• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ ಮೋದಿ ಅಲೆ ಇದ್ದಂತಿಲ್ಲ, ರಾಹುಲ್ ಪರ ಅಲೆ ಇಲ್ಲವೇ ಇಲ್ಲ!

|

ನವದೆಹಲಿ, ಅಕ್ಟೋಬರ್ 04 : ಅಪನಗದೀಕರಣ, ಜಿಎಸ್ಟಿ ಹೇರಿಕೆ, ರುಪಾಯಿ ಅಪಮೌಲ್ಯ, ತೈಲ ಬೆಲೆ ಯದ್ವಾತದ್ವಾ ಏರಿಕೆ, ಮಹಾ ಹಣವಂತರು ಹಣಮಂತನಂತೆ ಸೀಮೋಲ್ಲಂಘನ ಮಾಡಿದ್ದು... ಉರುಳು ಸುತ್ತಿಕೊಂಡಿರುವ ಈ ಸಂಗತಿಗಳಿಂದಾಗಿ ದೇಶದಾದ್ಯಂತ ನರೇಂದ್ರ ಮೋದಿ ವಿರೋಧಿ ಅಲೆ ಇದೆಯೆ?

ಎಬಿಪಿ ನ್ಯೂಸ್ ಸಮೀಕ್ಷೆ : ಉಪ್ರದಲ್ಲಿ ಮಹಾಘಟಬಂಧನ್ ಆದರೆ ಎನ್ಡಿಎಗೆ ಸಂಕಷ್ಟ

ಎಬಿಪಿ ನ್ಯೂಸ್ ಮತ್ತು ಸಿವೋಟರ್ ಜಂಟಿಯಾಗಿ ನಡೆಸಿರುವ ಚುನಾವಣೆಪೂರ್ವ ಸಮೀಕ್ಷೆ ಗಮನಿಸಿದರೆ, ಮೋದಿ ಅಲೆ ಇದೆಯೋ ಇಲ್ಲವೋ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಆದರೆ, ಯಾವುದೇ ರಾಜ್ಯದಲ್ಲಿ ನಡೆಸಲಾಗಿರುವ ಸಮೀಕ್ಷೆಯನ್ನು ನೋಡಿದರೆ ರಾಹುಲ್ ಗಾಂಧಿ ಅವರ ಪರವಾದ ಅಲೆಯಂತೂ ಇಲ್ಲವೇ ಇಲ್ಲ.

ಎಬಿಪಿ ನ್ಯೂಸ್ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮತ್ತೆ ಕಮಲ ಅರಳಲಿದೆ

ಒಂದು ವೇಳೆ ಈ ಕ್ಷಣ ಲೋಕಸಭೆ ಚುನಾವಣೆ ನಡೆದರೆ ಫಲಿತಾಂಶ ಯಾವ ಮೈತ್ರಿಕೂಟದ ಪರವಾಗಿರಲಿದೆ, ಯಾವ ರಾಜ್ಯದಲ್ಲಿ ಯಾರು ಹೆಚ್ಚು ಸೀಟು ಗೆಲ್ಲಲಿದ್ದಾರೆ, ಎನ್ಡಿಎ ಕೈಮೇಲಾಗುವುದೋ, ಯುಪಿಎ ಜಯಭೇರಿ ಬಾರಿಸುವುದೋ, ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ, ಯಾರು ಪ್ರಧಾನಿಯಾಗಲಿದ್ದಾರೆ ಎಂಬ ಚಿತ್ರಣ ದೊರೆಯುತ್ತಿದೆ.

ಇದರ ಪ್ರಕಾರ, ಈಕ್ಷಣ ಲೋಕಸಭೆ ಚುನಾವಣೆ ನಡೆದರೆ, ರಾಹುಲ್ ಗಾಂಧಿ ಅವರ ಯುಪಿಎಗೆ ಭಾರೀ ಮುಖಭಂಗವಾಗುವುದು ಶತಃಸಿದ್ಧ. ಹಾಗೆಯೆ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಮತ್ತು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದನ್ನೂ ಯಾರೂ ತಪ್ಪಿಸಲಾರರು.

