನು ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದಕ್ಷಿಣ ದೆಹಲಿಯ ತನ್ನ ಮೆಹ್ರೌಲಿ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿದ್ದನು.

ವಶಕ್ಕೆ ಪಡೆದ ಆಯುಧ ಎಫ್‌ಎಸ್‌ಎಲ್ ಕೇಂದ್ರಕ್ಕೆ ರವಾನೆ
ಅಫ್ತಾಬ್‌ನನ್ನು ಬಂಧಿಸಿದ ನಂತರ, ದೆಹಲಿ ಪೊಲೀಸರು ಆತನ ನಿವಾಸದಲ್ಲಿ ಹುಡುಕಾಟ ನಡೆಸಿದರು. ಈ ವೇಳೆ ಐದು ಚಾಕುಗಳು ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವುಗಳನ್ನು ಅಪರಾಧದಲ್ಲಿ ಬಳಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ಆರೋಪಿಗೆ ಸುಳ್ಳು ಪತ್ತೆ ಪರೀಕ್ಷೆ
ಈ ಹಿಂದಿನ ದಿನ ದೆಹಲಿಯ ರೋಹಿಣಿಯಲ್ಲಿ ಎಫ್‌ಎಸ್‌ಎಲ್ ಕೇಂದ್ರದಲ್ಲಿ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಲಾಗಿತ್ತು. ಪೊಲೀಸ್ ಅಧಿಕಾರಿಗಳ ಪ್ರಕಾರ, ಅಫ್ತಾಬ್ ಎಫ್‌ಎಸ್‌ಎಲ್ ಪರೀಕ್ಷೆಯು ಬೆಳಿಗ್ಗೆ 9.50 ಕ್ಕೆ ಮತ್ತು ಸೆಷನ್‌ಗಳು ಸುಮಾರು 11 ಗಂಟೆಗೆ ಪ್ರಾರಂಭವಾಯಿತು. ಕಳೆದ ಶುಕ್ರವಾರ ಆರೋಪಿ ಅಫ್ತಾಬ್ ಅನ್ನು ಅದಾಗಲೇ ಮೂರು ಅವಧಿಯಲ್ಲಿ ಪರೀಕ್ಷೆಗೆ ಒಳಗಾಗಿದ್ದನು, ಇದನ್ನು ಸುಳ್ಳು ಪತ್ತೆ ಪರೀಕ್ಷೆ ಎಂದೂ ಕರೆಯುತ್ತಾರೆ.
ತಿಹಾರ್‌ನಲ್ಲಿ, ಅಫ್ತಾಬ್‌ನನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದ್ದು, 24 ಗಂಟೆಗಳ ಸಿಸಿಟಿವಿ ಮೇಲ್ವಿಚಾರಣೆಯಲ್ಲಿ ಇಡಲಾಗಿದೆ. ಇನ್ನೊಂದು ದಿಕ್ಕಿನಲ್ಲಿ ಆರೋಪಿ ಅಫ್ತಾಬ್ ಹತ್ಯೆ ಮಾಡಿ ತುಂಡು ತುಂಡಾಗಿ ಕತ್ತರಿಸಿರುವ ಶ್ರದ್ಧಾ ವಾಕರ್ ಅವರ ತಲೆಬುರುಡೆ ಮತ್ತು ದೇಹದ ಇತರ ಕೆಲವು ಭಾಗಗಳನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ ಎಂದು ಗೊತ್ತಾಗಿದೆ.