ಅಪನಗದೀಕರಣಕ್ಕೆ 1 ವರ್ಷ, ನ.8ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ
Recommended Video

ನವದೆಹಲಿ, ಅಕ್ಟೋಬರ್ 24: ನವೆಂಬರ್ 8ಕ್ಕೆ ದೇಶದಲ್ಲಿ ಅಪನಗದೀಕರಣ ಜಾರಿಯಾಗಿ 1 ವರ್ಷ ಪೂರ್ಣವಾಗಲಿದೆ. ಈ ಹಿನ್ನಲೆಯಲ್ಲಿ ವಿಪಕ್ಷಗಳು ಸಂಘಟಿತವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಸಜ್ಜಾಗಿವೆ.
ಕಾಂಗ್ರೆಸ್, ಎಡಪಕ್ಷಗಳು, ಬಿಎಸ್ಪಿ, ಟಿಎಂಸಿ, ಡಿಎಂಕೆ, ಜೆಡಿಯುನ ಶರದ್ ಯಾದವ್ ಬಣಗಳು ಒಟ್ಟಾಗಿ ಇಂದು ನವದೆಹಲಿಯಲ್ಲಿ ಸಭೆ ನಡೆಸಿವೆ. ಸಭೆ ನಡೆಸಿದ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಅಝಾದ್, ಇದು ಪ್ರಾಥಮಿಕ ಸಭೆಯಷ್ಟೆ. ಹಂದಿನೆಂಟೂ ವಿರೋಧ ಪಕ್ಷಗಳನ್ನು ಸಂಪರ್ಕಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

"ಹಣಕಾಸು ಕ್ಷೇತ್ರದ ಹಾಗೂ ಉದ್ಯೋಗ ಮಾರುಕಟ್ಟೆ ಮೇಲೆ ಅಪನಗದೀಕರಣ ಬೀರಿರುವ ವ್ಯತಿರಿಕ್ತ ಪರಿಣಾಮಗಳ ಹಿನ್ನಲೆಯಲ್ಲಿ ನಾವು ಪ್ರತಿಭಟನೆ ನಡೆಸಲಿದ್ದೇವೆ. ಈ ಸಂಬಂಧ ಅಧಿವೇಶನಕ್ಕೂ ಮೊದಲು ಮತ್ತೊಮ್ಮೆ ಸಭೆ ಸೇರಲಿದ್ದೇವೆ," ಎಂದು ಟಿಎಂಸಿ ನಾಯಕ ಡೆರೆಕ್ ಓ'ಬ್ರಿಯಾನ್ ಹೇಳಿದ್ದಾರೆ.
ಸಭೆಯಲ್ಲಿ ಶರದ್ ಯಾದವ್, ಸತೀಶ್ ಚಂದ್ರ ಮಿಶ್ರಾ, ಕಣಿಮೋಳಿ ಮತ್ತು ಡಿ ರಾಜ ಸಭೆಯಲ್ಲಿದ್ದ ಪ್ರಮುಖರಾಗಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಸಭೆಗೆ ಗೈರಾಗಿದ್ದರು.












Click it and Unblock the Notifications