ಎಬಿಪಿ ನ್ಯೂಸ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿ ಪರ ಅಲೆ

543 ಲೋಕಸಭೆ ಕ್ಷೇತ್ರಗಳಲ್ಲಿ ಬಹುಮತಕ್ಕೆ ಬೇಕಿರುವುದು 272 ಸೀಟುಗಳು ಮಾತ್ರ. 2014ರಲ್ಲಿ ನಡೆಸಲಾಗಿದ್ದ ಮಹಾಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಧೂಳಿಪಟವಾಗಿತ್ತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಏಕಾಂಗಿಯಾಗಿ 272 ಸೀಟುಗಳನ್ನು ದಾಟಿತ್ತು ಮತ್ತು ಬಿಜೆಪಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿತ್ತು.

ಈಗಿನ ಪರಿಸ್ಥಿತಿ ಗಮನಿಸಿದರೆ, ಪರಿಸ್ಥಿತಿ 2014ರಲ್ಲಿ ಇದ್ದಂತಿಲ್ಲ. ನರೇಂದ್ರ ಮೋದಿಯವರ ಅಲೆ ಅಷ್ಟಾಗಿ ಇದ್ದಂತಿಲ್ಲ. ಆದರೆ, ಜನರು ನರೇಂದ್ರ ಮೋದಿ ಮೇಲಿನ ನಂಬಿಕೆ ಇನ್ನೂ ಕಳೆದುಕೊಂಡ ಹಾಗೆಯೂ ಕಾಣಿಸುತ್ತಿಲ್ಲ. ಹೀಗಾಗಿ, ಮತ್ತೊಂದು ಬಾರಿ ಮೋದಿಯವರಿಗೆ ದೇಶದ ಆಡಳಿತ ಚುಕ್ಕಾಣಿ ನೀಡಲು ಜನರು ಸಿದ್ಧರಾಗಿರುವುದು ಸ್ಪಷ್ಟವಾಗಿದೆ.

ಎಬಿಪಿ ನ್ಯೂಸ್ ಸಮೀಕ್ಷೆ : ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ್

ಅತೀಹೆಚ್ಚು ಸ್ಥಾನವಿರುವ ಉತ್ತರ ಪ್ರದೇಶದಲ್ಲಿ ಮಾತ್ರ ಬಿಜೆಪಿ ನೇತೃತ್ವದ ಎನ್ಡಿಕೆ ಹಿನ್ನಡೆ ಕಾಣಲಿದೆ. ಒಂದು ವೇಳೆ ಸಮಾಜವಾದಿ ಪಕ್ಷ ಬಹುಜನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಗ್ಗಟ್ಟಾಗಿ ಮಹಾಮೈತ್ರಿಕೂಟ ರಚಿಸಿದರೆ ಭಾರತೀಯ ಜನತಾ ಪಕ್ಷಕ್ಕೆ ಸಂಕಷ್ಟ ಎದುರಾಗಲಿದೆ. ಅಂದುಕೊಂಡಂತೆ ಸೀಟುಗಳು ಎನ್ಡಿಎಗೆ ಲಭಿಸಲಿಕ್ಕಿಲ್ಲ.

ಶಿವಸೇನೆ ದೋಸ್ತಿ ಹೆಚ್ಚು ಲಾಭ, ಸ್ವತಂತ್ರ ಸ್ಪರ್ಧೆಯೂ ಬಿಜೆಪಿಗೆ ಲಾಭ

ಒಟ್ಟಾರೆಯಾಗಿ ಶೇ.2ರಷ್ಟು ಮತಗಳನ್ನು ಎನ್ಡಿಎ ಕಳೆದುಕೊಳ್ಳಲಿದ್ದು, ಕೇವಲ ಶೇ.38ರಷ್ಟು ಮಾತ್ರ ಮತಗಳನ್ನು ಪಡೆಯಲಿದೆ. 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಎನ್ಡಿಎ ಶೇ.40ರಷ್ಟು ಮತಗಳಿಕೆ ಮಾಡಿತ್ತು. ಅಂತಿಮವಾಗಿ ಎನ್ಡಿಎ 276, ಯುಪಿಎ 112 ಮತ್ತು ಇತರೆ ಪಕ್ಷಗಳು 155. ಅಲ್ಲಿಗೆ, ರಾಹುಲ್ ಗಾಂಧಿಯವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಹೆಚ್ಚೂಕಡಿಮೆ ಖಚಿತವಾಗಲಿದೆ.

English summary
ABP News - CVoter poll survey : No alternative to prime minister Narendra Modi. People still have no faith in Rahul Gandhi. NDA will surely get majority if the elections are held now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X