ಜೂ. 30ರಿಂದ ಉತ್ತರ ಪ್ರದೇಶದ ಶಾಲೆಗಳಲ್ಲಿ ಬಿಸಿಯೂಟಕ್ಕೆ ಆಧಾರ್ ಕಡ್ಡಾಯ
ಉತ್ತರ ಪ್ರದೇಶ, ಜೂನ್ 02 : ಇಲ್ಲಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ವಿತರಿಸಲು ಜೂನ್ 30ರಿಂದ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.
ಈ ಬಗ್ಗೆ ಮೀರತ್ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಇಕ್ಬಾಲ್ ಸಿಂಗ್ ತಿಳಿಸಿದ್ದಾರೆ. ಎಲ್ಲಾ ಮಕ್ಕಳು ಆಧಾರ್ ಕಾರ್ಡ್ ಹೊಂದಲು ಆಯಾ ಶಾಲಾಡಳಿತಗಳು ಪ್ರಯತ್ನಿಸುತ್ತೀವೆ ಎಂದು ಹೇಳಿದರು.[ಬಿಸಿಯೂಟದ ಮಕ್ಕಳು ಆಧಾರ್ ಕಾರ್ಡ್ ಹೊಂದಿರಲೇಬೇಕಂತೆ!]

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹೊರಡಿಸಿರುವ ಆದೇಶದಂತೆ, ಜೂನ್ 30ರೊಳಗೆ ದೇಶದಲ್ಲಿ ಮಧ್ಯಾಹ್ನದ ಬಿಸಿಯೂಟ ಮಾಡುತ್ತಿರುವ ಎಲ್ಲ ಮಕ್ಕಳು, ಅವರಿಗೆ ಆಹಾರ ತಯಾರಿಸುವ, ನೀಡುವ ಸಿಬ್ಬಂದಿ ವರ್ಗದವರು ಕೂಡ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ.












Click it and Unblock the Notifications