Madhya Pradesh Election Oppion Poll: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಗೆದ್ದು ಬೀಗುವುದು ಯಾರು? ಬಿಜೆಪಿ ಅಥವಾ ಕಾಂಗ್ರೆಸ್?
ಭೋಪಾಲ್: ದೇಶದ ಬಹುನಿರೀಕ್ಷಿತ 5 ರಾಜ್ಯಗಳ ಚುನಾವಣೆಗೆ ಇಂದು ಮುಹೂರ್ತ ಫಿಕ್ಸ್ ಆಗಿದೆ. ಅದ್ರಲ್ಲೂ ದೇಶವೇ ಕಾಯುತ್ತಿರುವ ಮಧ್ಯಪ್ರದೇಶ ರಾಜ್ಯದ ಚುನಾವಣೆ ನವೆಂಬರ್ 17ಕ್ಕೆ ಗ್ಯಾರಂಟಿ ಆಗಿದೆ. ಇದೇ ಸಂದರ್ಭದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯು ರಿಲೀಸ್ ಆಗಿದ್ದು, ಬಿಜೆಪಿ & ಕಾಂಗ್ರೆಸ್ ನಡುವೆ ಯಾರಿಗೆ ಗೆಲುವು ಸಾಧ್ಯ? ಎಂಬ ಕುರಿತು ಸುಳಿವು ಸಿಕ್ಕಿದೆ.
ಹೌದು, 2023ರ ಅಂತ್ಯಕ್ಕೆ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ವೇಳೆ 'ಎಬಿಪಿ ಸಿ-ವೋಟರ್' ಸಮೀಕ್ಷೆ ವರದಿ ರಿಲೀಸ್ ಆಗಿದ್ದು, ಭಾರಿ ಸಂಚಲನ ಸೃಷ್ಟಿಯಾಗಿದೆ. ಹಾಗಾದರೆ 2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Madhya Pradesh Election) ಗೆಲ್ಲೋದು ಯಾರು? ಗೆಲುವಿಗಾಗಿ ಬಿಜೆಪಿ ನಾಯಕರು ಈಗ ಹೂಡಿರುವ ರಣತಂತ್ರ ವರ್ಕೌಟ್ ಆಗುತ್ತಾ? ಕಾಂಗ್ರೆಸ್ ಅಚ್ಚರಿಯ ಫಲಿತಾಂಶದ ಮೂಲಕ ಈ ಬಾರಿ ಮಧ್ಯಪ್ರದೇಶದಲ್ಲಿ ಗೆಲುವಿನ ಕೇಕೆ ಹಾಕುತ್ತಾ? ಯಾರಿಗೆ ಎಷ್ಟು ಮತ ಪ್ರಮಾಣ ಬರಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಬಿಜೆಪಿ ಗೆಲ್ಲುತ್ತಾ? ಕಾಂಗ್ರೆಸ್ ಗೆಲ್ಲುತ್ತಾ?
ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಕಾಂಗ್ರೆಸ್‌ಗೆ ಕರ್ನಾಟಕದ ಚುನಾವಣೆ ರಿಸಲ್ಟ್ ಬೂಸ್ಟರ್ ಡೋಸ್ ಕೊಟ್ಟಿದೆ. ಈ ಹೊತ್ತಲ್ಲಿ ಮಧ್ಯಪ್ರದೇಶ ವಿಧಾನಸಭೆ ಎಲೆಕ್ಷನ್ ಕೂಡ ಹತ್ತಿರವೇ ಇದ್ದು, ಭಾರಿ ಕುತೂಹಲ ಕೆರಳಿಸಿದೆ. 'ಎಬಿಪಿ ಸಿ-ವೋಟರ್' ಸಮೀಕ್ಷೆ ಪ್ರಕಾರ ಮಧ್ಯಪ್ರದೇಶ ಎಲೆಕ್ಷನ್ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದೊಡ್ಡ ಫೈಟ್‌ಗೆ ಸಾಕ್ಷಿಯಾಗಲಿದೆ ಅಂತೆ. ಹಾಗೇ ಇಲ್ಲಿ ಗೆಲುವು ಸಾಧಿಸಲು ಇಬ್ಬರೂ ತೀವ್ರ ಪೈಪೋಟಿ ನಡೆಸುವುದು ಪಕ್ಕಾ ಆಗಿದೆ. ಹಾಗಾದರೆ ಬಿಜೆಪಿ ಎಷ್ಟು ಸ್ಥಾನ ಪಡೆಯಬಹುದು? ಕಾಂಗ್ರೆಸ್‌ಗೆ ಸಿಗಬಹುದಾದ ಸ್ಥಾನಗಳು ಎಷ್ಟು?
ಇಬ್ಬರಿಗೂ ಬಹುಮತ ಬರುವುದು ಡೌಟ್!
ಅಂದಹಾಗೆ ಒಟ್ಟು 230 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶ ರಾಜ್ಯಕ್ಕೆ ನವೆಂಬರ್ 17ಕ್ಕೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ ಆಗಲಿದೆ. 'ಎಬಿಪಿ ಸಿ-ವೋಟರ್' ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 113 ರಿಂದ 125 ಸ್ಥಾನಗಳಲ್ಲಿ ಗೆಲ್ಲಬಹುದು. ಹಾಗೇ ಬಿಜೆಪಿ 104 ರಿಂದ 116 ಸ್ಥಾನದಲ್ಲಿ ಗೆಲುವು ಸಾಧಿಸಬಹುದು ಎನ್ನಲಾಗಿದೆ. ಇನ್ನು ಮತಪ್ರಮಾಣದ ಹಂಚಿಕೆ ಕೂಡ ಸಮೀಕ್ಷೆಯಲ್ಲಿ ಬಯಲಾಗಿದ್ದು, ಕುತೂಹಲ ಡಬಲ್ ಆಗಿದೆ.

'ಎಬಿಪಿ ಸಿ-ವೋಟರ್' ಸಮೀಕ್ಷೆಯ ಪ್ರಕಾರ 2023ರ ಮಧ್ಯಪ್ರದೇಶ ವಿಧಾನಸಭೆ ಎಲೆಕ್ಷನ್ ವೇಳೆ, ಕಾಂಗ್ರೆಸ್ 44.6 ಪ್ರಮಾಣದ ಮತ ಪಡೆಯಬಹುದು ಎನ್ನಲಾಗಿದೆ. ಹಾಗೇ ಬಿಜೆಪಿ 44.7 ಪ್ರಮಾಣದ ಮತ ಗಳಿಸಬಹುದು ಅಂತಿದೆ ಸಮೀಕ್ಷೆ. ಈ ಲೆಕ್ಕಾಚಾರದ ಪ್ರಕಾರವೇ ಹೇಳುವುದಾದರೆ, ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 3.7 & 3.7 ಹೆಚ್ಚಿನ ಪ್ರಮಾಣದಲ್ಲಿ ಮತಗಳಿಕೆ ಮಾಡಲಿವೆ ಎನ್ನಲಾಗಿದೆ. ಆದರೆ ಈ ಬಾರಿ ಬಿಎಸ್‌ಪಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ.












Click it and Unblock the Notifications