ಗುಜರಾತ್‌ನಲ್ಲಿ ಪ್ರಧಾನಿಯನ್ನೇ ಕೀಳು ಎಂದ ಆಪ್ ನಾಟಕ ನಡೆಯೋದಿಲ್ಲ; ಸಿಟಿ ರವಿ ಟೀಕೆ
ನವದೆಹಲಿ, ಅಕ್ಟೋಬರ್ 14: ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಗೆ ದಿನಗಳು ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ನಾಯಕರ ನಡುವಿನ ಟೀಕೆ-ಟಿಪ್ಪಣಿಗಳು ಹೆಚ್ಚುತ್ತಿವೆ. ಆಮ್ ಆದ್ಮಿ ಪಕ್ಷ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ನೀಡಿದ ಹೇಳಿಕೆಗೆ ಬಿಜೆಪಿ ಕೆರಳಿ ಕೆಂಡವಾಗಿದೆ. ಈ ಬೆಳವಣಿಗೆ ಮಧ್ಯೆಯೇ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸಮನ್ಸ್ ನೀಡಿದ ನಂತರ ಗೋಪಾಲ್ ಇಟಾಲಿಯಾ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಬೆಳವಣಿಗೆಗಳ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದ್ದು, ಆಮ್ ಆದ್ಮಿ ಪಕ್ಷಕ್ಕೆ ನಾಟಕ ಮಾಡುವ ಹಳೆಯ ಅಭ್ಯಾಸವಿದೆ, ಆದರೆ, ಗುಜರಾತ್‌ನಲ್ಲಿ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
"ಎಎಪಿಗೆ ನಾಟಕ ಮಾಡುವುದು ಹಳೆಯ ಅಭ್ಯಾಸ. ಗುಜರಾತ್‌ನ ಜನರು ಬುದ್ಧಿವಂತರು, ಆಪ್ ನಾಟಕ ಮಾಡುತ್ತಿದೆ ಎಂಬುದು ಅವರಿಗೆ ಗೊತ್ತು. ಗೋಪಾಲ್ ಇಟಾಲಿಯಾ ಯಾಕೆ ಇದನ್ನೆಲ್ಲ ಮಾಡುತ್ತಿದ್ದಾರೆ ಎಂಬುದು ಅವರಿಗೂ ತಿಳಿದಿದೆ. ಗುಜರಾತಿಗಳು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಇದ್ದಾರೆ, ಭವಿಷ್ಯದಲ್ಲಿಯೂ ಇರುತ್ತಾರೆ, ಅವರು ಎಷ್ಟೇ ನಾಟಕ ಮಾಡಿದರೂ ಗುಜರಾತ್‌ನಲ್ಲಿ ಪ್ರಯೋಜನವಾಗುವುದಿಲ್ಲ. ಅದರ ಲಾಭ ದೆಹಲಿಯಲ್ಲಿ ಅವರಿಗೆ ಸಿಕ್ಕಿತು. 2014ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಆತಂಕವಿದೆ ಎಂದು ಎಎಪಿ ಹೇಳಿತ್ತು," ಎಂದು ಸಿಟಿ ರವಿ ಉಲ್ಲೇಖಿಸಿದರು.

ಆಪ್ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ವಿಡಿಯೋ ಸಂದೇಶ:
ಗುಜರಾತ್ ಆಪ್ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಇತ್ತೀಚಿನ ವೀಡಿಯೋ ವೈರಲ್ ಆಗಿದ್ದು, ಶೋಷಣೆ ಕೇಂದ್ರಗಳಾಗಿರುವ ದೇವಸ್ಥಾನಗಳು ಅಥವಾ 'ಕಥಾಸ್'ಗಳಿಗೆ ಭೇಟಿ ನೀಡದಂತೆ ಮಹಿಳೆಯರಲ್ಲಿ ಕೇಳಿಕೊಂಡಿದ್ದರು. ಇದಕ್ಕೂ ಪೂರ್ವದಲ್ಲಿ ಬಿಡುಗಡೆಗೊಳಿಸಿದ್ದ ಮತ್ತೊಂದು ವಿಡಿಯೋದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯೊಬ್ಬ ಜಾತಿವಾದಿ ಎಂದು ಟೀಕೆ ಮಾಡಿದ್ದರು. ಇಟಾಲಿಯಾ ಹೇಳಿಕೆಗಳು ಗುಜರಾತ್ ಸಮಾಜದ ಪ್ರತಿಯೊಂದು ವರ್ಗದಲ್ಲಿ ಕೋಪವನ್ನು ಹುಟ್ಟುಹಾಕಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಹೇಳಿದರು. ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಕಚೇರಿಯ ಹೊರಗೆ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ರಾಜಕೀಯ ಬೆಳವಣಿಗೆ ಬಗ್ಗೆ ಬಿಜೆಪಿಯ ಅಮಿತ್ ಮಾಳವಿಯಾ ಹಲವು ಪ್ರಶ್ನೆಗಳನ್ನು ಎತ್ತಿದರು.
