Arvind Kejriwal: ʼಅರವಿಂದ್ ಕೇಜ್ರಿವಾಲ್ ಮತ್ತೆ ಜೈಲು ಸೇರಲಿದ್ದಾರೆʼ
ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಇಂದು (ಫೆಬ್ರವರಿ 3) ದೆಹಲಿ ವಿಧಾನಸಭೆ ಚುನಾವಣೆ 2025ರ ಕೊನೆಯ ಹಂತದ ಚುನಾವಣೆ ಪ್ರಚಾರ ನಡೆಯುತ್ತಿದೆ. ಈ ರೀತಿ ಇರುವಾಗಲೇ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್‌ಗೆ ನಡುಕ ಶುರುವಾಗಿದೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತೆ ಬಂಧನ ಭೀತಿ ಶುರುವಾಗಿದೆ. ಹೌದು ಮದ್ಯ ನೀತಿ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದರು. ಇದೀಗ ಅವರು ಜಾಮೀನಿನ ಮೇಲೆ ಹೊರಗಿದ್ದು. ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ರೀತಿ ಇರುವಾಗಲೇ ಅವರಿಗೆ ಮತ್ತೆ ಜೈಲು ಸೇರುವ ಆತಂಕ ಶುರುವಾಗಿದೆ. ಇದಕ್ಕೆ ಕಾರಣ ಬಿಜೆಪಿಯು ಅರವಿಂದ್ ಕೇಜ್ರಿವಾಲ್‌ಗೆ ಕೊಟ್ಟಿರುವ ಎಚ್ಚರಿಕೆ ಅದೇನು ಎನ್ನುವ ವಿವರ ಇಲ್ಲಿದೆ.

ದೆಹಲಿ ವಿಧಾನಸಭೆ ಚುನಾವಣೆ ರಂಗೇರಿದೆ. ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5ಕ್ಕೆ ನಡೆಯಲಿದೆ. ಇಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಇದರ ಮ್ಯಾಜಿಕ್ ಸಂಖ್ಯೆ 36 ಆಗಿದೆ. ಈ ಬಾರಿ ಎಎಪಿ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಹೇಗಾದರೂ ಮಾಡಿ ಎಎಪಿಯನ್ನು ಕಟ್ಟಿಹಾಕಬೇಕು ಅಂತ ಬಿಜೆಪಿ ಪಣತೊಟ್ಟಿದೆ. ಇದೀಗ ದೆಹಲಿ ಮುಖ್ಯಮಂತ್ರಿ ಇರಬೇಕಾದ ಜಾಗ ತಿಹಾರ್ ಜೈಲು ಎಂದು ಬಿಜೆಪಿ ಹೇಳಿದೆ. ಅಷ್ಟೇ ಅಲ್ಲ ಅವರು ಇಷ್ಟರಲ್ಲೇ ತಿಹಾರ್ ಜೈಲಿಗೆ ಹೋಗಲಿದ್ದಾರೆ ಎನ್ನುವ ಎಚ್ಚರಿಕೆಯನ್ನು ಸಹ ಕೊಡಲಾಗಿದೆ.
ಈ ಚುನಾವಣೆ ಪ್ರಾರಂಭವಾದ ಮೇಲೆ ದೆಹಲಿ - ಹರಿಯಾಣ ರಾಜ್ಯಗಳ ರಾಜಕೀಯ ನಾಯಕರ ನಡುವೆ ವಾಕ್ಸಮರ ಮುಂದುವರಿದಿದೆ. ಅದರಲ್ಲೂ ಯಮುನಾ ನದಿಯ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರು ಕೊಟ್ಟಿದ್ದ ಹೇಳಿಕೆ ಸಾಕಷ್ಟು ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿತ್ತು. ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ಜೈಲು ಸೇರಲಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಎಚ್ಚರಿಸಿದ್ದಾರೆ.
ಕೇಜ್ರಿವಾಲ್ ಭ್ರಷ್ಟಾಚಾರಿ ಹಾಗೂ ಅವರು ಜನಿಸಿದ ಜಾಗಕ್ಕೆ ಅವರು ಕಳಂಕ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂದುವರಿದು ಕೇಜ್ರಿವಾಲ್ ಅವರು ಇರಬೇಕಾದ ಜಾಗ ತಿಹಾರ್ ಜೈಲು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು. ಈ ಪೋಸ್ಟ್ ಇದೀಗ ಸಾಕಷ್ಟು ವೈರಲ್ ಆಗಿದೆ. ಕೇಜ್ರಿವಾಲ್ ಅವರು ದೆಹಲಿ ಜನರಿಗೆ ಮೋಸ ಮಾಡಿದ್ದು, ಅವರು ಫೆಬ್ರವರಿ 5ರ ನಂತರ ತಿಹಾರ್ ಸೇರಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಹರಿಯಾಣದಲ್ಲಿ ಯಮುನಾ ನದಿಗೆ ವಿಷ ಹಾಕಲಾಗುತ್ತಿದೆ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಈಚೆಗೆ ಅರವಿಂದ್ ಕೇಜ್ರಿವಾಲ್ ಅವರು ಕೊಟ್ಟಿದ್ದರು. ಕೇಜ್ರಿವಾಲ್ ಅವರು ಸುಳ್ಳು ಹೇಳುತ್ತಿದ್ದಾರೆ. ಯಾಕೆಂದರೆ ಅವರು ಅಧಿಕಾರದಲ್ಲಿ ಇದ್ದಾಗ ನದಿಯನ್ನು ಸ್ವಚ್ಛವಾಗಿ ಇರಿಸಿಕೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಅವರ ಸುಳ್ಳಿನ ಅಂಗಡಿ ಇಷ್ಟರಲ್ಲೇ ಮುಚ್ಚಲಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications