ರಾಜಸ್ತಾನದಲ್ಲಿ ಕಾಂಗ್ರೆಸ್ ಬಿಜೆಪಿ ನೇರ ಹಣಾಹಣಿ, ಯಾವ ಪಕ್ಷಕ್ಕೆ ಅಧಿಕಾರ: ಎಬಿಪಿ ಸಿವೋಟರ್ ಸಮೀಕ್ಷೆ ಬಹಿರಂಗ
ಜೈಪುರ, ಅಕ್ಟೋಬರ್ 09: ಈ ವರ್ಷದ ನವೆಂಬರ್ ತಿಂಗಳಿನಲ್ಲಿ ರಾಜಸ್ತಾನದ ವಿಧಾನಸಭಾ ಚುನಾವಣೆ ನಡೆಯಲಿದೆ. ಫಲಿತಾಂಶ ಡಿಸೆಂಬರ್‌ನಲ್ಲಿ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಧಿಕಾರಿ ಹಿಡಿಯುವ ಪಕ್ಷ ಯಾವುದು ಎಂದು ಎಬಿಪಿ ಸಿವೋಟರ್ ಸಮೀಕ್ಷೆ ನಡೆಸಿದೆ. ಅದರ ಅಂಕಿ ಅಂಶ ವಿವರಗಳ ಬಿಡುಗಡೆಗೊಂಡಿದೆ.
ಎಬಿಪಿ ಸಿವೋಟರ್ ಸಮೀಕ್ಷೆ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ಬಹುಮತದ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, 200 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 127 ರಿಂದ 137 ಸ್ಥಾನಗಳನ್ನು ಗೆಲ್ಲಲಿದೆ. ಸರ್ಕಾರ ರಚಿಸಲು ಪಕ್ಷವೊಂದಕ್ಕೆ ಬಹುಮತದ ಗುರುತು 101ಆಗಿದೆ.

ಕೇಸರಿ ಪಕ್ಷವು ಸುಮಾರು 46 ಶೇಕಡಾ ಮತಗಳನ್ನು ಪಡೆಯುವ ಸಾಧ್ಯತೆಯಿದೆ, ಇದು 2018 ರ ಚುನಾವಣೆಯಲ್ಲಿ ಪಡೆದ ಶೇಕಡಾ 38 ಕ್ಕಿಂತ ಹೆಚ್ಚಾಗಿದೆ. ಮತ್ತೊಂದೆಡೆ, ಕಾಂಗ್ರೆಸ್ 59 ರಿಂದ 69 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದ್ದು, ಶೇಕಡಾ 42 ರಷ್ಟು ಮತಗಳನ್ನು ಪಡೆಯುತ್ತದೆ ಎಂದು ಸಮೀಕ್ಷೆ ವಿವರಗಳನ್ನು ಬಹಿರಂಗ ಮಾಡಿದೆ.
ಪ್ರದೇಶವಾರು ರಾಜಸ್ಥಾನದ ಮಾರ್ವಾರ್ ಪ್ರದೇಶದಲ್ಲಿ ಒಟ್ಟು 61 ಸ್ಥಾನಗಳಲ್ಲಿ ಕಾಂಗ್ರೆಸ್- 15-19, ಬಿಜೆಪಿ- 39-43 ಮತ್ತು ಇತರೆ- 0-5 ಸ್ಥಾನಗಳು ಬರುತ್ತವೆ. ಇದೇ ಶೇಕಡವಾರು ನೋಡುವುದಾದರೆ ಕಾಂಗ್ರೆಸ್‌ಗೆ 42%, ಬಿಜೆಪಿಗೆ 47%, ಇತರೆ 11% ರಷ್ಟು ಮತಗಳು ಬರುತ್ತದೆ ಎಂದು ತಿಳಿಸಿದೆ. ಧುಂಧರ್ ಪ್ರದೇಶದಲ್ಲಿ ಒಟ್ಟು 58 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ 25-29, ಬಿಜೆಪಿಗೆ 29-33, ಇತರೆ- 0-2 ಸ್ಥಾನಗಳು ಬರುತ್ತದೆ. ಇದೇ ಶೇಕಾಡವಾರು ಕಾಂಗ್ರೆಸ್ - 46%
ಬಿಜೆಪಿ- 46%, ಇತರೆ- 8% ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಮೇವಾರ್ ಪ್ರದೇಶದಲ್ಲಿ ಒಟ್ಟು 43 ಸ್ಥಾನಗಳಲ್ಲಿ ಕಾಂಗ್ರೆಸ್- 3-7, ಬಿಜೆಪಿ- 35-39, ಇತರೆ- 0-2 ಸ್ಥಾನಗಳನ್ನು ಗೆಲ್ಲಲಿದೆ. ಇದೇ ಶೇಕಡವಾರು ಕಾಂಗ್ರೆಸ್ - 37%, ಬಿಜೆಪಿ- 51%, ಇತರೆ- 12% ರಷ್ಟು ಮತಗಳನ್ನು ಪಡೆಯಲಿದೆ ಎಂದು ತಿಳಿಸಿದೆ. ರಾಜಸ್ಥಾನದ ಶೇಖಾವತಿ ಪ್ರದೇಶದಲ್ಲಿ ಒಟ್ಟು 21 ಸ್ಥಾನಗಳಲ್ಲಿ ಕಾಂಗ್ರೆಸ್- 10-14, ಬಿಜೆಪಿ- 7-11, ಇತರೆ- 0-1 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇದೇ ಶೇಕಡವಾರು ಕಾಂಗ್ರೆಸ್ - 45%, ಬಿಜೆಪಿ- 43%, ಇತರೆ- 12% ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.
ರಾಜಸ್ಥಾನದ ಹಡೋತಿ ಪ್ರದೇಶದಲ್ಲಿ ಒಟ್ಟು 17 ಸ್ಥಾನಗಳಲ್ಲಿ ಕಾಂಗ್ರೆಸ್-1-5, ಬಿಜೆಪಿ-12-16, ಇತರೆ -0-1 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ, ಇದು ಶೇಕಡವಾರು ಕಾಂಗ್ರೆಸ್ - 44%, ಬಿಜೆಪಿ- 53%, ಇತರೆ- 3% ರಷ್ಟು ಮತಗಳನ್ನು ಪಡೆಯಲಿದೆ ಎಂದು ತಿಳಿಸಿದೆ. ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದೆ. ಕರ್ನಾಟಕದಂತೆಯೇ ರಾಜಸ್ಥಾನದಲ್ಲಿಯೂ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಘೋಷಣೆಗಳನ್ನು ಮಾಡಿದೆ. ಇದು ರಾಜಸ್ಥಾನದಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಕಾಂಗ್ರೆಸ್ ಎದುರಾಳಿಯಾಗಿರುವ ಬಿಜೆಪಿ ಹೈಕಮಾಂಡ್ ಹೊಸ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರತವಾಗಿದೆ. ಬಿಜೆಪಿ ರಾಜ್ಯ ಘಟಕದಲ್ಲಿರುವ ಬಂಡಾಯವನ್ನು ಶಮನಗೊಳಿಸುವುದು ಹೈಕಮಾಂಡ್ ಮುಂದಿರುವ ಸವಾಲಾಗಿದೆ. ಕಳೆದ ವಾರ ರಾಜಸ್ಥಾನ ಜೈಪುರದಲ್ಲಿ ಬೀಡುಬಿಟ್ಟಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸ್ಥಳೀಯ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications