ಎಬಿಪಿ ಸಮೀಕ್ಷೆ: ಪೂರ್ವ ಭಾರತದಲ್ಲಿ ಎನ್ ಡಿಎಗೆ ಭರ್ಜರಿ ಗೆಲುವು
ಬೆಂಗಳೂರು, ಮೇ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 4 ವರ್ಷವಾದ ಹಿನ್ನಲೆಯಲ್ಲಿ ಎಬಿಪಿ ಸಿಎಸ್ ಡಿಎಸ್ ಸಂಸ್ಥೆ ನಡೆಸಿರುವ ಸಮೀಕ್ಷೆ ವರದಿ ಇಲ್ಲಿದೆ
ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018: ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ಪೂರ್ವ ಭಾರತದಲ್ಲಿ ಎನ್ ಡಿಎ ಜಯಭೇರಿ ಬಾರಿಸಲಿದ್ದು, ಕಳೆದ ಚುನಾವಣೆಗಿಂತ ಉತ್ತಮ ಫಲಿತಾಂಶ ತರಲಿದೆ.

543 ಲೋಕಸಭಾ ಸ್ಥಾನಗಳ ಪೈಕಿ ಪೂರ್ವ ಭಾರತದಲ್ಲಿ 142 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ ಶೇ 43ರಷ್ಟು ಮತಗಳು ಸಿಕ್ಕರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ (ಯುಪಿಎ)ಗೆ ಶೇ 30ರಷ್ಟು ಮತ ಸಿಗಲಿದೆ. ಮಿಕ್ಕ ಶೇ30ರಷ್ಟು ಪಾಲು ಇತರೆ ಪಕ್ಷಗಳ ಪಾಲಾಗಲಿವೆ.
ಪೂರ್ವ ಭಾರತ : 142
* ಎನ್ ಡಿಎ : 86-94
* ಯುಪಿಎ : 22-26
* ಇತರೆ : 26-30
ಸೀಟುಗಳ ಲೆಕ್ಕದಲ್ಲಿ 142 ಸ್ಥಾನಗಳ ಪೈಕಿ ಎನ್ ಡಿಎ ಗೆ 86 ರಿಂದ 94, ಯುಪಿ ಎಗೆ 22 ರಿಂದ 26, ಇತರೆ 26 ರಿಂದ 30 ಸ್ಥಾನಗಳು ಸಿಗುವ ನಿರೀಕ್ಷೆಯಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಗೆ 58, ಯುಪಿಎಗೆ 21 ಅಹಗೂ ಇತರೆ 63 ಸ್ಥಾನಗಳು ಸಿಕ್ಕಿತ್ತು.












Click it and Unblock the Notifications