ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯ ಸೇತುವಿನಲ್ಲಿ ಕೊರೊನಾ ಲಸಿಕೆ ಸ್ಥಿತಿ ಬಗ್ಗೆ ವೈಯಕ್ತಿಕವಾಗಿ ಅಪ್‌ಡೇಟ್ ಮಾಡಿ

|
Google Oneindia Kannada News

ನವದೆಹಲಿ, ಜೂನ್ 02: ಪ್ರಯಾಣವನ್ನು ಸುಲಭ ಮಾಡಿಕೊಳ್ಳಲು ನೀವು ಕೊರೊನಾ ಲಸಿಕೆ ಪಡೆದಿದ್ದೀರೋ ಅಥವಾ ಇಲ್ಲವೋ ಎಂಬುದನ್ನು ಆರೋಗ್ಯ ಸೇತು ಮೊಬೈಲ್ ಆ್ಯಪ್​ನಲ್ಲಿ ದಾಖಲಿಸಬಹುದಾಗಿದೆ.

ಆರೋಗ್ಯ ಸೇತು ಅಪ್ಲಿಕೇಷನ್‌ನಲ್ಲಿ ವೈಯಕ್ತಿಕವಾಗಿ ಲಸಿಕೆ ಪಡೆದಿದ್ದೀರೋ ಇಲ್ಲವೋ ಎಂಬುದರ ಬಗ್ಗೆ ಸ್ವಯಂ ಮೌಲ್ಯಮಾಪನ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ.

ಕೋವಿಡ್ ಲಸಿಕೆ ಪಡೆಯಲು ಕೋವಿನ್, ಆರೋಗ್ಯ ಸೇತು ಮೂಲಕ ನೋಂದಣಿಕೋವಿಡ್ ಲಸಿಕೆ ಪಡೆಯಲು ಕೋವಿನ್, ಆರೋಗ್ಯ ಸೇತು ಮೂಲಕ ನೋಂದಣಿ

ಈ ವ್ಯವಸ್ಥೆಯಿಂದ ಪ್ರಯಾಣದ ಕಾರಣಕ್ಕೆ ಬಹಳ ಅನುಕೂಲವಾಗಲಿದೆ. ಆ ವ್ಯಕ್ತಿ ಲಸಿಕೆ ಪಡೆದಿದ್ದಾರೆಯೇ ಅಥವಾ ಇಲ್ಲವೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ. ಬಳಕೆದಾರರು ಸ್ವ ಮೌಲ್ಯಮಾಪನ ಸಂದರ್ಭದಲ್ಲಿ ಸ್ಥಿತಿ ಬಗ್ಗೆ ಏನು ಹೇಳಿರುತ್ತಾರೋ ಆ ಘೋಷಣೆಗೆ ಇದು ಆಧಾರ ಪಟ್ಟಿರುತ್ತದೆ.

ಕೋವಿನ್ ನಿಂದ ಒಟಿಪಿ ಮೂಲಕ ಖಾತ್ರಿ ಪಡಿಸಿಕೊಂಡ ಮೇಲೆ ಅನ್​ವೆರಿಫೈಡ್ ಎಂದು ಇದ್ದದ್ದು ವೆರಿಫೈಡ್ ಆಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಸ್ವ ಮೌಲ್ಯಮಾಪನ

ಸ್ವ ಮೌಲ್ಯಮಾಪನ

ಆರೋಗ್ಯ ಸೇತುವಿನಿಂದ ಅಪ್​ಡೇಟ್ ವ್ಯಾಕ್ಸಿನೇಷನ್ ಸ್ಟೇಟಸ್ ಎಂಬ ಫೀಚರ್ ಅನ್ನು ಆರೋಗ್ಯ ಸೇತು ಆ್ಯಪ್​ನಲ್ಲಿ ಪರಿಚಯಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಚಿವಾಲಯವು ಮಂಗಳವಾರ ಈ ಬಗ್ಗೆ ತಿಳಿಸಿದ್ದು, ಒಂದು ವೇಳೆ ಆ್ಯಪ್​ನಲ್ಲಿ ಪರಿಷ್ಕೃತ ಸ್ವ ಮೌಲ್ಯಮಾಪನ ಅಪ್​ಡೇಟೆಡ್ ವರ್ಷನ್ ತೆಗೆದುಕೊಳ್ಳದಿದ್ದಲ್ಲಿ ಆರೋಗ್ಯ ಸೇತು ಬಳಸುವ ಎಲ್ಲ ಬಳಕೆದಾರರಿಗೂ 'ಅಪ್‌ಡೇಟ್‌ ದಿ ವ್ಯಾಕ್ಸಿನ್ ಸ್ಟೇಟಸ್' ಎಂಬ ಆಯ್ಕೆ ನೀಡಲಾಗುತ್ತದೆ.