ಬಿಜೆಪಿಯ ಅಮಿತ್ ಮಾಳವಿಯಾ ಪ್ರಶ್ನೆಗಳೇನು?:
"ಇಟಾಲಿಯಾ ಹೇಳಿಕೆಗಳಿಗೆ ಸಂಬಂಧಿಸಿದಂತೆ ಎನ್‌ಸಿಡಬ್ಲ್ಯು ಸಮನ್ಸ್ ನೀಡಿದಾಗ ಅವರು ತನ್ನ ಬೆಂಬಲಿಗರೊಂದಿಗೆ ಏಕೆ ಕಚೇರಿಗೆ ತೆರಳಿದರು ಹಾಗೂ ಏಕೆ ಅವ್ಯವಸ್ಥೆಯನ್ನು ಸೃಷ್ಟಿಸಿದರು. ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಾಳವೀಯಾ, ಗುಜರಾತ್‌ನ ಸಮಾಜದ ಪ್ರತಿಯೊಂದು ವರ್ಗವು ತಮ್ಮ ಮಹಿಳೆಯರ ಬಗ್ಗೆ ಗೌರವವನ್ನು ಹೊಂದಿದೆ. ಇಟಾಲಿಯಾ ಮಾಡಿರುವ ಅವಹೇಳನಕಾರಿ ಹೇಳಿಕೆಗಳಿಂದ ಸಮಾಜದ ಪ್ರತಿಯೊಂದು ವರ್ಗದಲ್ಲೂ ಕೋಪವಿದೆ," ಎಂದು ಮಾಳವಿಯಾ ಹೇಳಿದ್ದಾರೆ.
ಗೋಪಾಲ್ ಇಟಾಲಿಯಾರನ್ನು ಬಂಧಿಸಿದ್ದ ದೆಹಲಿ ಪೊಲೀಸ್:
ಗುರುವಾರ ಮುಂಜಾನೆ, ಎಎಪಿ ಗುಜರಾತ್ ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರನ್ನು ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಕಚೇರಿಯಿಂದ ಬಂಧಿಸಿದ್ದರು. ವಿವಾದಾತ್ಮಕ ವೀಡಿಯೊದ ಕುರಿತು ಎನ್‌ಸಿಡಬ್ಲ್ಯೂ ಮುಖ್ಯಸ್ಥರು ಇಟಾಲಿಯಾ ಅನ್ನು ಕರೆಸಿದರು, ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆಂದು ಹೇಳಲಾಗಿದೆ.
ಇಟಾಲಿಯಾ ಹೇಳಿಕೆಗೆ ಸಂಬಿತ್ ಪಾತ್ರಾ ಕೆಂಡ:
ಆಪ್ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷದ ನಾಯಕ ಸಂಬಿತ್ ಪಾತ್ರಾ ಖಂಡಿಸಿದ್ದಾರೆ. "ಪ್ರಧಾನಿ ಅನ್ನು ಕೀಳು ವ್ಯಕ್ತಿ ಎಂದು ಕರೆಯುವುದು ದೇಶದ ಪ್ರಜಾಸತ್ತಾತ್ಮಕ ನಿಯಮಗಳಿಗೆ ವಿರುದ್ಧವಾಗಿದೆ; ಇದು ದೇಶಕ್ಕೆ ಅವಮಾನವಾಗಿದೆ. ಅದು ಯಾವುದೇ ಜಾತಿಯಾಗಿರಲಿ ಅಥವಾ ಯಾವುದೇ ಧರ್ಮವಾಗಿರಲಿ, ಯಾವುದೇ ವ್ಯಕ್ತಿ ಕೀಳಾಗಿರಲು ಸಾಧ್ಯವಿಲ್ಲ," ಎಂದು ಪಾತ್ರಾ ಹೇಳಿದ್ದಾರೆ.
"ಹಿಂದುಳಿದ ವರ್ಗದಿಂದ ಬಂದ, ಬಡ ಮತ್ತು ಸಾಮಾನ್ಯ ಕುಟುಂಬದಿಂದ ಬಂದ ಒಬಿಸಿ ಪ್ರಧಾನಿಯನ್ನು ಪದೇ ಪದೇ ಕೀಳಾಗಿ ಕರೆಯುತ್ತಾರೆ, ಇದೇನು ನಿಂದನೆ? ಆಮ್ ಆದ್ಮಿ ಪಕ್ಷವು ಹಿಂದುಳಿದ ವರ್ಗದ ಜನರನ್ನು ಕೀಳು ಎಂದು ಕರೆಯಲು ಬಯಸುತ್ತದೆಯೇ? ಸಾಮಾನ್ಯ ಬಡ ಕುಟುಂಬ ಮತ್ತು ಪ್ರಧಾನಿಯಾಗುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಕೀಳು ಅಲ್ಲ, ಅವರ ಹೇಳಿಕೆಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದೆ," ಎಂದು ಪಾತ್ರಾ ಹೇಳಿದರು.
"ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಭಾರತದ ಸ್ವರೂಪವನ್ನು ಬದಲಾಯಿಸಲು ಬಂದಿದ್ದೇವೆ ಎಂದು ಹೇಳಿದವರು. ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಭಾವಿ ಮತ್ತು ಶ್ರಮಜೀವಿ ಪ್ರಧಾನಿಯನ್ನು ಕೀಳು ಎಂದು ಕರೆಯುತ್ತಿದ್ದರೆ, ಎಲ್ಲೋ ಇದು ಆಮ್ ಆದ್ಮಿ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.












Click it and Unblock the Notifications