 ಲಸಿಕೆ ಪಡೆದಿದ್ದೀರಿ ಹೋಂ ಸ್ಕ್ರೀನ್‌ನಲ್ಲಿ ತೋರಿಸುತ್ತದೆ

ಲಸಿಕೆ ಪಡೆದಿದ್ದೀರಿ ಹೋಂ ಸ್ಕ್ರೀನ್‌ನಲ್ಲಿ ತೋರಿಸುತ್ತದೆ

ಲಸಿಕೆ ಪಡೆದುಕೊಂಡ 14 ದಿನಗಳ ನಂತರ ಆರೋಗ್ಯ ಸೇತು ಹೋಂ​ ಸ್ಕ್ರೀನ್​ನಲ್ಲಿ ನೀವು ಲಸಿಕೆ ಪಡೆದಿದ್ದೀರಿ ಎಂದು ತೋರಿಸುತ್ತದೆ. ಈ ಮೂಲಕವಾಗಿ ಲಸಿಕೆ ಸ್ಥಿತಿ ತಿಳಿಯುವುದು ಸುಲಭವಾಗಿ, ಪ್ರಯಾಣವಾಗಿ ಮತ್ತು ವಿವಿಧ ಸ್ಥಳಗಳಿಗೆ ತೆರಳುವುದಕ್ಕೆ ಸಲೀಸಾಗುತ್ತದೆ ಎಂದು ತಿಳೀಸಲಾಗಿದೆ. ಅಂದಹಾಗೆ ಭಾರತದಲ್ಲಿ 19 ಕೋಟಿಗೂ ಹೆಚ್ಚು ಮಂದಿ ಆರೋಗ್ಯ ಸೇತು ಬಳಸುತ್ತಿದ್ದಾರೆ.

 ಲಸಿಕೆ ಬಗ್ಗೆ ಮಾಹಿತಿ ಪಡೆಯುವುದು ಹೇಗೆ?

ಲಸಿಕೆ ಬಗ್ಗೆ ಮಾಹಿತಿ ಪಡೆಯುವುದು ಹೇಗೆ?

ಯಾರಿಗೆ ಎರಡೂ ಡೋಸ್ ಲಸಿಕೆ ಆಗಿದೆಯೋ ಅಂಥವರಿಗೆ ನೀಲಿ ಬಣ್ಣದ ಶೀಲ್ಡ್ ಹಾಗೂ ಜತೆಗೆ ಎರಡು ಟಿಕ್ ಮಾರ್ಕ್ ಆ್ಯಪ್​ನಲ್ಲಿ ಕಾಣಿಸುತ್ತದೆ.

ಯಾರು ಒಂಡು ಡೋಸ್ ಲಸಿಕೆ ಪಡೆದಿರುತ್ತಾರೋ ಅಂಥವರಿಗೆ ಒಂದು ಮಾಹಿತಿ ಅವರ ಹೋಂ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಇದರ ಜತೆಗೆ ಆರೋಗ್ಯ ಸೇತು ಲೋಗೋ ಮತ್ತು ನೀಲಿ ಬಣ್ಣದ ಟಿಕ್ ಬರುತ್ತದೆ.

ಹೀಗೆ ಕಾಣಿಸುವುದಕ್ಕೆ ಎರಡನೇ ಡೋಸ್ ಪಡೆದ 14 ದಿನ ಪೂರ್ತಿ ಆಗಬೇಕಾಗುತ್ತದೆ. ಕೋವಿನ್ ಪೋರ್ಟಲ್​ನಿಂದ ಲಸಿಕೆ ಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದ ನಂತರವೇ ಎರಡು ನೀಲಿ ಬಣ್ಣದ ಟಿಕ್ ಕಾಣಿಸಿಕೊಳ್ಳುತ್ತದೆ.

 ಮೊಬೈಲ್‌ ಮೂಲಕ ಅಪ್‌ಡೇಟ್

ಮೊಬೈಲ್‌ ಮೂಲಕ ಅಪ್‌ಡೇಟ್

ಕೋವಿನ್ ನೋಂದಣಿಗೆ ಬಳಸಿರುವ ಮೊಬೈಲ್ ನಂಬರ್​ ಸಹಾಯದಿಂದ ಲಸಿಕೆ ಸ್ಥಿತಿಯ ಬಗ್ಗೆ ಅಪ್​ಡೇಟ್ ಮಾಡಬಹುದು. ಆರೋಗ್ಯ ಸೇತು ಆ್ಯಪ್​ನಲ್ಲಿ ಸ್ವ-ಮೌಲ್ಯಮಾಪನ ತೆಗೆದುಕೊಂಡು, ಯಾವ ಬಳಕೆದಾರರು ಕನಿಷ್ಠ ಒಂದು ಡೋಸ್ ಕೋವಿಡ್- 19 ಲಸಿಕೆ ತೆಗೆದುಕೊಂಡಿರುತ್ತಾರೋ ಅವರಿಗೆ ಪಾರ್ಷಿಯಲಿ ವ್ಯಾಕ್ಸಿನೇಷನ್/ವ್ಯಾಕ್ಸಿನೇಟೆಡ್ (ಅನ್​ವೆರಿಫೈಡ್) ಎಂದು ಆರೋಗ್ಯ ಸೇತು ಆ್ಯಪ್​ನ ಹೋಂ​ ಸ್ಕ್ರೀನ್​ನಲ್ಲಿ ಕಾಣಿಸುತ್ತದೆ.

English summary
The Aarogya Setu app has introduced some exciting features. According to the new updates, individuals can now voluntarily update their vaccination status on Aarogya Setu mobile app through a self-assessment process and the facility will make it easier to check the vaccination status for travel purposes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X